ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ ಮರುನಾಮಕರಣ ಮಾಡಲಾಗಿದೆ. ಮರುನಾಮಕರಣ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ , ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ದೆಹಲಿ(ಸೆ.12): ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಇತ್ತೀಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಹೆಸರನ್ನಿಡೋ ಮೂಲಕ ಮರುನಾಮಕರಣ ಮಾಡಲಾಗಿದೆ. ಇದೇ ವೇಳೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಕೂಡ ನಾಮಕರಣ ಮಾಡಲಾಗಿದೆ. ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಹೆಸರು ಬದಲಾಯಿಸಲಾಗಿದೆ.
ಇದನ್ನೂ ಓದಿ: ಟ್ರಬಲ್ ಶೂಟರ್‌ನ್ನು ಕಳೆದುಕೊಂಡ ಮೋದಿ ಸರ್ಕಾರ!
undefined
ಈ ಸಮಾರಂಭದಲ್ಲಿ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ, ಕೋಚ್ ರವಿ ಶಾಸ್ತ್ರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಟೀಂ ಇಂಡಿಯಾ ಕ್ರಿಕೆಟಿಗರು, ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಜತ್ ಶರ್ಮಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಜೇಟ್ಲಿ ಸಹಾಯದಿಂದ ಟೀಂ ಇಂಡಿಯಾ ಪ್ರತಿನಿಧಿಸಿದೆ; ವಿರೇಂದ್ರ ಸೆಹ್ವಾಗ್
ಇಷ್ಟು ದಿನ ದೆಹಲಿ ಕ್ರೀಡಾಂಗಣ ಫಿರೋಜ್ ಷಾ ಕೋಟ್ಲಾ ಮೈದಾನ ಎಂದೇ ಖ್ಯಾತಿಯಾಗಿತ್ತು. ಆದರೆ ದೆಹಲಿ ಕ್ರಿಕೆಟ್ ಸಂಸ್ಥೆ ಹಾಗೂ ಕ್ರಿಕೆಟಿಗರ ಅಭಿವೃದ್ದಿಗಾಗಿ ಶ್ರಮಿಸಿದ ಬೆಜಿಪಿ ನಾಯಕ ಅರುಣ್ ಜೇಟ್ಲಿ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು. ಇವರ ಕೊಡುಗೆಯನ್ನು ಪರಿಗಣಿಸಿ ದೆಹಲಿ ಕ್ರಿಕೆಟ್ ಸಂಸ್ಥೆ ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ.
ಇದನ್ನೂ ಓದಿ: ಕೆರಿಬಿಯನ್ ಶಿಕಾರಿ: ಕೊಹ್ಲಿ ಪಡೆಗೆ ದಿಗ್ಗಜರೆಲ್ಲರಿಂದ ಶಹಬ್ಬಾಸಗಿರಿ!
ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಹಾಗೂ ನಾಯಕತ್ವದಲ್ಲಿ ಟೀಂ ಇಂಡಿಯಾ ನಂ.1 ತಂಡವಾಗಿ ಹೊರಹೊಮ್ಮಿದೆ. ದೆಹಲಿ ಮೂಲದ ವಿರಾಟ್ ಕೊಹ್ಲಿ ಸಾಧನೆಯನ್ನು ಪರಿಗಣಿಸಿ ಇದೀಗ ಕ್ರೀಡಾಂಗಣದಲ್ಲಿನ ಸ್ಟ್ಯಾಂಡ್‌ಗೆ ವಿರಾಟ್ ಕೊಹ್ಲಿ ಎಂದು ಮರುನಾಮಕರಣ ಮಾಡಲಾಗಿದೆ.