(ವಿಡಿಯೋ)ಅಂದು ಮೈದಾನದಲ್ಲಿ ಬ್ಯಾಟಿಂಗ್ ಕಿಂಗ್: ಇಂದು ಯೂ ಟ್ಯೂಬ್ನಲ್ಲಿ ಕಾಮಿಡಿ ಕಿಂಗ್

Published : Jan 28, 2017, 06:05 PM ISTUpdated : Apr 11, 2018, 12:48 PM IST
(ವಿಡಿಯೋ)ಅಂದು ಮೈದಾನದಲ್ಲಿ ಬ್ಯಾಟಿಂಗ್ ಕಿಂಗ್: ಇಂದು ಯೂ ಟ್ಯೂಬ್ನಲ್ಲಿ ಕಾಮಿಡಿ ಕಿಂಗ್

ಸಾರಾಂಶ

ವೀರೇಂದ್ರ ಸೆಹ್ವಾಗ್ ಫೀಲ್ಡ್​'ನಲ್ಲಿ ಹೇಗೆ ಆರ್ಭಟಿಸುತ್ತಾರೋ ಆಫ್ ಫೀಲ್ಡ್'​ನಲ್ಲಿ ಅಷ್ಟೇ ಕೂಲ್ ಆಗಿ ಇರ್ತಾರೆ. ರಿಟೈರ್ಡ್​ ಆದ್ಮೇಲೆ ಟ್ವಿಟರ್​ನಲ್ಲಿ ಸದ್ದು ಮಾಡ್ತಿದ್ದ ವೀರೂ ಈಗ ಯೂಟ್ಯೂಬ್​ನಲ್ಲಿ ಸದ್ದು ಮಾಡ್ತಿದ್ದಾರೆ. ಅಲ್ಲಿ ಕಾಮಿಡಿ ಕಿಂಗ್ ಆಗಿದ್ದಾರೆ.

ಮುಂಬೈ(ಜ.29): ವೀರೇಂದ್ರ ಸೆಹ್ವಾಗ್ ಫೀಲ್ಡ್​'ನಲ್ಲಿ ಹೇಗೆ ಆರ್ಭಟಿಸುತ್ತಾರೋ ಆಫ್ ಫೀಲ್ಡ್'​ನಲ್ಲಿ ಅಷ್ಟೇ ಕೂಲ್ ಆಗಿ ಇರ್ತಾರೆ. ರಿಟೈರ್ಡ್​ ಆದ್ಮೇಲೆ ಟ್ವಿಟರ್​ನಲ್ಲಿ ಸದ್ದು ಮಾಡ್ತಿದ್ದ ವೀರೂ ಈಗ ಯೂಟ್ಯೂಬ್​ನಲ್ಲಿ ಸದ್ದು ಮಾಡ್ತಿದ್ದಾರೆ. ಅಲ್ಲಿ ಕಾಮಿಡಿ ಕಿಂಗ್ ಆಗಿದ್ದಾರೆ.

ಸ್ಪರ್ಧಾತ್ಮಕ ಕ್ರಿಕೆಟ್​ಗೆ ವಿದಾಯ ಹೇಳುವವರೆಗೂ ಜಗತ್ತಿನ ವಿಸ್ಫೋಟಕ ಬ್ಯಾಟ್ಸ್​​​'ಮನ್​'ಗಳ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್​'ಗೆ ಅಗ್ರಸ್ಥಾನ. ವಿಶ್ವ ಶ್ರೇಷ್ಠ ಬೌಲರ್​'ಗಳ ಬೆವರಿಳಿಸಿದ್ದರು. ಟೆಸ್ಟ್ ಮ್ಯಾಚ್​​​'ನಲ್ಲಿ ಎರಡು ಬಾರಿ ತ್ರಿಶತಕ ಬಾರಿಸಿರುವ ಏಕಮಾತ್ರ ಭಾರತೀಯ. ಸೆಹ್ವಾಗ್ ಎಂದರೆ ಪ್ರೇಕ್ಷಕರಿಗೂ ಫೇವರಿಟ್. ಯಾಕಂದ್ರೆ ಪ್ರತಿ ಬಾರಿ ತನ್ನ ಆಟದಿಂದ ವೀಕ್ಷಕರನ್ನು ರಂಜಿಸುತ್ತಿದ್ದರು, ಅಷ್ಟೇ ರೋಮಾಂಚನಗೊಳಿಸುತ್ತಿದ್ದರು.

ವೀರೂ ಫನ್ನಿ ಮ್ಯಾಚ್​ ಕಾಮೆಂಟ್ರಿ

ತನ್ನ ಆಟದ ಮೂಲಕ ಪ್ರೇಕ್ಷಕರ ಮನಗೆದ್ದ ವೀರೂ, ನಿವೃತ್ತಿಯ ಬಳಿಕ ಕಾಮೆಂಟೇಟರ್ ಆಗಿ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಿದರು. ಆನಂತರ ಟ್ವೀಟರ್ ಮೂಲಕ ಹಾಸ್ಯ ಚಟಾಕಿ ಹಾರಿಸಿ ಎಲ್ಲರ ಮನ ಗೆದ್ದಿದ್ದರು. ವೀರೂರ ಹಾಸ್ಯ ಪ್ರಜ್ಞೆಯನ್ನು ಗಮನಿಸಿದ ವಿಯೂ ಎಂಬ ವೆಬ್​​ ಸರ್ವಿಸ್ ಕಂಪನಿ, ವೀರೂರೊಂದಿಗೆ ​​​​ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಸೆಹ್ವಾಗ್​​ ಪ್ರತಿನಿತ್ಯ ನಡೆಯುವ ಹಾಗೂ ಹೋಗುಗಳ ಕುರಿತು ಹಾಸ್ಯ ರೂಪದಲ್ಲಿ ವಿಡಿಯೋದಲ್ಲಿ ನಟಿಸಬೇಕು, ಅದರಂತೆ ನಟಿಸಿದ್ದಾರೆ ಕೂಡ.

ವೀರೂ ಜ್ಞಾನ್​'ನಲ್ಲಿ ಭರ್ಜರಿ ಕಾಮಿಡಿ

ಈಗ ಸೆಹ್ವಾಗ್, ಯೂ ಟ್ಯೂಬ್'​ನಲ್ಲಿ ಸದ್ದು ಮಾಡುತ್ತಿದ್ದಾರೆ. ‘ವೀರೂ ಜ್ಞಾನ್' ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಮೂರು ಒಂಡೇ ಮ್ಯಾಚ್ ಬಗ್ಗೆ ವೀರೂ ಕಾಮೆಂಟ್ರಿ ಕೊಟ್ಟಿದ್ದಾರೆ ನೋಡಿ.

ಈ ವಿಡಿಯೋದ ವಿಶೇಷತೆ ಎಂದರೆ ಇಲ್ಲೂ ವೀರೂ ಹಾಸ್ಯ ಮಾಡುವ ತನ್ನ ಪ್ರವೃತ್ತಿಯನ್ನು ಮುಂದುವರೆಸಿ, ತನ್ನದೇ ಗುರುತನ್ನು ಮೂಡಿಸಿರುವ. ಈ ಹಾಸ್ಯಾಸ್ಪದ ವಿಡಿಯೋದಲ್ಲಿ ವೀರೂ ‘ಡಬಲ್ ರೋಲ್​'ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿರುವ ಮೊದಲ ಪಾತ್ರದಲ್ಲಿ ಗಂಭೀರವಾದ ಸೆಹ್ವಾಗ್ ಕಂಡು ಬಂದರೆ, ಎರಡನೇ ಪಾತ್ರದಲ್ಲಿ 'ಕಾಮಿಟಿ ಕಿಂಗ್' ಆಗಿ ಕಾಣಿಸಿಕೊಂಡಿದ್ದಾರೆ. ಗಂಭೀರ ಪಾತ್ರದ ನಡುವೆ ಆಗೊಮ್ಮೆ ಈಗೊಮ್ಮೆ ಹರಿಯಾಣ ಭಾಷೆಯಲ್ಲಿ ಮಾತನಾಡಿ ವೀಕ್ಷಕರಿಗೆ ತನ್ನ ಮನದ ಮಾತನ್ನು ಹೇಳಿದ್ದಾರೆ.

ವೀರೂನ ಈ ‘ವೀರೂ ಜ್ಞಾನ್' ವಿಡಿಯೋ ಫೇಮಸ್ ಆಗಿದೆ. ಮಾಜಿ ಟೀಮ್​'ಮೇಟ್ಸ್ ಸೆಹ್ವಾಗ್​'ನನ್ನು ಹಾಡಿ ಹೊಗಳಿ, ಈ ವಿಡಿಯೋವನ್ನು ಜಬರ್'​ದಸ್ತ್ ಆಗಿ ಶೇರ್ ಮಾಡಿದ್ದಾರೆ. ಅಲ್ಲದೆ ತಮ್ಮ ನಗುವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಭಾರತ-ಇಂಗ್ಲೆಂಡ್ ಪಂದ್ಯಗಳ ಫನ್ನಿ ಮ್ಯಾಚ್ ಅನಾಲಿಸಿಸ್'ನ್ನು ವೀಕ್ಷಿಸಿ ಅಂತ ಕೋಚ್ ಅನಿಲ್ ಕುಂಬ್ಳೆ ಟ್ವೀಸಿದ್ದಾರೆ.

ಒಟ್ನಲ್ಲಿ ಇಷ್ಟು ದಿನ ಟ್ವಿಟರ್​'ನಲ್ಲಿ ತನ್ನ ಹಾಸ್ಯ ಟ್ವಿಟ್​ಗಳ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸೆಹ್ವಾಗ್, ಈಗ ಯೂ ಟ್ಯೂಬ್​'ನಲ್ಲಿ ರಂಜಿಸುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿ ಬಳಗವನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?