ಫಿಫಾ: 103ನೇ ಸ್ಥಾನಕ್ಕೆ ಕುಸಿದ ಭಾರತ ತಂಡ

By Web DeskFirst Published Feb 8, 2019, 9:29 AM IST
Highlights

ಫಿಫಾ ಫುಟ್ಬಾಲ್ ರ‍್ಯಾಂಕಿಂಗ್ ಬಿಡುಗಡೆಗೊಂಡಿದೆ. ಹೊಸ ವರ್ಷದಲ್ಲಿ ಭಾರತ 6 ಸ್ಥಾನಗಳನ್ನ ಕುಸಿತ ಕಂಡಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಲ್ಲಿದೆ ನೂತನ ರ‍್ಯಾಂಕಿಂಗ್ ವಿವರ.

ನವದೆಹಲಿ(ಫೆ.08): ಭಾರತ ಫುಟ್ಬಾಲ್‌ ತಂಡ, ಗುರುವಾರ ಬಿಡುಗಡೆಯಾಗಿರುವ ನೂತನ ಫಿಫಾ ವಿಶ್ವ ರ‍್ಯಾಂಕಿಂಗ್‌ನ ಅಗ್ರ 100 ತಂಡಗಳ ಪಟ್ಟಿಯಿಂದ ಹೊರಬಿದ್ದಿದೆ. ಭಾರತ ತಂಡ, 6 ಸ್ಥಾನಗಳ ಕುಸಿತ ಕಂಡಿದ್ದು 103ನೇ ಸ್ಥಾನದಲ್ಲಿದೆ. 1240 ಅಂಕಗಳನ್ನು ಹೊಂದಿದ್ದ ಭಾರತ, 21 ಅಂಕಗಳನ್ನು ಕಳೆದಕೊಂಡು 1219ಕ್ಕೆ ಇಳಿಕೆ ಕಂಡಿದೆ. 

ಇದನ್ನೂ ಓದಿ: ಸ್ಪಿನ್ನರ್‌ ಚಹಲ್‌ ಕಾಲೆಳೆದ ಮಹಿಳಾ ಕ್ರಿಕೆಟರ್‌ ಸ್ಮೃತಿ

ಭಾರತ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು. 2018ರ ಫೆ.15ರಂದು ಬಿಡುಗಡೆಯಾಗಿದ್ದ ರ‍್ಯಾಂಕಿಂಗ್‌ನಲ್ಲಿ ಭಾರತ, ಅಗ್ರ 100ರಲ್ಲಿ ಸ್ಥಾನ ಪಡೆದಿತ್ತು. ಆಬಳಿಕ ಇದೇ ಮೊದಲು ಬಾರಿಗೆ ಅಗ್ರ 100ರಿಂದ ಹೊರಬಿದ್ದಿದೆ.

ಇದನ್ನೂ ಓದಿ: ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ -20 ವರ್ಷದ ಸಂಭ್ರಮ!

ಹೊಸ ವರ್ಷದಲ್ಲಿ ಭಾರತದ ರ‍್ಯಾಂಕಿಂಗ್ ಕುಸಿತ ಫುಟ್ಬಾಲ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಫುಟ್ಬಾಲ್ ಕ್ರೀಡೆಯಲ್ಲಿ ಭಾರತ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿರುವ ಹೊಸ್ತಿಲಲ್ಲೇ, ರ‍್ಯಾಂಕಿಂಗ್ ಕುಸಿತ ತಂಡದ ಮೇಲೂ ಪರಿಣಾಮ ಬೀರಲಿದೆ.

click me!