ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ರಾಜಸ್ಥಾನ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

Published : Jan 13, 2019, 09:26 AM IST
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ರಾಜಸ್ಥಾನ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ಸಾರಾಂಶ

ರಣಜಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡ ಇದೀಗ ರಾಜಸ್ಥಾನ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದೆ. ಪ್ರಮುಖ ಪಂದ್ಯ ರಾಜ್ಯ ತಂಡ ಪ್ರಕಟಿಸಲಾಗಿದ್ದು ಆಲ್ರೌಂಡರ್ ಕೆ.ಗೌತಮ್ ತಂಡಕ್ಕೆ ಮರಳಿದ್ದಾರೆ.

ಬೆಂಗಳೂರು(ಜ.13): ಜ.15ರಿಂದ 19ರ ವರೆಗೂ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಗಾಯದ ಸಮಸ್ಯೆಯಿಂದಾಗಿ ಬರೋಡಾ ವಿರುದ್ಧ ಪಂದ್ಯಕ್ಕೆ ಗೈರಾಗಿದ್ದ ಆಲ್ರೌಂಡರ್‌ ಕೆ.ಗೌತಮ್‌ ತಂಡಕ್ಕೆ ಮರಳಿದ್ದಾರೆ. 

ಇದನ್ನೂ ಓದಿ: 87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಧೋನಿ

ಕಳೆದ ಪಂದ್ಯದಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಯುವ ಆಲ್ರೌಂಡರ್‌ ಶುಭಾಂಗ್‌ ಹೆಗ್ಡೆಯನ್ನು ತಂಡದಿಂದ ಕೈಬಿಡಲಾಗಿದೆ. ತಂಡದಲ್ಲಿ ಮತ್ತ್ಯಾವ ಬದಲಾವಣೆಗಳನ್ನು ಮಾಡಲಾಗಿಲ್ಲ. ಮನೀಶ್‌ ಪಾಂಡೆ ನಾಯಕನಾಗಿ ಮುಂದುವರಿದಿದ್ದು, ಶ್ರೇಯಸ್‌ ಗೋಪಾಲ್‌ ಉಪನಾಯಕನ ಜವಾಬ್ದಾರಿ ಪಡೆದಿದ್ದಾರೆ.

ಇದನ್ನೂ ಓದಿ: ಖೇಲೋ ಇಂಡಿಯಾ: ಚಿನ್ನ ಗೆದ್ದ ರಾಜ್ಯದ ಸಂಜಯ್‌, ಪೂಜಾ

ತಂಡದ ವಿವರ: ಮನೀಶ್‌ ಪಾಂಡೆ(ನಾಯಕ), ಶ್ರೇಯಸ್‌ ಗೋಪಾಲ್‌ (ಉಪನಾಯಕ), ವಿನಯ್‌ ಕುಮಾರ್‌, ನಿಶ್ಚಲ್‌ ಡಿ., ಕರುಣ್‌ ನಾಯರ್‌, ಆರ್‌.ಸಮಥ್‌ರ್‍, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಕೆ.ಗೌತಮ್‌, ಪ್ರಸಿದ್ಧ್ ಕೃಷ್ಣ, ಸಿದ್ಧಾರ್ಥ್ ಕೆ.ವಿ, ಜೆ.ಸುಚಿತ್‌, ಶರತ್‌ ಬಿ.ಆರ್‌, ಶರತ್‌ ಶ್ರೀನಿವಾಸ್‌, ಪವನ್‌ ದೇಶಪಾಂಡೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ