ಮುಜುಗರಕ್ಕೊಳಗಾದ ರಿಯಲ್‌ ಕಾಶ್ಮೀರ್‌ ಜತೆ BFC ಸ್ನೇಹಾರ್ಥ ಪಂದ್ಯ

Published : Feb 20, 2019, 09:09 AM IST
ಮುಜುಗರಕ್ಕೊಳಗಾದ ರಿಯಲ್‌ ಕಾಶ್ಮೀರ್‌ ಜತೆ BFC ಸ್ನೇಹಾರ್ಥ ಪಂದ್ಯ

ಸಾರಾಂಶ

ಪುಲ್ವಾಮ ಉಗ್ರರ ದಾಳಿ ಬಳಿಕ ಮುಜುಗರಕ್ಕೀಡಾದ ರಿಯಲ್ ಕಾಶ್ಮೀರ್ ಫುಟ್ಬಾಲ್ ತಂಡದ ಜೊತೆ ಸ್ನೇಹಾರ್ಥ ಪಂದ್ಯ ಆಡಲು ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್ ಮುಂದಾಗಿದೆ. ಇದೀಗ BFC ಮನವಿಯನ್ನು ಕಾಶ್ಮೀರ್ ಸ್ವೀಕರಿಸಿದೆ.  

ನವದೆಹಲಿ(ಫೆ.20): ಪುಲ್ವಾಮಾ ಉಗ್ರರ ದಾಳಿಯಿಂದಾಗಿ ಭಾರತದ ಐ-ಲೀಗ್‌ ಫುಟ್ಬಾಲ್‌ ಟೂರ್ನಿಯ ರಿಯಲ್‌ ಕಾಶ್ಮೀರ್‌ ತಂಡ ಭಾರೀ ಮುಜುಗರಕ್ಕೆ ಒಳಗಾಗಿದೆ. ಇತ್ತೀಚೆಗಷ್ಟೇ ಶ್ರೀನಗರಕ್ಕೆ ತೆರಳಿ ಪಂದ್ಯವನ್ನಾಡಲು ಟೂರ್ನಿಯ ಮತ್ತೊಂದು ತಂಡವಾದ ಮಿನರ್ವಾ ಪಂಜಾಬ್‌ ನಿರಾಕರಿಸಿತ್ತು.

ಇದನ್ನೂ ಓದಿ: ಬ್ರೆಜಿಲ್ ಫುಟ್ಬಾಲ್ ಕ್ಲಬ್’ನಲ್ಲಿ ಬೆಂಕಿ ಅವಘಡ: 10 ಮಂದಿ ದುರ್ಮರಣ

ಈ ವಿವಾದ ನ್ಯಾಯಾಲಯದ ಮೆಟ್ಟಿಲೇರುತ್ತಿರುವ ಬೆನ್ನಲ್ಲೇ ಮಾಜಿ ಐ-ಲೀಗ್‌ ಚಾಂಪಿಯನ್‌, ಹಾಲಿ ಐಎಸ್‌ಎಲ್‌ ಟೂರ್ನಿಯ ಅಗ್ರ ತಂಡ ಬೆಂಗಳೂರು ಎಫ್‌ಸಿ ಶ್ರೀನಗರಕ್ಕೆ ತೆರಳಿ ರಿಯಲ್‌ ಕಾಶ್ಮೀರ್‌ ವಿರುದ್ಧ ಸ್ನೇಹಾರ್ಥ ಪಂದ್ಯವನ್ನು ಆಡುವ ಪ್ರಸ್ತಾಪವಿರಿಸಿದೆ. 
ಇದನ್ನೂ ಓದಿ: ಅಂಧರ ತಂಡಕ್ಕೆ ಭಾರತ ಫುಟ್ಬಾಲಿಗರಿಂದ 50 ಸಾವಿರ ರುಪಾಯಿ ನೆರವು!

ಇದರೊಂದಿಗೆ ಭಾರತದಲ್ಲಿ ಫುಟ್ಬಾಲ್‌ಗೆ ಮತ್ತಷ್ಟುಪ್ರೋತ್ಸಾಹ ಸಿಗುವಂತೆ ಮಾಡಲು ಬಿಎಫ್‌ಸಿ ಮುಂದಾಗಿದೆ. ಬಿಎಫ್‌ಸಿ ಪ್ರಸ್ತಾಪಕ್ಕೆ ಒಪ್ಪಿದ ರಿಯಲ್‌ ಕಾಶ್ಮೀರ್‌ ಮುಂದಿನ ತಿಂಗಳು ಶ್ರೀನಗರಕ್ಕೆ ಆಗಮಿಸುವಂತೆ ಆಹ್ವಾನ ನೀಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Virat Kohliಯಿಂದ ಪಾಂಡ್ಯವರೆಗೆ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ರೊನಾಲ್ಡೊ ಫ್ಯಾನ್ಸ್ ಗೊತ್ತಾ?
FIFA World Cup 2026: 0-2ರಿಂದ 3-2ಕ್ಕೆ! ಸೆನೆಗಲ್‌ಗೆ ಶಾಕ್ ನೀಡಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಬೆಲ್ಜಿಯಂ