2015ರ ವಿಶ್ವಕಪ್ ಟೂರ್ನಿ ಬಳಿಕ ಇಲ್ಲೀವರೆಗೆ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ? 2019ರ ವಿಶ್ವಕಪ್ ಟೂರ್ನಿಗೂ ಮುನ್ನ ಕಳೆದ 4 ವರ್ಷಗಳಲ್ಲಿ ಭಾರತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. 2015ರ ನಂತರ 4 ವರ್ಷಗಳಲ್ಲಿ ತಂಡದ ಜರ್ನಿ ಹೇಗಿತ್ತು? ಇಲ್ಲಿದೆ
ಬೇ ಓವಲ್(ಜ.29): ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಸರಣಿ ಗೆದ್ದು ಇದೀಗ ಕ್ಲೀನ್ ಸ್ವೀಪ್‌ನತ್ತ ಚಿತ್ತ ಹರಿಸಿದೆ. ಈ ಮೂಲಕ 2019ರ ವಿಶ್ವಕಪ್ ಟೂರ್ನಿ ಗೆಲ್ಲೋ ಫೇವರಿಟ್ ತಂಡ ಅನ್ನೋದನ್ನ ಸಾಬೀತು ಪಡಿಸಿದೆ . 2015ರ ವಿಶ್ವಕಪ್‌ನಿಂದ ಇಲ್ಲೀವರೆಗೆ ಟೀಂ ಇಂಡಿಯಾ ಪಯಣ ವಿಶ್ವಕಪ್ ಗೆಲುವನ್ನ ಸೂಚಿಸುತ್ತಿದೆ.
ಇದನ್ನೂ ಓದಿ: ಕಿವೀಸ್ ವಿರುದ್ಧದ 3ನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು- ಭಾರತಕ್ಕೆ ಏಕದಿನ ಸರಣಿ!
undefined
ನ್ಯೂಜಿಲೆಂಡ್ ವಿರುದ್ದದ ಆರಂಭಿಕ 3 ಪಂದ್ಯಗಳನ್ನ ಗೆದ್ದ ಇನ್ನೂ 2 ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ. ಈ ಮೂಲಕ ಕಳೆದ 4 ವರ್ಷಗಳಲ್ಲಿ ಏಕದಿನದಲ್ಲಿ ಗರಿಷ್ಠ ಗೆಲುವು ದಾಖಲಿಸಿದ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡವನ್ನ ಭಾರತ ಹಿಂದಿಕ್ಕಿದೆ.
2015ರ ವಿಶ್ವಕಪ್ ಬಳಿಕ ಗರಿಷ್ಠ ಗೆಲುವು!
ತಂಡ | ಗೆಲುವು |
ಭಾರತ | 53 |
ಇಂಗ್ಲೆಂಡ್ | 51 |
ಸೌತ್ಆಫ್ರಿಕಾ | 41 |
ನ್ಯೂಜಿಲೆಂಡ್ | 38 |
ಪಾಕಿಸ್ತಾನ | 35 |
ವಿಶೇಷ ಅಂದರೆ 2015ರ ವಿಶ್ವಕಪ್ ಚಾಂಪಿಯನ್ ತಂಡ ಆಸ್ಟ್ರೇಲಿಯಾ ಕಳೆದ 4 ವರ್ಷಗಳಲ್ಲಿ 29 ಗೆಲುವು ದಾಖಲಿಸೋ ಮೂಲಕ 7ನೇ ಸ್ಥಾನದಲ್ಲಿದೆ. ಇನ್ನು ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ 30 ಗೆಲುವಿನೊಂದಿಗೆ ಆಸಿಸ್‌ಗಿಂತ ಮುಂದಿದೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ- ನಂ.1 ಸ್ಥಾನ ಕಾಪಾಡಿಕೊಂಡ ಕೊಹ್ಲಿ!
2015ರಿಂದ ಇಲ್ಲೀವರೆಗಿನ 4 ವರ್ಷಗಳ ಅವಧಿಯಲ್ಲಿ ನ್ಯೂಜಿಲೆಂಡ್ ಹಾಗೂ ಸೌತ್ಆಫ್ರಿಕಾ ವಿರುದ್ಧ 8 ಭಾರಿ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ 7, ವೆಸ್ಟ್ ಇಂಡೀಸ್ ಜಿಂಬಾಬ್ವೆ 6, ಬಾಂಗ್ಲಾದೇಶ 4, ಪಾಕಿಸ್ತಾನ, ಇಂಗ್ಲೆಂಡ್ 3,ಹಾಂಗ್‌ಕಾಂಗ್ ವಿರುದ್ಧ 1 ಬಾರಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವು ದಾಖಲಿಸುತ್ತಿದ್ದಂತೆ 2015ರ ವಿಶ್ವಕಪ್ ಬಳಿಕ 14 ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ಆಡಿದ 11 ಏಕದಿನ ಸರಣಿಗಳಲ್ಲಿ 10 ಸರಣಿ ಗೆದ್ದುಕೊಂಡಿದೆ. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಸೋಲು ಕಂಡಿದೆ.
ಇದನ್ನೂ ಓದಿ: ಭಾರತಕ್ಕೆ ಏಕದಿನ ಸರಣಿ ಗೆಲುವು-ಸೆಹ್ವಾಗ್ ಸೇರಿದಂತೆ ದಿಗ್ಗಜರ ಟ್ವೀಟ್ ಅದ್ಬುತ!
ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮವಾಗಿ ತಂಡವನ್ನ ಮುನ್ನಡೆಸೋ ಮೂಲಕ ದಾಖಲೆ ಬರೆದಿದ್ದಾರೆ. 63 ಏಕದಿನ ಪಂದ್ಯದಲ್ಲಿ ಕೊಹ್ಲಿ 43 ಗೆಲುವು ಸಾಧಿಸಿದೆ. ಕೊಹ್ಲಿ 74.60 ಗೆಲುವಿನ ಸರಾಸರಿ ಹೊಂದಿದ್ದಾರೆ. ವೆಸ್ಟ್ಇಂಡೀಸ್ ದಿಗ್ಗಜ ನಾಯಕ ಕ್ಲೈವ್ ಲಾಯ್ಡ್ ಹಾಗೂ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ 76.19 ಗೆಲುವಿನ ಸರಾಸರಿ ಹೊಂದಿದ್ದಾರೆ.
2015ರ ವಿಶ್ವಕಪ್ ಟೂರ್ನಿಯಿಂದ ಇಲ್ಲೀವರೆಗೆ ಟೀಂ ಇಂಡಿಯಾ ಅತ್ಯಂತ ಯಶಸ್ವಿ ಪ್ರದರ್ಶನ ನೀಡಿದೆ. 2019ರ ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳು ಆರಂಭಗೊಂಡಿದೆ. ಕೊಹ್ಲಿ ನಾಯಕತ್ವದ, ಎಂ.ಎಸ್.ಧೋನಿ ಮಾರ್ಗದರ್ಶನ, ರೋಹಿತ್ ಶರ್ಮಾ-ಶಿಖರ್ ಧವನ್ ಉತ್ತಮ ಫಾರ್ಮ್, ಹಿಂದೆಂದು ಕಾಣದಂತ ಅತ್ಯುತ್ತಮ ಬೌಲಿಂಗ್ ವಿಭಾಗ ಟೀಂ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ.