
ಚಿತ್ತಗಾಂಗ್[ಸೆ.07]: ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಆಫ್ಘಾನಿಸ್ತಾನ ಮೇಲುಗೈ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 342 ರನ್ ಗಳಿಸಿದ್ದ ಆಫ್ಘನ್, 2ನೇ ದಿನದಂತ್ಯಕ್ಕೆ ಬಾಂಗ್ಲಾವನ್ನು 8 ವಿಕೆಟ್‌ಗೆ 194 ರನ್‌ಗಳಿಗೆ ನಿಯಂತ್ರಿಸಿತ್ತು. ಈ ಮೂಲಕ ಆತಿಥೇಯರು ಇನ್ನೂ 148 ರನ್ ಹಿನ್ನಡೆ ಅನುಭವಿಸಿದ್ದರು. ಇನ್ನು ಮೂರನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತನ್ನ ಖಾತೆಗೆ 11 ರನ್ ಸೇರಿಸುವಷ್ಟರಲ್ಲಿ ಇನ್ನೆರಡು ವಿಕೆಟ್ ಕಳೆದುಕೊಂಡಿತು.
15 ವರ್ಷದ ದಾಖಲೆ ಅಳಿಸಿ ಹಾಕಲು ಸಜ್ಜಾದ ರಶೀದ್ ಖಾನ್!
ಅಸ್ಗರ್ ಆಫ್ಘನ್ 92, ನಾಯಕ ರಶೀದ್ ಖಾನ್ 51 ರನ್ ಗಳಿಸಿ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ರಶೀದ್ 5 ವಿಕೆಟ್ ಕಿತ್ತು ಬೌಲಿಂಗ್‌ನಲ್ಲೂ ಮಿಂಚಿದರು.
ರಶೀದ್ ಖಾನ್ ಆಫ್ಘನ್ ಕ್ರಿಕೆಟ್‌ನ ನೂತನ ನಾಯಕ
ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ಆಫ್ಘಾನಿಸ್ತಾನಕ್ಕೆ ಶಕೀಬ್ ಅಲ್ ಹಸನ್ ಆಘಾತ ನೀಡಿದ್ದಾರೆ. ಲಂಚ್ ಬ್ರೇಕ್ ವೇಳೆಗೆ ಆಫ್ಘಾನ್ 3 ವಿಕೆಟ್ ಕಳೆದುಕೊಂಡು 56 ರನ್ ಬಾರಿಸಿದ್ದು, ಒಟ್ಟಾರೆ 193 ರನ್’ಗಳ ಮುನ್ನಡೆ ಸಾಧಿಸಿದೆ. ಶಕೀಬ್ 2 ವಿಕೆಟ್ ಪಡೆದಿದ್ದಾರೆ.
ಸ್ಕೋರ್: ಆಫ್ಘನ್ 342,
ಬಾಂಗ್ಲಾ 205
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.