ಕರ್ನಾಟಕ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಅನ್ನೋ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಪೂಜಾರ ಪರ ಕೋಚ್ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು(ಜ.29): ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧದ ಗೆಲುವು ಸಾಧಿಸಿದ ಸೌರಾಷ್ಟ್ರ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯ ಹಲವು ವಿವಾದಕ್ಕೂ ಕಾರಣವಾಗಿತ್ತು. ಪ್ರಮುಖವಾಗಿ ಸೌರಾಷ್ಟ್ರ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಔಟಾಗಿದ್ದರು ಕ್ರೀಡಾ ಸ್ಪೂರ್ತಿ ಮೆರೆಯಲಿಲ್ಲ. ಹೀಗಾಗಿ ಅಭಿಮಾನಿಗಳು ಚೀಟರ್ ಪೂಜಾರ ಎಂದು ಕರೆದಿದ್ದರು.
ಇದನ್ನೂ ಓದಿ: ಕ್ರೀಡಾ ಸ್ಪೂರ್ತಿ ಮರೆತ ಜಂಟ್ಲಮೆನ್- ಚೀಟರ್ ಪೂಜಾರ ಎಂದ ಫ್ಯಾನ್ಸ್!
undefined
ಎರಡು ಇನ್ನಿಂಗ್ಸ್‌ಗಳಲ್ಲಿ ಪೂಜಾರ ಕ್ರೀಡಾ ಸ್ಪೂರ್ತಿ ಮರೆತು ಆಡಿದ್ದಾರೆ. ಆದರೆ ಸೌರಾಷ್ಟ್ರ ಕೋಚ್ ಸಿತಾಂಶು ಕೋಟಕ್ ಸಮರ್ಥಿಕೊಂಡಿದ್ದಾರೆ. ಅಂಪೈರ್ ಔಟ್ ತೀರ್ಪು ನೀಡಿಲ್ಲ. ಅಷ್ಟಕ್ಕೂ ಕರ್ನಾಟಕ ಕ್ರಿಕೆಟಿಗರು ಔಟ್ ಇಲ್ಲದಕ್ಕೂ ಅಪೀಲ್ ಮಾಡಿದ್ದಾರೆ. ಕ್ರೀಡಾ ಸ್ಪೂರ್ತಿ ಇದ್ದರೆ ಕೇವಲ ಔಟ್ ಇದಕ್ಕೆ ಮಾತ್ರ ಅಪೀಲ್ ಮಾಡಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮಾದರಿ ಕ್ರಿಕೆಟಿಗ ಪೂಜಾರ ಮೇಲೆ ನಂಬಿಕೆ ಕಳೆದುಕೊಂಡ ಫ್ಯಾನ್ಸ್!
ನನ್ನ ಕರಿಯರ್‌ನಲ್ಲಿ ನಾನು 20 ರಿಂದ 30 ಬಾರಿ ಕೆಟ್ಟ ತೀರ್ಪಿಗೆ ಬಲಿಯಾಗಿದ್ದಾನೆ. ಯಾರೂ ಕೂಡ ನನ್ನನ್ನ ವಾಪಸ್ ಕರೆಯಿಸಿ ಬ್ಯಾಟಿಂಗ್ ಮಾಡಲು ಹೇಳಿಲ್ಲ. ಹೀಗಾಗಿ ಪೂಜಾರಗೆ ಚೀಟರ್ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.