ಪಾಟ್ನಾ ವಿರುದ್ದ ಬೆಂಗಳೂರು ಬುಲ್ಸ್‌ಗೆ ವಿರೋಚಿತ ಸೋಲು!

Published : Nov 25, 2018, 10:33 PM IST
ಪಾಟ್ನಾ ವಿರುದ್ದ ಬೆಂಗಳೂರು ಬುಲ್ಸ್‌ಗೆ ವಿರೋಚಿತ ಸೋಲು!

ಸಾರಾಂಶ

ತವರಿನ ಹೋರಾಟದಲ್ಲಿ ಬೆಂಗಳೂರು ಬುಲ್ಸ್ ವಿರೋಚಿತ ಸೋಲು ಅನುಭವಿಸಿದೆ.  ಪಾಟ್ನಾ ವಿರುದ್ಧದ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.  

ಪುಣೆ(ನ.25): ಪಂದ್ಯದ ಆರಂಭದಿಂದ ಅಂತಿಮ ಹಂತದವರೆಗೆ ಭಾರಿ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಅಂತಿಮ ಕ್ಷಣದಲ್ಲಿ ಆಕ್ರಮಣಕಾರಿ ಆಟವಾಡಿ ಹಿನ್ನಡೆ ಅಂತರ ತಗ್ಗಿಸಿದರೂ ಗೆಲುವು ಸಿಗಲಿಲ್ಲ. ಪಾಟ್ನಾ ಪೈರೇಟ್ಸ್ ವಿರುದ್ಧದ 82ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 32-35 ಅಂಕಗಳ ಸೋಲು ಅನುಭವಿಸಿದೆ.

ಮೊದಲಾರ್ಧದ ಅಂತ್ಯದಲ್ಲಿ ಪಾಟ್ನಾ ಪೈರೇಟ್ಸ್ 23-11 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಇನ್ನು ದ್ವಿತಿಯಾರ್ಧದಲ್ಲೂ ಪಾಟ್ನಾ ಮುನ್ನಡೆ ಕಾಯ್ದುಕೊಂಡಿತು. ಆದರೆ ಅಂತಿಮ 5 ನಿಮಿಷದಲ್ಲಿ ಗೇರ್ ಬದಲಾಯಿಸಿದ ಬೆಂಗಳೂರು ಹೆಚ್ಚು ಅಂಕಗಳಿಕೆಗೆ ಮುಂದಾಯಿತು. ಅಷ್ಟರಲ್ಲೇ ನಿಗಧಿತ ಸಮಯ ಮುದಿತ್ತು. ಹೀಗಾಗಿ ಬೆಂಗಳೂರು ಸೋಲು ಅನುಭವಿಸಿತು.

ಬೆಂಗಳೂರು ಪಂದ್ಯಕ್ಕೂ ಮೊದಲು ದಬಾಂಗ್ ದಿಲ್ಲಿ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ರೋಚಕ ಹೋರಾಟದಲ್ಲಿ ಹರಿಯಾಣ ತಂಡ 34-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ