
ಮೆಲ್ಬೋರ್ನ್(ಜ. 29): ಏಳನೇ ಗ್ರ್ಯಾನ್'ಸ್ಲಾಂ ಪ್ರಶಸ್ತಿ ಗೆಲ್ಲುವ ಸಾನಿಯಾ ಮಿರ್ಜಾ ಅವರ ಪ್ರಯತ್ನ ಕೈಗೂಡಲಿಲ್ಲ. ಇಂದು ನಡೆದ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್'ನಲ್ಲಿ ಸಾನಿಯಾ ಮಿರ್ಜಾ ಮತ್ತು ಇವಾನ್ ಡೋಡಿಗ್ ಜೋಡಿ 4-6, 4-6 ನೇರ ಸೆಟ್'ಗಳಿಂದ ಅಬೀಗೇಲ್ ಸ್ಪೇರ್ಸ್ ಮತ್ತು ಜುವಾನ್ ಸೆಬಾಸ್ಟಿಯನ್ ಕೆಬಾಲ್ ವಿರುದ್ಧ ಸೋಲನುಭವಿಸಿದರು.
ಶ್ರೇಯಾಂಕರಹಿತ ಜೋಡಿ ಎನಿಸಿದ್ದ ಅಬೀಗೇಲ್ ಸ್ಪೇರ್ಸ್ ಮತ್ತು ಜುವಾನ್ ಸೆಬಾಸ್ಟಿಯನ್ ವಿರುದ್ಧ ಸಾನಿಯಾ-ಡೋಡಿಗ್ ಸುಲಭವಾಗಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಸ್ಪೇರ್ಸ್-ಸೆಬಾಸ್ಟಿಯನ್ ಜೋಡಿ ಭರ್ಜರಿ ಕಂಬ್ಯಾಕ್ ಮಾಡಿ ಗ್ರ್ಯಾನ್'ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿತು.
ಸಾನಿಯಾ ಮಿರ್ಜಾ ಅವರು ಈ ಪಂದ್ಯ ಗೆದ್ದಿದ್ದರೆ ಅವರಿಗೆ ಸತತ ಮೂರನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿರುತ್ತಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.