
* ಸಾಂದರ್ಭಿಕ ಚಿತ್ರ ಬಳಸಲಾಗಿದೆ
ರಿಯೊ[ಫೆ.09] ಬ್ರೆಜಿಲ್’ನ ಅತಿದೊಡ್ಡ ಫುಟ್ಬಾಲ್ ಕ್ಲಬ್ ಫ್ಲಮೆಂಗೋ ಯುವ ಫುಟ್ಬಾಲಿಗರಿಗೆ ನಡೆಸುತ್ತಿದ್ದ ತರಬೇತಿ ಶಿಬಿರದ ವೇಳೆ ಮೈದಾನದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ನಿಹೋ ಡೆ ಉರ್ಬೂ ಮೈದಾನವನ್ನು ವಿಸ್ತರಿಸಲಾಗಿತ್ತು, ಅಲ್ಲದೇ ಕಳೆದ ಎರಡು ತಿಂಗಳಿನಿಂದ ತರಬೇತಿ ಶಿಬಿರ ಆರಂಭವಾಗಿತ್ತು. ಬೆಂಕಿಯ ಜ್ವಾಲೆ ಆವರಿಸುವ ವೇಳೆಯಲ್ಲಿ ಆಟಗಾರರು ನಿದ್ರಿಸುತ್ತಿದ್ದರು ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.
ಮೃತಪಟ್ಟ 10 ಮಂದಿಯ ಪೈಕಿ ಆರು ಜನ ಯುವ ಫುಟ್ಬಾಲ್ ಆಟಗಾರರಾಗಿದ್ದರೆ, ನಾಲ್ವರು ನಿಹೋ ಡೆ ಉರ್ಬೂ ಮೈದಾನದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಎನ್ನಲಾಗಿದೆ. ಇನ್ನು ಮೂವರು ತೀವ್ರವಾದ ಗಾಯಕ್ಕೆ ತುತ್ತಾಗಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆದರೆ ಈ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.