PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!

By Web DeskFirst Published Sep 12, 2019, 10:05 PM IST
Highlights

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಸೋಲಿಗೆ ಜಾರಿದೆ. ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ವಿರುದ್ಧ ನಿರಾಸೆ ಅನುಭವಿಸಿದೆ.

ಕೋಲ್ಕತಾ(ಸೆ.12): ಆರಂಭದಿಂದ ಅಂತಿಮ ಹಂತದ ವರೆಗೆ ಮುನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಅಂತಿಮ 2 ನಿಮಿಷದಲ್ಲಿ ಪಂದ್ಯ ಕೈಚೆಲ್ಲಿದೆ. ಬೆಂಗಾಲ್ ವಾರಿಯರ್ಸ್ ವಿರುದ್ಧದ ನಡೆದ ರೋಟಕ ಹೋರಾಟದಲ್ಲಿ ಬೆಂಗಳೂರು ಬುಲ್ಸ್ ಸೋಲಿಗೆ ಶರಣಾಗಿದೆ. 40-42 ಅಂಕಗಳ ಮೂಲಕ ಬೆಂಗಳೂರು ಬುಲ್ಸ್ ಮುಗ್ಗರಿಸಿದೆ. 

ಇದನ್ನೂ ಓದಿ: ಸುವರ್ಣನ್ಯೂಸ್.ಕಾಂ ಜೊತೆ ಬೆಂಗಳೂರು ಬುಲ್ಸ್ ನಾಯಕನ Exclusive ಮಾತು!

ಮನೀಂದರ್ ಸಿಂಗ್ ಬೋನಸ್ ಪಾಯಿಂಟ್‌ನೊಂದಿಗೆ ಪಂದ್ಯ ಆರಂಭಿಸಿದ ಬೆಂಗಾಲ್ ವಾರಿಯರ್ಸ್‌ಗೆ ಬುಲ್ಸ್ ನಾಯಕ ರೋಹಿತ್ ಕುಮಾರ್ ತಿರುಗೇಟು ನೀಡಿದರು. ಮೊದಲ ರೈಡ್‌ನಲ್ಲೇ ಅಂಕ ತಂದು 1-1 ಅಂಕಗಳ ಮೂಲ ಸಮಬಲ ಮಾಡಿದರು. ರೋಹಿತ್‌ಗೆ ಪವನ್ ಶೆರಾವತ್ ಸಾಥ್ ನೀಡಿದರು. ಆದರೆ 3ನೇ ನಿಮಿಷದಲ್ಲಿ ಬೆಂಗಾಲ್ 3-3 ಅಂಕಗಳಿಂದ ಸಮಬಲಗೊಂಡಿತು. 7 ನಿಮಿಷದ ವರೆಗೆ ಮುನ್ನಡೆಯಲ್ಲಿದ್ದ ಬೆಂಗಾಲ್ ತಂಡಕ್ಕೆ ಬುಲ್ಸ್ ಶಾಕ್ ನೀಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಳೂರು ಬುಲ್ಸ್ ಮೊದಲಾರ್ಧದ ಅಂತ್ಯದಲ್ಲಿ 15-16 ಅಂಕ ಗಳಿಸಿತು. ಈ ಮೂಲಕ ಒಂದು ಅಂಕಗಳ ಹಿನ್ನಡೆ ಕಂಡಿತು. ಸೆಕೆಂಡ್ ಹಾಫ್ ಆರಂಭದಲ್ಲಿ ಪವನ್ ಶೆರಾವತ್ ಸೂಪರ್ ರೈಡ್ ಹಾಗೂ ಬೋನಸ್ ಪಾಯಿಂಟ್ ಮೂಲಕ 18-16 ಅಂಕ ಪಡೆಯಿತು. ಶೆರಾವತ್ ಘರ್ಜನೆಗೆ ಬೆಂಗಾಲ್ ಹಿಡಿತ ಸಡಿಲಗೊಂಡಿತು. 6ನೇ ನಿಮಿಷಕ್ಕೆ 30-21 ಅಂಕಗಳ ಅಂತರ ಕಾಯ್ದುಕೊಂಡಿತು. 

ಭಾರಿ ಮುನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್‌ ಅಂತಿಮ ಹಂತದಲ್ಲಿ ಹೆಚ್ಚಿನ ಅಂಕ ಬಿಟ್ಟುಕೊಟ್ಟಿತು. 17ನೇ ನಿಮಿಷದಲ್ಲಿ ಬೆಂಗಾಲ್ 35-35 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಅಷ್ಟರಲ್ಲಿ ಪಂದ್ಯ ರೋಚಕ ತಿರುವು ಪಡೆದುಕೊಂಡಿತು. ಚಾಣಾಕ್ಷ ಆಟಕ್ಕೆ ಮುಂದಾದ ಬೆಂಗಾಲ್ 42-40 ಅಂಕಗಳಲ್ಲಿ ಬುಲ್ಸ್ ತಂಡವನ್ನು ಮಣಿಸಿತು. 

ಪಾಟ್ನಾ ಪೈರೇಟ್ಸ್‌ಗೆ ಗೆಲವು:
ಬೆಂಗಳೂರು ಬುಲ್ಸ್ ಪಂದ್ಯಕ್ಕೂ ಮೊದಲು ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಿತ್ತು. ಬಲಿಷ್ಠ ತಂಡಗಳ ಹೋರಾಟ  ಅಭಿಮಾನಿಗಳಿಗೆ ಮನರಂಜನೆ ನೀಡಿತು. ಮಹತ್ವದ ಪಂದ್ಯದಲ್ಲಿ ಪಾಟ್ನಾ 36-33 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಟ್ನಾ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಜೈಪುರ 6ನೇ ಸ್ಥಾನದಲ್ಲಿ ಮುಂದುವರಿದಿದೆ. 

click me!