ಪ್ರಸಕ್ತ ಆವೃತ್ತಿ ರಣಜಿ ಟ್ರೋಫಿ ಅಂತ್ಯಗೊಂಡಿದೆ. ರೋಚಕ ಫೈನಲ್ ಹೋರಾಟದಲ್ಲಿ ವಿದರ್ಭ ಚಾಂಪಿಯನ್ ಆಗಿದೆ. ಸೌರಾಷ್ಟ್ರ ವಿರುದ್ದದ ಫೈನಲ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ನಾಗ್ಪುರ(ಫೆ.07): ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ78 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ವಿದರ್ಭ ಇದೀಗ ಬಲಿಷ್ಠ ಸೌರಾಷ್ಟ್ರ ತಂಡವನ್ನ ಮಣಿಸಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
Vidarbha Won by 78 Run(s) (Winners) Scorecard:https://t.co/J0U6yB7u1Z
— BCCI Domestic (@BCCIdomestic)
ಇದನ್ನೂ ಓದಿ: ಭಾರತ-ಪಾಕಿಸ್ತಾನ ವಿಶ್ವಕಪ್ ಹೋರಾಟ- ಯಾರು ಮರೆಯಲ್ಲ ಬದ್ಧವೈರಿಗಳ ಕದನ!
ನಾಗ್ಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 312 ರನ್‌ಗೆ ಆಲೌಟ್ ಆಯಿತು. ಅಕ್ಷಯ್ ಕರ್ನೆವಾರ್ 73, ಅಕ್ಷಯ್ ವಾಡ್ಕರ್ 45 ರನ್ ಸಿಡಿಸಿದ್ದರು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ 307 ರನ್ ಸಿಡಿಸಿ ಆಲೌಟ್ ಆಗಿತ್ತು. ಸ್ನೆಲ್ ಪಟೇಲ್ 102 ರನ್ ಸಿಡಿಸಿದ್ದರು.
ಇದನ್ನೂ ಓದಿ: IPL 2019: ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ RCB
5 ರನ್ ಮುನ್ನಡೆಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭಿಸಿದ ವಿದರ್ಭ 200 ರನ್ ಸಿಡಿಸಿ ಆಲೌಯ್ ಆಯಿತು. ಈ ಮೂಲಕ 206 ರನ್ ಟಾರ್ಗೆಟ್ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ಸೌರಾಷ್ಟ್ರ 127 ರನ್ ಆಲೌಟ್ ಆಗೋ ಮೂಲಕ ಸೋಲು ಕಂಡಿತು. 78 ರನ್ ಗೆಲುವು ದಾಖಲಿಸಿದ ವಿದರ್ಭ ರಣಜಿ ಟ್ರೋಫಿ ಪಶಪಡಿಸಿಕೊಂಡಿದೆ.