ಮಂಕಡ್ ರನೌಟ್- ಜೋಸ್ ಬಟ್ಲರ್‌ಗಿದು ಮೊದಲೇನಲ್ಲ!

Published : Mar 26, 2019, 11:50 AM IST
ಮಂಕಡ್ ರನೌಟ್- ಜೋಸ್ ಬಟ್ಲರ್‌ಗಿದು ಮೊದಲೇನಲ್ಲ!

ಸಾರಾಂಶ

ಆರ್ ಅಶ್ವಿನ್ ಮಂಕಡಿಂಗ್ ಮೂಲಕ ಜೋಸ್ ಬಟ್ಲರ್ ರನೌಟ್ ಮಾಡಿರುವುದು ಇದೀಗ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಪ್ರಮುಖ ಹೈಲೈಟ್ಸ್. ಇಷ್ಟೇ ಅಲ್ಲ ಈ ಆವೃತ್ತಿ ಮೊದಲ ವಿವಾದ ಕೂಡ ಹೌದು. ಬಟ್ಲರ್ ಈ ರೀತಿ ಮಂಕಡಿಂಗ್  ಮೂಲಕ  ರನೌಟ್ ಆಗುತ್ತಿರುವುದು ಇದೇ ಮೊದಲಲ್ಲ.

ಜೈಪುರ(ಮಾ.26): ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ನಡುವಿನ ಐಪಿಎಲ್ ಪಂದ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿ ಜೋಸ್ ಬಟ್ಲರ್ ವಿಕೆಟ್ ಕಬಳಿಸಿದ್ದರು. ಐಸಿಸಿ ನಿಯಮದನ್ವಯ ಇದು ಸರಿಯಾಗಿದ್ದರೂ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಅನ್ನೋ ವಿವಾದ ಭುಗಿಲೆದ್ದಿದೆ.

ಇದನ್ನೂ ಓದಿ: ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!

ಮಂಕಡ್ ರನೌಟ್‌ನಿಂದ ಅದ್ಬುತ ಫಾರ್ಮ್‌ನಲ್ಲಿದ್ದ ಜೋಸ್ ಬಟ್ಲರ್ 69 ರನ್ ಸಿಡಿಸಿ ಔಟಾದರು. ಈ ವಿಕೆಟ್ ಪಂದ್ಯದ ದಿಕ್ಕನ್ನೇ ಬದಲಿಸಿತು. ರಾಜಸ್ಥಾನ ಸೋಲಿಗೆ ಶರಣಾಯಿತು. ಅಪರೂಪದ ಮಂಕಡ್ ರನೌಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಆದರೆ ಜೋಸ್ ಬಟ್ಲರ್ ಮಂಕಡಿಂಗ್ ರನೌಟ್ ಆಗುತ್ತಿರುವುದು ಇದೇ ಮೊದಲಲ್ಲ. 

ಇದನ್ನೂ ಓದಿ: IPL 2019: ರಾಜಸ್ಥಾನಕ್ಕೆ ಸೋಲಿನ ಶಾಕ್ ನೀಡಿದ ಪಂಜಾಬ್

2014ರಲ್ಲಿ ಜೋಸ್ ಬಟ್ಲರ್ ಇದೇ ರೀತಿ ಮಂಕಡ್ ರನೌಟ್ ಆಗಿದ್ದರು. ಎಡ್ಜ್‌ಬಾಸ್ಟನ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಮಂಕಡ್ ರನೌಟ್‌ಗೆ ಬಲಿಯಾಗಿದ್ದರು. ಲಂಕಾ ಸ್ಪಿನ್ನರ್ ಸಚಿತ್ರಾ ಸೇನಾನಾಯಕೆ  ನಾನ್ ಸ್ಟ್ರೈಕರ್ ಬಟ್ಲರ್ ಬೌಲ್ ಮಾಡೋ ಮೊದಲೇ ಕ್ರೀಸ್ ಬಿಟ್ಟು ತೆರಳೋ ಕುರಿತು ಎಚ್ಚರಿಕೆ ನೀಡಿದ್ದರು. ಮತ್ತೆ ಕ್ರೀಸ್ ಬಿಟ್ಟ ಬಟ್ಲರ್‌‌ಗೆ ಮಂಕಡಿಂಗ್ ಮೂಲಕ ಸೇನಾನಾಯಕೆ ರನೌಟ್ ಮಾಡಿದರು. ಇದೀಗ ಅಶ್ವಿನ್ ಮಂಕಡಿಂಗ್ ಮೂಲಕ ಬಟ್ಲರ್‌ನ್ನು ಔಟ್ ಮಾಡಿದ್ದಾರೆ. 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?