ಆರಂಭದಲ್ಲೇ ಸಾಲು ಸಾಲು ತಪ್ಪುಗಳೊಂದಿಗೆ ಅಂಕಗಳನ್ನು ಬಿಟ್ಟುಕೊಟ್ಟ ಬುಲ್ಸ್, 4ನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿತು. ಮೊದಲ 10 ನಿಮಿಷದಲ್ಲಿ ಭರತ್ ಒಂದೂ ಅಂಕ ಗಳಿಸದೆ ಇದ್ದದ್ದು ಬುಲ್ಸ್ ಹಿನ್ನಡೆಯಲ್ಲೇ ಉಳಿಯುವಂತೆ ಮಾಡಿತು.
ಅಹಮದಾಬಾದ್(ಡಿ.05): ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸತತ 2ನೇ ಸೋಲುಂಡಿದೆ. ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 30-32 ಅಂಕಗಳ ವೀರೋಚಿತ ಸೋಲು ಅನುಭವಿಸಿತು.
ಬಲಿಷ್ಠ ತಂಡ ಹೊಂದಿದ್ದರೂ, ನಿರ್ಣಾಯಕ ಹಂತಗಳಲ್ಲಿ ಎಡವುತ್ತಿರುವ ಬುಲ್ಸ್ ಲೀಗ್‌ನ ಆರಂಭದಲ್ಲೇ ತನ್ನ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ತಂಡದ ತಾರಾ ರೈಡರ್ ಭರತ್ ಹೂಡಾ, 2ನೇ ಪಂದ್ಯದಲ್ಲೂ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. ಪಂದ್ಯದಲ್ಲಿ ಒಟ್ಟು 18 ರೈಡ್‌ಗಳನ್ನು ಮಾಡಿದ ಭರತ್ ಕೇವಲ 5 ರೈಡ್ ಅಂಕ ಗಳಿಸಲಷ್ಟೇ ಶಕ್ತರಾದರು.
undefined
ಆರಂಭದಲ್ಲೇ ಸಾಲು ಸಾಲು ತಪ್ಪುಗಳೊಂದಿಗೆ ಅಂಕಗಳನ್ನು ಬಿಟ್ಟುಕೊಟ್ಟ ಬುಲ್ಸ್, 4ನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿತು. ಮೊದಲ 10 ನಿಮಿಷದಲ್ಲಿ ಭರತ್ ಒಂದೂ ಅಂಕ ಗಳಿಸದೆ ಇದ್ದದ್ದು ಬುಲ್ಸ್ ಹಿನ್ನಡೆಯಲ್ಲೇ ಉಳಿಯುವಂತೆ ಮಾಡಿತು. 12ನೇ ನಿಮಿಷದಲ್ಲಿ ನೀರಜ್ ನರ್ವಾಲ್ ಸೂಪರ್ ರೈಡ್ ಮೂಲಕ ಬುಲ್ಸ್ ಅಂಕಗಳ ಅಂತರವನ್ನು 7-8ಕ್ಕೆ ತಗ್ಗಿಸಿಕೊಳ್ಳಲು ನೆರವಾದರು. ಮೊದಲಾರ್ಧದ ಅಂತ್ಯಕ್ಕೆ ಬೆಂಗಾಲ್ 14-11ರ ಮುನ್ನಡೆ ಪಡೆಯಿತು.
ವಿಶ್ವಕಪ್ ಫೈನಲ್‌ನಲ್ಲಿ ಚಿನ್ನದ ಹುಡುಗನ ಕಡೆಗಣಿಸಿದ ಕ್ಯಾಮೆರಾ, ವಿವಾದಕ್ಕೆ ನೀರಜ್ ಚೋಪ್ರಾ ಪ್ರತಿಕ್ರಿಯೆ!
ಮೊದಲ 20 ನಿಮಿಷಗಳಲ್ಲಿ ಭರತ್ 12 ನಿಮಿಷಗಳಿಗೂ ಹೆಚ್ಚು ಕಾಲ ಅಂಕಣದಿಂದ ಹೊರಗುಳಿಯಬೇಕಾಯಿತು. ದ್ವಿತೀಯಾರ್ಧದಲ್ಲೂ ಬುಲ್ಸ್ ಆಟ ಸುಧಾರಿಸಲಿಲ್ಲ. 25ನೇ ನಿಮಿಷದಲ್ಲಿ ಭರತ್ ಪಂದ್ಯದ ಮೊದಲ ಅಂಕ ಗಳಿಸಿದರೆ, 26ನೇ ನಿಮಿಷದಲ್ಲಿ ತಂಡ ಆಲೌಟ್ ಆಗಿ 15-23ರ ಹಿನ್ನಡೆ ಕಂಡಿತು.
ಕೊನೆಯ 10 ನಿಮಿಷಗಳ ಆಟ ಬಾಕಿ ಇದ್ದಾಗ ಬುಲ್ಸ್ 10 ಅಂಕಗಳಿಂದ ಹಿಂದಿತ್ತು. ದೊಡ್ಡ ಸೋಲಿನತ್ತ ತಂಡ ಮುಖ ಮಾಡುತ್ತಿದೆ ಎನ್ನುವಷ್ಟರಲ್ಲಿ ಪುಟಿದೆದ್ದ ಬುಲ್ಸ್ 35ನೇ ನಿಮಿಷದಲ್ಲಿ ಬೆಂಗಾಲನ್ನು ಆಲೌಟ್ ಮಾಡಿ 36ನೇ ನಿಮಿಷದಲ್ಲಿ 28-28ರಲ್ಲಿ ಸಮಬಲ ಸಾಧಿಸಿತು.
ಪಂದ್ಯದಲ್ಲಿ ಕೊನೆ 15 ಸೆಕೆಂಡ್ ಬಾಕಿ ಇದ್ದಾಗ, ಬುಲ್ಸ್ 1 ಅಂಕದಿಂದ ಹಿಂದಿತ್ತು. ಕೊನೆಯ ರೈಡ್‌ನಲ್ಲಿ ಭರತ್ ಒಂದು ಅಂಕ ಗಳಿಸಿದ್ದರೂ ಪಂದ್ಯ ಟೈ ಆಗಿ ಬುಲ್ಸ್‌ಗೆ 3 ಅಂಕ ಸಿಗುತ್ತಿತ್ತು. ಆದರೆ ಭರತ್ ಎದುರಾಳಿ ಅಂಕಣದಲ್ಲಿ ದಿಕ್ಕೇ ತೋಚದಂತೆ ನಿಂತು ಸುಲಭವಾಗಿ ಅಂಕ ಬಿಟ್ಟುಕೊಟ್ಟರು. 2 ಅಂಕಗಳ ಅಂತರದಲ್ಲಿ ಬುಲ್ಸ್ ಸೋತು ನಿರಾಸೆಗೊಳಗಾಯಿತು. 11 ಅಂಕ ಕಲೆಹಾಕಿದ ಬೆಂಗಾಲ್ ನಾಯಕ ಮಣೀಂದರ್ ಸಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ತವರಲ್ಲಿ ಖಾತೆ ತೆರೆಯಲು ಬೆಂಗ್ಳೂರು ಬುಲ್ಸ್ ಕಾತರ!
ಅಹಮದಾಬಾದ್ ಚರಣದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತ ಬುಲ್ಸ್ ತನ್ನ ಮುಂದಿನ ಪಂದ್ಯವನ್ನು ತನ್ನ ತವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಡಲಿದೆ. ಡಿಸೆಂಬರ್ 8ರಂದು ತನ್ನ ತವರಿನ ಚರಣದ ಮೊದಲ ಪಂದ್ಯದಲ್ಲಿ ಬುಲ್ಸ್‌ಗೆ ದಬಾಂಗ್ ಡೆಲ್ಲಿ ಎದುರಾಗಲಿದೆ. ತವರಿನ ಚರಣದಲ್ಲಿ ಬುಲ್ಸ್ ಒಟ್ಟು 4 ಪಂದ್ಯಗಳನ್ನಾಡಲಿದೆ.
Pro Kabaddi League: ಬೆಂಗಳೂರು ಬುಲ್ಸ್‌ಗೆ ಸೋಲಿನ ಆರಂಭ!
ಹಾಲಿ ಚಾಂಪಿಯನ್ ಜೈಪುರಕ್ಕೆ ಪುಣೇರಿ ವಿರುದ್ಧ ಸೋಲು
ಅಹಮದಾಬಾದ್: ಸೋಮವಾರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಪುಣೇರಿ ಪಲ್ಟನ್ ವಿರುದ್ಧ 33-37ರ ಸೋಲು ಎದುರಾಯಿತು. ಅರ್ಜುನ್ ದೇಶ್ವಾಲ್ 17 ರೈಡ್‌ಗಳಲ್ಲಿ 17 ಅಂಕ ಕಲೆಹಾಕಿದರೂ, ಜೈಪುರವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಇಂದಿನ ಪಂದ್ಯ: ಗುಜರಾತ್-ಮುಂಬಾ, ರಾತ್ರಿ 8ಕ್ಕೆ