ಆಸ್ಟ್ರೇಲಿಯನ್ ಓಪನ್'ನ ನೂತನ ಸಾಮ್ರಾಟ ರೋಜರ್ ಫೆಡರರ್

Published : Jan 29, 2017, 07:29 AM ISTUpdated : Apr 11, 2018, 01:10 PM IST
ಆಸ್ಟ್ರೇಲಿಯನ್ ಓಪನ್'ನ ನೂತನ ಸಾಮ್ರಾಟ ರೋಜರ್ ಫೆಡರರ್

ಸಾರಾಂಶ

ಪ್ರಶಸ್ತಿಗಾಗಿ ಮದಗಜಗಳಂತೆ ಕಾದಾಡಿದ ಫೆಡರರ್ ಹಾಗೂ ನಡಾಲ್ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನೋರಂಜನೆಯನ್ನು ನೀಡಿದರು.

ಮೆಲ್ಬೋರ್ನ್(ಜ.29): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಆಸ್ಟ್ರೇಲಿಯನ್ ಓಪನ್ ಫೈನಲ್ ಪಂದ್ಯದಲ್ಲಿ ಕೊನೆಗೂ ಟೆನಿಸ್ ದಂತಕಥೆ ರೋಜರ್ ಫೆಡರರ್ ಜಯದ ನಗೆ ಬೀರಿದ್ದಾರೆ.

ಮೆಲ್ಬೋರ್ನ್ ಪಾರ್ಕ್'ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕದನದಲ್ಲಿ ಸ್ಪೇನ್'ನ ರಫೇಲ್ ನಡಾಲ್ ಅವರನ್ನು 6-4, 3-6, 6-1, 3-6, 6-3 ಸೆಟ್'ಗಳಲ್ಲಿ ಮಣಿಸುವ ಮೂಲಕ 18ನೇ ಗ್ರಾನ್'ಸ್ಲಾಮ್ ಎತ್ತಿಹಿಡಿಯುವಲ್ಲಿ ಸ್ವಿಸ್ ಆಟಗಾರ ಯಶಸ್ವಿಯಾಗಿದ್ದಾರೆ.

ಪ್ರಶಸ್ತಿಗಾಗಿ ಮದಗಜಗಳಂತೆ ಕಾದಾಡಿದ ಫೆಡರರ್ ಹಾಗೂ ನಡಾಲ್ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನೋರಂಜನೆಯನ್ನು ನೀಡಿದರು.

ಮೊದಲ ಸೆಟ್'ನ್ನು 6-4 ಅಂತರದಲ್ಲಿ ಗೆದ್ದುಕೊಂಡ ಫೆಡರರ್'ಗೆ, ಎರಡನೇ ಸೆಟ್'ನಲ್ಲಿ ನಡಾಲ್ 3-6 ಅಂತರದಲ್ಲಿ ತಿರುಗೇಟು ನೀಡಿದರು. ಮತ್ತೆ ಮೂರನೇ ಸೆಟ್'ನಲ್ಲಿ ಪಟ್ಟುಬಿಡದಂತೆ ಕಾದಾಟ ನಡೆಸಿದ ಮಾಜಿ ನಂಬರ್ ಒನ್ ಆಟಗಾರ ಫೆಡರರ್, ಸ್ಪೇನ್ ಆಟಗಾರನಿಗೆ ತಿರುಗೇಟು ನೀಡಲು ಅವಕಾಶ ನೀಡದಂತೆ 6-1 ಅಂಕಗಳ ಮೂಲಕ ಕೈವಶ ಮಾಡಿಕೊಂಡರು. ಮತ್ತೆ ನಾಲ್ಕನೇ ಸೆಟ್ 6-3 ಅಂತರದಲ್ಲಿ ಕಿಂಗ್ ಆಫ್ ಕ್ಲೈ ಕೋರ್ಟ್ ಖ್ಯಾತಿ ನಡಾಲ್ ಪಾಲಯಿತು.

ಹೀಗಾಗಿ ಐದನೇ ಹಾಗೂ ಕೊನೆಯ ಸೆಟ್ ಗೆಲ್ಲಲು ಉಭಯ ಆಟಗಾರರು ಬಿರುಸಿನ ಕಾದಾಟ ನಡೆಸಿದರಾದರೂ ಬಲಿಷ್ಟ ಸರ್ವ್, ಹಾಗೂ ಬ್ಯಾಕ್'ಹ್ಯಾಂಡ್ ರಿಟರ್ನ್ಸ್ ಮೂಲಕ ನಡಾಲ್ ಅವರನ್ನು ತಬ್ಬಿಬ್ಬುಗೊಳಿಸಿದ ಫೆಡರರ್ ಅಂತಿಮವಾಗಿ ಜಯದ ನಿಟ್ಟುಸಿರು ಬಿಟ್ಟರು. ಈ ಮೂಲಕ ಆಸ್ಟ್ರೇಲಿನ್ ಓಪನ್'ನಲ್ಲಿ ಏಳನೇ ಹಾಗೂ ವೃತ್ತಿ ಜೀವನದಲ್ಲಿ 18ನೇ ಗ್ರಾನ್'ಸ್ಲಾಮ್ ಗೆಲ್ಲುವಲ್ಲಿ ಫೆಡರರ್ ಯಶಸ್ವಿಯಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?