ಕರಣ್ ಜೋಹರ್ ನಡೆಸಿಕೊಡುವ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿದ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಇದೀಗ ಮತ್ತೊಂದು ಆಘಾತವಾಗಿದೆ. ಬಿಸಿಸಿಐ ಅಮಾನತು ಶಿಕ್ಷೆ ನೀಡಿದ ಬೆನ್ನಲ್ಲೇ ಪಾಂಡ್ಯ ಎದುರಾದ ಶಾಕ್ ಏನು? ಇಲ್ಲಿದೆ ವಿವರ.
ಮುಂಬೈ(ಜ.12): ಟಿವಿ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಟೀಂ ಇಂಡಿಯಾದಿಂದ ಅಮಾನತಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ ಎದುರಾಗಿದೆ. ಅಸಭ್ಯ ಹೇಳಿಕೆಯಿಂದ ಪಾಂಡ್ಯ ಜೊತೆಗಿನ ಜಾಹೀರಾತು ಒಪ್ಪಂದವನ್ನ ಜಿಲೆಟ್ ಕಂಪೆನಿ ಕಡಿದುಕೊಂಡಿದೆ.
ಇದನ್ನೂ ಓದಿ: ಪಾಂಡ್ಯ, ರಾಹುಲ್ ಸಸ್ಪೆಂಡ್: ಸರಣಿಯಿಂದ ಗೇಟ್’ಪಾಸ್
ಜೆಲೆಟ್ ಕಂಪೆನಿ ಹಾರ್ದಿಕ್ ಪಾಂಡ್ಯ ಜೊತೆ ಜಾಹೀರಾತು ಒಪ್ಪಂದ ಮಾಡಿಕೊಂಡಿತ್ತು. ಆದರೆ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಕುರಿತು ಹಾರ್ಧಿಕ್ ಪಾಂಡ್ಯ ಹಾಗೂ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅಸಭ್ಯ ಹೇಳಿಕೆ ನೀಡಿದ್ದರು. ಹೀಗಾಗಿ ಜಿಲೆಟ್ ಕಂಪೆನಿ ಪಾಂಡ್ಯ ಜೊತೆಗಿನ ಎಂಡೋರ್ಸ್‌ಮೆಂಟ್‌ನಿಂದ ಹಿಂದೆ ಸರಿದಿದೆ.
ಇದನ್ನೂ ಓದಿ:ಪಾಂಡ್ಯ ಕಾಮೋತ್ತೇಜಕ ಹೇಳಿಕೆ: ಯಾಕಪ್ಪಾ ಅಂದೆ ಎಂದು ಕೇಳಿದ ಬಿಸಿಸಿಐ
ಹಾರ್ದಿಕ್ ಹಾಗೂ ರಾಹುಲ್ ಹೇಳಿಕೆಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು ಗರಂ ಆಗಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಪ್ರಯಾಣಿಸೋ ಬಸ್‌ನಲ್ಲಿ ನಾನು ಪ್ರಯಾಣ ಮಾಡುವುದಿಲ್ಲ. ಹಾರ್ದಿಕ್ ಹಾಗೂ ರಾಹುಲ್ ಹೇಳಿಕೆಯಿಂದ ಕ್ರಿಕೆಟಿಗರು ತಲೆತಗ್ಗಿಸುವಂತಾಗಿದೆ ಎಂದು ಕ್ರಿಕೆಟಿಗ ಹರ್ಭಜ್ ಸಿಂಗ್ ಹೇಳಿದ್ದಾರೆ. ಇನ್ನು ಅಸಭ್ಯ ಹೇಳಿಕೆಗೆ ಅಮಾನತು ಶಿಕ್ಷೆ ನೀಡಿರುವ ಬಿಸಿಸಿಐ ಕ್ರಮವನ್ನ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸ್ವಾಗತಿಸಿದ್ದಾರೆ.