ಆ್ಯಶಸ್ ಸರಣಿ ಹಾಗೂ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ದಿಢೀರ್ ಆಘಾತ ಎದುರಾಗಿದೆ. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಸಿಸ್ ಈಗಾಗಲೇ ಸೋಲಿನತ್ತ ಮುಖಮಾಡಿದೆ. ಇದೀಗ ಮತ್ತೊಂದು ಶಾಕ್ ತಂಡದ ಯಶಸ್ಸಿಗೆ ಹಿನ್ನಡೆಯಾಗಲಿದೆ.
ಸಿಡ್ನಿ(ಫೆ.07): ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅಮಾನತಿನಿಂದ ಹೈರಾಣಾಗಿರುವ ಆಸ್ಟ್ರೇಲಿಯಾ ಇದೀಗ ಬೌಲಿಂಗ್ ಕೋಚ್ ಮಾರ್ಗದರ್ಶನವನ್ನೂ ಕಳೆದುಕೊಂಡಿದೆ.
ಇದನ್ನೂ ಓದಿ: ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ, ಆದರೆ...?
ಆಸ್ಟ್ರೇಲಿಯಾ ಬೌಲಿಂಗ್ ಕೋಚ್ ಡೇವಿಡ್ ಸ್ಯಾಕರ್ ದಿಢೀರ್ ರಾಜಿನಾಮೆ ನೀಡಿದ್ದಾರೆ. ಆ್ಯಶಸ್ ಸರಣಿ ಹಾಗೂ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಡೇವಿಡ್ ಸ್ಯಾಕರ್ ರಾಜಿನಾಮೆ ನೀಡಿರುವುದು ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.
ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್..!
ಆಸ್ಟ್ರೇಲಿಯಾ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿರುವುದು ಸಂತಸ ತಂದಿದೆ. ತಂಡದ ಹಿತದೃಷ್ಟಿಯಿಂದ ರಾಜಿನಾಮೆ ನೀಡುತ್ತಿದ್ದೇನೆ. ಕಳೆದ 9 ತಿಂಗಳಿನಿಂದ ಈ ಕುರಿತು ಮಾತುಕತೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಡೇವಿಡ್ ಸ್ಯಾಕರ್ ಹೇಳಿದ್ದಾರೆ.