ಕೊಹ್ಲಿ ಸೈನ್ಯದ ಬಳಿಕ ಕಿವೀಸ್ ವಿರುದ್ದ ಸರಣಿ ಗೆದ್ದ ಭಾರತ ವನಿತೆಯರು!

By Web DeskFirst Published Jan 29, 2019, 3:39 PM IST
Highlights

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ತಂಡ ಏಕದಿನ ಸರಣಿ ಗೆಲುವು ಸಾಧಿಸಿದೆ. 2ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂದನಾ, ಮಿಥಾಲಿ ರಾಜ್ ಹಾಗೂ ಜುಲನ್ ಗೋಸ್ವಾಮಿ ಅದ್ಬುತ ಪ್ರದರ್ಶನದಿಂದ ಭಾರತ ಸರಣಿ ಕೈವಶ ಮಾಡಿದೆ.
 

ಬೇ ಓವಲ್(ಜ.29): ವಿರಾಟ್ ಕೊಹ್ಲಿ ಸೈನ್ಯದ ಬಳಿಕ ಇದೀಗ ಭಾರತ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಗೆದ್ದುಕೊಂಡಿದೆ. 2ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಇದನ್ನೂ ಓದಿ: 2015ರ ವಿಶ್ವಕಪ್‌ನಿಂದ 2019 - ಟೀಂ ಇಂಡಿಯಾದ ಯಶಸ್ವಿ ಜರ್ನಿ ಮೆಲುಕು!

ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ಗೆ ಜುಲನ್ ಗೋಸ್ವಾಮಿ ಶಾಕ್ ನೀಡಿದರು. ಕಿವೀಸ್ ಮಹಿಳೆಯರು 38 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅ್ಯಮಿ ಸಟರ್ಥ್‌ವೈಟ್ ಸಿಡಿಸಿದ 71 ರನ್ ನೆರವಿನಿಂದ ನ್ಯೂಜಿಲೆಂಡ್ 161 ರನ್ ಸಿಡಿಸಿ ಆಲೌಟ್ ಆಯಿತು. ಜುಲನ್ ಗೋಸ್ವಾಮಿ 3, ಎಕ್ತಾ ಬಿಶ್ತ್, ದೀಪ್ತಿ ಶರ್ಮಾ ಹಾಗೂ ಪೂನಮ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ಬರೆದ ನೇಪಾಳ!

162 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಸ್ಮತಿ ಮಂದಾನಾ ಹಾಗೂ ಮಿಥಾಲಿ ರಾಜ್ ಆಸರೆಯಾದರು. ಮಂದನಾ ಅಜೇಯ 90 ರನ್ ಸಿಡಿಸಿದರೆ, ಮಿಥಾಲಿ ಅಜೇಯ 63 ರನ್ ಭಾರಿಸಿದರು. ಈ ಮೂಲಕ ಭಾರತ 35.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.  

click me!