
ಮೈಸೂರು(ಸೆ.19): ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ತಂಡ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 417 ರನ್‌ಗಳ ಬೃಹತ್ ಮೊತ್ತ ಗಳಿಸಿದ ಭಾರತ ತಂಡ, 2ನೇ ದಿನದಂತ್ಯಕ್ಕೆ ದ.ಆಫ್ರಿಕಾ ತಂಡವನ್ನು 5 ವಿಕೆಟ್‌ಗೆ 159 ರನ್‌ಗಳಿಗೆ ನಿಯಂತ್ರಿಸಿತು. ಇನ್ನೂ 258 ರನ್ ಹಿನ್ನಡೆಯಲ್ಲಿರುವ ಪ್ರವಾಸಿ ತಂಡ, ದೊಡ್ಡ ಮೊತ್ತದ ಮುನ್ನಡೆ ಬಿಟ್ಟುಕೊಡುವ ಭೀತಿಗೆ ಸಿಲುಕಿದೆ.
ಗಿಲ್ ಮಿಂಚಿನಾಟ, ಭಾರತ ‘ಎ’ ಮೇಲುಗೈ
ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 233 ರನ್ ಗಳಿಸಿದ್ದ ಭಾರತ ‘ಎ’, 2ನೇ ದಿನವಾದ ಬುಧವಾರ ಉತ್ತಮ ಬ್ಯಾಟಿಂಗ್ ನಡೆಸಿತು. ಕರುಣ್ ನಾಯರ್ (78), ನಾಯಕ ವೃದ್ಧಿಮಾನ್ ಸಾಹ (60), ಆಲ್ರೌಂಡರ್ ಶಿವಂ ದುಬೆ (68) ಅರ್ಧಶತಕ ಬಾರಿಸಿ ತಂಡ 400 ರನ್ ದಾಟಲು ನೆರವಾದರು.
ಸ್ಟಂಪ್ ಕಿತ್ತೆಸೆದ ವಿರಾಟ್...ಯಾರ ಮೇಲೆ ಇಂಥಾ ಸಿಟ್ಟು..ವಿಡಿಯೋ ವೈರಲ್
ಮೊದಲ ಇನ್ನಿಂಗ್ಸ್ ಆರಂಭಿಸಿದ ದ.ಆಫ್ರಿಕಾ ‘ಎ’ ತಂಡ, ಭಾರತದ ಸ್ಪಿನ್ ದಾಳಿಗೆ ಕುಸಿಯಿತು. ಶಾಬಾಜ್ ನದೀಮ್ ಹಾಗೂ ಕುಲ್ದೀಪ್ ಯಾದವ್ 2 ವಿಕೆಟ್ ಕಿತ್ತರು. ನಾಯಕ ಏಡನ್ ಮಾರ್ಕ್ರಮ್ ಏಕಾಂಗಿ ಹೋರಾಟ ನಡೆಸುತ್ತಿದ್ದು ಅಜೇಯ 83 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಕೋರ್:
ಭಾರತ ‘ಎ’ 417
ದ.ಆಫ್ರಿಕಾ ‘ಎ’ 159/5
(2ನೇ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.