
ನವದೆಹಲಿ[ಅ.08]: ಪ್ರಸ್ತುತ ಕ್ರಿಕೆಟಿಗರಲ್ಲಿ ರಶೀದ್ ಖಾನ್ ಜಗತ್ತಿನ ಶ್ರೇಷ್ಠ ಬೌಲರ್ ಎಂದು ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ಕಟ್ಟಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ. ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್’ನಲ್ಲಿ ನಂಗರ್’ಹಾರ್ ಲೆಪಾರ್ಡ್ಸ್ ತಂಡದ ನಾಯಕರಾಗಿರುವ ಕಟ್ಟಿಂಗ್ಸ್ ಆಫ್ಘನ್ ಕ್ರಿಕೆಟ್ ತಂಡ ಉತ್ತಮ ಸ್ಥಿತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ಏಷ್ಯಾಕಪ್ 2018: ರಶೀದ್’ಗೆ ದಂಡದ ಬರೆ ಹಾಕಿದ ಐಸಿಸಿ..!
ಆಫ್ಘನ್ ಕ್ರಿಕೆಟ್ ತಂಡ ಉತ್ತಮ ಸ್ಥಿತಿಯಲ್ಲಿದ್ದು, ಇಲ್ಲಿಂದ ಪ್ರತಿಭಾನ್ವಿತ ಕ್ರಿಕೆಟಿಗರು ವಿಶ್ವಕ್ರಿಕೆಟ್’ನಲ್ಲಿ ಮಿಂಚುತ್ತಿದ್ದಾರೆ. ಕೆಲವೊಬ್ಬರು ಸ್ಪಿನ್ನರ್’ಗಳು ನಮ್ಮ ತಂಡದಲ್ಲೂ ಇದ್ದಾರೆ. ಐಪಿಎಲ್’ನಲ್ಲಿ ಸಂಚಲನ ಮೂಡಿಸಿದ ರಶೀದ್ ಖಾನ್ ಪ್ರಸ್ತುತ ಜಗತ್ತಿನ ಶ್ರೇಷ್ಠ ಬೌಲರ್ ಎಂದು ಕಟ್ಟಿಂಗ್ಸ್ ಹೇಳಿದ್ದಾರೆ.
ಇದನ್ನು ಓದಿ: ಗೆಲುವು ತಪ್ಪಿಸಿದರೂ ಭಾರತೀಯರ ಹೃದಯ ಗೆದ್ದ ರಶೀದ್ ಖಾನ್
ನಂಗರ್’ಹಾರ್ ಲೆಪಾರ್ಡ್ಸ್ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಕಟ್ಟಿಂಗ್ಸ್ ಎರಡು ಪಂದ್ಯಗಳಿಂದ 8 ವಿಕೆಟ್ ಕಬಳಿಸುವುದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.