ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೆಲೆಬ್ರೆಟಿಗಳು ಪದೇ ಪದೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ ಚಿನ್ನದ ಹುಡುಗ ನೀರಜ್ ಚೋಪ್ರಾ ಮಾತ ಒಂದು ಬಾರಿ ಕಾಣಿಸಿಕೊಂಡಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಖುದ್ದು ನೀರಜ್ ಚೋಪ್ರಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ(ಡಿ.04) ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ನೇರ ಪ್ರಸಾರ, ಕ್ರೀಡಾಂಗಣದ ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುವ ಸೆಲೆಬ್ರೆಟಿಗಳು, ಅಭಿಮಾನಿಗಳನ್ನು ಪಂದ್ಯದ ನಡುವೆ ಕಾಣಿಸಿಕೊಳ್ಳುತ್ತಾರೆ. ಕ್ಯಾಮೆರಾಗಳು ಇವರ ಮೇಲೆ ಕಣ್ಣಿಟ್ಟಿರುತ್ತದೆ. ಆದರೆ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಹಲವು ಸಿನಿ ತಾರೆಯರು, ಕ್ರೀಡಾ ದಿಗ್ಗಜರು ಹಾಜರಾಗಿದ್ದರು. ಈ ಪೈಕಿ ಭಾರತದ ಅತ್ಯಂತ ಜನಪ್ರಿಯ, ಚಿನ್ನದ ಹುಡುಗ ಎಂದೇ ಖ್ಯಾತಿಗಳಿಸಿರುವ ನೀರಜ್ ಚೋಪ್ರಾ ಕೂಡ ಫೈನಲ್ ಪಂದ್ಯಕ್ಕೆ ಹಾಜರಾಗಿದ್ದರು. ಆದರೆ ಸಂಪೂರ್ಣ ಪಂದ್ಯವನ್ನು ನೀರಜ್ ವೀಕ್ಷಿಸಿದ್ದರೂ ಒಂದೇ ಒಂದು ಬಾರಿ ಕ್ರೀಡಾಂಗಣದ ಪರದೆ, ನೇರಪ್ರಸಾರದಲ್ಲಿ ನೀರಜ್‌ನನ್ನು ತೋರಿಸಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಕುರಿತು ಸ್ವತಃ ನೀರಜ್ ಪ್ರತಿಕ್ರಿಯೆ ನೀಡಿದ್ದಾರೆ.
ನೀರಜ್ ಚೋಪ್ರಾರನ್ನು ಕಡೆಗಣಿಸಿದ್ದಾರೆ. ಭಾರತದ ಶ್ರೇಷ್ಠ ಕ್ರೀಡಾಪಟುವನ್ನು ಕ್ಯಾಮೆರಾ ಗುರುತಿಸಲೇ ಇಲ್ಲ ಅನ್ನೋ ಆರೋಪ, ವಿವಾದ ಜೋರಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನೀರಜ್ ಚೋಪ್ರಾ, ನಾನು ಸ್ಪರ್ಧಿಸುವಾಗ ಕ್ಯಾಮೆರಾ ನನ್ನನ್ನು ಸ್ಕ್ರೀನ್ ಮೇಲೆ ತೋರಿಸಬೇಕು. ನಾನು ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಳ್ಳವಾಗ ಸರಿಯಾಗಿ ತೋರಿಸಲಿಲ್ಲ. ಇದು ಅಸಲಿ ಕಹಾನಿ, ಈ ವೇಳೆ ಅವರು ಹೈಲೈಟ್ಸ್ ತೋರಿಸುತ್ತಾರೆ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
undefined
ಚಿನ್ನ ಗೆದ್ದ ನೀರಜ್ ಚೋಪ್ರಾ, ತ್ರಿವರ್ಣ ಧ್ವಜ ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿದು ಭಾರತೀಯರ ಹೃದಯ ಗೆದ್ದ..!
ಅಹಮ್ಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯ ವೀಕ್ಷಿಸಲು ನಾನು ಹೋಗಿದ್ದೆ. ಪಂದ್ಯವನ್ನು ಎಂಜಾಯ್ ಮಾಡಿದ್ದೇನೆ. ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ ನನ್ನ ಖುಷಿ ಡಬಲ್ ಆಗುತ್ತಿತ್ತು. ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಾ ಆನಂದಿಸಿದ್ದೇನೆ. ಆದರೆ ಕ್ಯಾಮೆರಾ ನನ್ನತ್ತ ತಿರುಗಿ ನನ್ನನ್ನು ಸ್ಕ್ರೀನ್ ಮೇಲೆ ತೋರಿಸಬೇಕು ಅನ್ನೋ ಯಾವುದೇ ಆಲೋಚನೆ ಇರಲಿಲ್ಲ. ಈ ರೀತಿಯ ನನ್ನ ತೆಲೆಗೆ ಬಂದಿರಲಿಲ್ಲ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಹೋರಾಡಿತ್ತು. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿತ್ತು. ಈ ಪಂದ್ಯ ವೀಕ್ಷಿಸಲು ಬಾಲಿವುಡ್ ಸೆಲೆಬ್ರೆಟಿಗಳು, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವರು ಗಣ್ಯರು ಪಾಲ್ಗೊಂಡಿದ್ದರು. ನೀರಜ್ ಚೋಪ್ರಾ ಕೂಡ ಈ ಪಂದ್ಯ ವೀಕ್ಷಿಸಿದ್ದರು. ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಪೋಸ್ಟ್ ಮಾಡಿದ್ದರು.
Asian Games 2023 ಏಷ್ಯಾಡಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಶೋ..!