ಮೈಸೂ​ರಲ್ಲಿ ಭಾರತ-ಆಫ್ರಿಕಾ ‘ಎ’ ಟೆಸ್ಟ್‌!

Published : Sep 17, 2019, 10:33 AM IST
ಮೈಸೂ​ರಲ್ಲಿ ಭಾರತ-ಆಫ್ರಿಕಾ ‘ಎ’ ಟೆಸ್ಟ್‌!

ಸಾರಾಂಶ

ಮೈಸೂರಿನಲ್ಲಿ ಭಾರತ ಎ ಹಾಗೂ ಸೌತ್ ಆಫ್ರಿಕಾ ಎ ನಡುವಿನ  ಟೆಸ್ಟ್ ಪಂದ್ಯ ನಡೆಯಲಿದೆ. ರಾಜ್ಯದ ಕರುಣ್ ನಾಯರ್, ಕೆ.ಗೌತಮ್ ತಂಡದಲ್ಲಿದ್ದಾರೆ. ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಶುಭ್‌ಮನ್ ಗಿಲ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಮೈಸೂರು(ಸೆ.17): ಮಂಗಳವಾರದಿಂದ (ಸೆ.17) ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ 2ನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯಲಿದೆ. ಮೊದಲ ಪಂದ್ಯ​ದಲ್ಲಿ ಭಾರತ ‘ಎ’ 7 ವಿಕೆಟ್‌ ಜಯ ಸಾಧಿಸಿತ್ತು. 

ಇದನ್ನೂ ಓದಿ: ರಾಹುಲ್‌ಗೆ ಕೊಕ್, ಗಿಲ್‌ಗೆ ಖುಲಾಯಿಸಿತು ಲಕ್; ಟ್ವಿಟರ್‌ನಲ್ಲಿ ಭರ್ಜರಿ ರೆಸ್ಪಾನ್ಸ್!

2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿ​ರುವ ಭಾರತ, ಸರ​ಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರು​ದ್ಧದ ಟೆಸ್ಟ್‌ ಸರ​ಣಿಗೆ ಭಾರತ ತಂಡ​ದಲ್ಲಿ ಸ್ಥಾನ ಪಡೆದ ಶುಭ್‌ಮನ್‌ ಗಿಲ್‌, ಮೊದಲ ಪಂದ್ಯ​ದ​ಲ್ಲಿ ಭಾರತ ‘ಎ’ ತಂಡ​ವನ್ನು ಮುನ್ನ​ಡೆ​ಸಿದ್ದರು. ಈ ಪಂದ್ಯ​ದಲ್ಲಿ ವೃದ್ಧಿ​ಮಾನ್‌ ಸಾಹ ತಂಡ​ದ ನಾಯ​ಕ​ರಾ​ಗಿ​ದ್ದಾರೆ. 

ಇದನ್ನೂ ಓದಿ: ಶುಭ್‌ಮನ್ ಗಿಲ್ ಯಶಸ್ಸಿನ ಹಿಂದೆ ಯುವಿ ’ಕೈವಾಡ’..!

ಮೊದಲ ಪಂದ್ಯ​ದಲ್ಲಿ 90 ರನ್‌ ಗಳಿ​ಸಿದ್ದ ಗಿಲ್‌, ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಆಡುವ ಹನ್ನೊಂದ​ರಲ್ಲಿ ಸ್ಥಾನ ಪಡೆ​ಯುವ ನಿರೀಕ್ಷೆಯಲ್ಲಿ​ದ್ದು, ಬ್ಯಾಟಿಂಗ್‌ ಲಯ ಕಾಯ್ದು​ಕೊ​ಳ್ಳಲು ಎದು​ರು ನೋಡು​ತ್ತಿ​ದ್ದಾರೆ. ರಾಜ್ಯದ ಕರುಣ್‌ ನಾಯರ್‌ ಹಾಗೂ ಕೆ.ಗೌ​ತಮ್‌ ಸಹ ತಂಡದ​ಲ್ಲಿದ್ದು, ಆಕ​ರ್ಷಕ ಪ್ರದ​ರ್ಶ​ನದ ಮೂಲಕ ಆಯ್ಕೆಗಾರರ ಗಮನ ಸೆಳೆ​ಯುವ ವಿಶ್ವಾಸದಲ್ಲಿ​ದ್ದಾರೆ. ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?