'ನೀವೇ ಕ್ಯಾಪ್ಟನ್ ಆಗಿರಿ': BCCI ರೋಹಿತ್​ ಶರ್ಮಾ ಹಿಂದೆ ಬಿದ್ದಿರೋದ್ಯಾಕೆ..?

By Suvarna NewsFirst Published Dec 4, 2023, 6:11 PM IST
Highlights

ಟಿ20 ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ರೋಹಿತ್ ಶರ್ಮಾ, ಸೌತ್ ಆಫ್ರಿಕಾ ವಿರುದ್ಧ ಟಿ20-ಒನ್​ಡೇ ಆಡಲು ಇಷ್ಟವಿರಲಿಲ್ಲ. ಈ ಎರಡು ಸರಣಿ ಮುಗಿದ್ರೆ ಭಾರತ ಮುಂದೆ ಒನ್​ಡೇ ಆಡೋದು 6 ತಿಂಗಳ ಬಳಿಕ. ಅಲ್ಲಿಗೆ ನಾನು ವೈಟ್‌ಬಾಲ್ ಕ್ರಿಕೆಟ್​ನಿಂದ ದೂರ ಉಳಿದ್ರೆ ಒಳಿತು ಎಂದು ಭಾವಿಸಿದ್ದರು. ಆದ್ರೆ ಟಿ20ಯಿಂದ ರೋಹಿತ್ ದೂರ ಉಳಿಯಲು ಬಿಸಿಸಿಐ ಬಿಡ್ತಿಲ್ಲ.

ಬೆಂಗಳೂರು(ಡಿ.04): ರಾಹುಲ್ ದ್ರಾವಿಡ್ ಅವರನ್ನ ಕೋಚ್ ಆಗಿ  ಮುಂದುವರೆಸಿದ್ದೇಕೆ? ರೋಹಿತ್​ ಶರ್ಮಾಗೆ ಕ್ಯಾಪ್ಟನ್ ಆಗು ಅಂತ ದುಂಬಾಲು ಬಿದ್ದಿದ್ದೇಕೆ? ಇದರ ಹಿಂದೆ ಬಿಸಿಸಿಐ ಮಾಸ್ಟರ್ ಪ್ಲಾನ್ ಏನು? ಈ ಎಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.
  
ಏಕದಿನ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅವರ ವೈಟ್ ಬಾಲ್ ಕ್ರಿಕೆಟ್ ಜರ್ನಿ ಕ್ಲೋಸ್ ಅಂತಲೇ ಎಲ್ಲರೂ ಭಾವಿಸಿದ್ದರು. ಅವರು ಕೂಡ ಅಷ್ಟೆ. ಶಾರ್ಟ್​ ಫಾರ್ಮ್ಯಾಟ್‌ಗೆ ಗುಡ್ ಬೈ ಹೇಳಿ ರೆಡ್ ಬಾಲ್ ಕ್ರಿಕೆಟ್‌ನತ್ತ ಫೋಕಸ್ ಮಾಡಲು ಪ್ಲಾನ್ ಮಾಡಿದ್ದರು. ಟಿ20 ಕ್ರಿಕೆಟ್ ಬಗ್ಗೆ ಆಸಕ್ತಿ ಇಲ್ಲ ಅಂತಲೂ ತಮ್ಮ ಆತ್ಮೀಯರ ಬಳಿ ಹೇಳಿಕೊಂಡಿದ್ದರು. ಆದ್ರೆ ವಿಧಿಯಾಟವೇ ಬೇರೆ. ತಾನೊಂದು ಬಗೆದರೆ ದೈವವೊಂದು ಬಗೆಯುತ್ತೆ ಅಂತರಲ್ಲ. ಹಾಗೆ ಆಗಿದೆ ಮುಂಬೈಕರ್ ಸ್ಥಿತಿ.

ವಿಶ್ವಕಪ್ ಫೈನಲ್‌ನಲ್ಲಿ ಚಿನ್ನದ ಹುಡುಗನ ಕಡೆಗಣಿಸಿದ ಕ್ಯಾಮೆರಾ, ವಿವಾದಕ್ಕೆ ನೀರಜ್ ಚೋಪ್ರಾ ಪ್ರತಿಕ್ರಿಯೆ!

Latest Videos

ಟಿ20 ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ರೋಹಿತ್ ಶರ್ಮಾ, ಸೌತ್ ಆಫ್ರಿಕಾ ವಿರುದ್ಧ ಟಿ20-ಒನ್​ಡೇ ಆಡಲು ಇಷ್ಟವಿರಲಿಲ್ಲ. ಈ ಎರಡು ಸರಣಿ ಮುಗಿದ್ರೆ ಭಾರತ ಮುಂದೆ ಒನ್​ಡೇ ಆಡೋದು 6 ತಿಂಗಳ ಬಳಿಕ. ಅಲ್ಲಿಗೆ ನಾನು ವೈಟ್‌ಬಾಲ್ ಕ್ರಿಕೆಟ್​ನಿಂದ ದೂರ ಉಳಿದ್ರೆ ಒಳಿತು ಎಂದು ಭಾವಿಸಿದ್ದರು. ಆದ್ರೆ ಟಿ20ಯಿಂದ ರೋಹಿತ್ ದೂರ ಉಳಿಯಲು ಬಿಸಿಸಿಐ ಬಿಡ್ತಿಲ್ಲ. ಟಿ20 ವಿಶ್ವಕಪ್‌ವರೆಗೆ ನೀವೇ ಮೂರು ಮಾದರಿ ನಾಯಕನಾಗಿರಬೇಕು ಎಂದು ದುಂಬಾಲು ಬಿದ್ದಿದೆ. ಅದಕ್ಕಾಗಿ ರೋಹಿತ್​ ಶರ್ಮಾ, 2024ರ ಜೂನ್‌ವರೆಗೂ ಮೂರು ಫಾರ್ಮ್ಯಾಟ್​​ ಕ್ಯಾಪ್ಟನ್ ಆಗಿ ಇರೋದಕ್ಕೆ ಒಪ್ಪಿಕೊಂಡಿದ್ದಾರೆ. ಆಫ್ರಿಕಾ ಟಿ20-ಒನ್​ಡೇ ಸರಣಿಯಿಂದ ರೆಸ್ಟ್ ಬೇಕು ಎಂದು ಕೇಳಿದಕ್ಕೆ ಸೂರ್ಯ ಮತ್ತು ರಾಹುಲ್‌ಗೆ ಕ್ಯಾಪ್ಟನ್ಸಿ ಸಿಕ್ಕಿದೆ. ಇಲ್ಲದಿದ್ದರೆ ರೋಹಿತ್ ಶರ್ಮಾ ಅವರೇ ನಾಯಕರಾಗಿ ಇರ್ತಿದ್ದರು.

ದ್ರಾವಿಡ್​-ರೋಹಿತ್ ಕಾಂಬಿನೇಶನ್ ವರ್ಕ್​ ಔಟ್

ಕೋಚ್​ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್​ ಶರ್ಮಾ ಮುಂದಾಳತ್ವದಲ್ಲಿ ಟೀಂ ಇಂಡಿಯಾ 2022ರ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿರಬಹುದು. ಆದ್ರೆ 2023ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ಮತ್ತು ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಈ ಸಾಧನೆಯನ್ನ ಕಣ್ಣಾರೆ ಕಂಡಿರುವ ಬಿಸಿಸಿಐ, ಈ ಇಬ್ಬರ ಸಾಧನೆ ಮತ್ತು ಟಾಲೆಂಟ್ ಬಗ್ಗೆ ತಿಳಿದಿದೆ. ಹಾಗಾಗಿಯೇ ಈ ಇಬ್ಬರನ್ನ 2024ರ ಜೂನ್‌ವರೆಗೆ ಕೋಚ್ ಮತ್ತು ಕ್ಯಾಪ್ಟನ್ ಆಗಿ ಮುಂದುವರೆಯಲು ಬಿಸಿಸಿಐ ಕೇಳಿಕೊಂಡಿದ್ದು. ಅದಕ್ಕೆ ಇಬ್ಬರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪಾಂಡ್ಯ ಫಿಟ್ನೆಸ್​ ಮೇಲೆ ಬಿಸಿಸಿಐಗೆ ನಂಬಿಕೆಯಿಲ್ಲ..!

2022ರ ಟಿ20 ವಿಶ್ವಕಪ್ ಬಳಿಕ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಟಿ20 ಟೀಮ್ ಕ್ಯಾಪ್ಟನ್​, ಒನ್​ಡೇಗೆ ವೈಸ್​ ಕ್ಯಾಪ್ಟನ್ ಆಗಿದ್ದರು. ಈಗ ಫಿಟ್​​ ಆಗಿದ್ದರೆ ಅವರೇ ಆಫ್ರಿಕಾದಲ್ಲೂ ವೈಟ್​ ಬಾಲ್ ಕ್ರಿಕೆಟ್​ಗೆ ಕ್ಯಾಪ್ಟನ್ ಆಗಿರುತ್ತಿದ್ದರು. ಆದ್ರೆ ವಿಶ್ವಕಪ್​ನಲ್ಲಿ ಇಂಜುರಿಯಾಗಿ ಸದ್ಯ ರೆಸ್ಟ್​​ಗೆ ಜಾರಿದ್ದಾರೆ. ಪಾಂಡ್ಯ ಪರ್ಫಾಮೆನ್ಸ್ ಬಗ್ಗೆ ಬಿಸಿಸಿಐಗೆ ಅನುಮಾನವಿಲ್ಲ. ಆದ್ರೆ ಅವರ ಫಿಟ್ನೆಸ್ ಅನ್ನ ಬಿಸಿಸಿಐ ನಂಬುತ್ತಿಲ್ಲ. ಸತತವಾಗಿ ಸರಣಿ ಆಡಿದ್ರೆ ಇಂಜುರಿಯಾಗಿ ಬಿಡ್ತಾರೆ. ಹೀಗೆ ನಾಯಕನೊಬ್ಬ ಒಂದು ಸರಣಿ ಆಡಿ ಮತ್ತೊಂದು ಸರಣಿಗೆ ಇಂಜುರಿಯಾದ್ರೆ ಅದು ತಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅದಕ್ಕಾಗಿ ಪಾಂಡ್ಯರನ್ನ ಸೈಡ್ ಲೈನ್ ಮಾಡಿ ಮತ್ತೆ ರೋಹಿತ್​ಗೆ ಮಣೆ ಹಾಕಿದೆ ಬಿಸಿಸಿಐ.

ಭವಿಷ್ಯದಲ್ಲೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಕ್ಯಾಪ್ಟನ್ ಆಗಲ್ವಾ..?

2024ರ ಜೂನ್​ನಲ್ಲಿ ರೋಹಿತ್​ ವೈಟ್​​ಬಾಲ್ ಜರ್ನಿ ಕ್ಲೋಸ್

2024ರ ಜೂನ್​​ನಲ್ಲಿ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಟಿ20 ವರ್ಲ್ಡ್​​​ಕಪ್ ನಡೆಯಲಿದೆ. ಈ ವಿಶ್ವಕಪ್ ಆಡಿ ರೋಹಿತ್​, ವೈಟ್​ಬಾಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಲಿದ್ದಾರೆ. ಅವರಿಗೆ ಅಷ್ಟೊತ್ತಿಗೆ 37 ವರ್ಷವಾಗಿರುತ್ತೆ. 2025ರಲ್ಲಿ ಪಾಕಿಸ್ತಾನ ಮತ್ತು ಯುಎಇನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದು ಏಕದಿನ ಮಾದರಿಯಾಗಿದ್ರೂ ರೋಹಿತ್ ಅಲ್ಲಿಯವರೆಗೂ ವೈಟ್​ಬಾಲ್ ಕ್ರಿಕೆಟ್ ಆಡಲ್ಲ. ಅದಕ್ಕಾಗಿ ಕೆಎಲ್ ರಾಹುಲ್ ಕೈಗೆ ಒನ್​ಡೇ ಕ್ಯಾಪ್ಟನ್ಸಿ ನೀಡಲಾಗಿದೆ. ಒಟ್ನಲ್ಲಿ 2024ರ ಜೂನ್​ವರೆಗೆ ಟೀಂ ಇಂಡಿಯಾದ ನಾಯಕತ್ವ ಖಾಲಿ ಇಲ್ಲ. ಅರ್ಜಿ ಹಾಕಿಕೊಳ್ಳಬಹುದು ಅಷ್ಟೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!