'ಕ್ರಿಕೆಟ್‌ನಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲ'!

By Web DeskFirst Published Nov 25, 2018, 8:08 PM IST
Highlights

ಕ್ರಿಕೆಟ್‌ನಲ್ಲಿ ಮೀಸಲಾತಿಗೆ ಅವಕಾಶ ಮಾಡಿಕೊಟ್ಟರೆ ತಂಡ ಅವನತಿಯಾಗುವುದಲ್ಲದೇ ನಿಜವಾದ ಪ್ರತಿಭೆಗೆ ಅವಕಾಶ ಸಿಗುವುದಿಲ್ಲ. ಇದೀಗ ತಂಡದಲ್ಲಿ ತಾನಿರುವವರೆಗೂ ಮೀಸಲಾತಿಗೆ ಅವಕಾಶ ನೀಡುವುದಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟಿಗ ಹೇಳಿದ್ದಾರೆ.
 

ಜಮ್ಮು-ಕಾಶ್ಮೀರ(ನ.25): ರಣಜಿ ಟೂರ್ನಿಯಲ್ಲಿ ಜಮ್ಮ ಮತ್ತು ಕಾಶ್ಮೀರ ತಂಡ ಮೊದಲ ಗೆಲುವು ದಾಖಲಿಸಿದೆ. ತ್ರಿಪುರ ವಿರುದ್ಧ ಗೆಲುವಿನ ನಗೆ ಬೀರಿದ ಜಮ್ಮ ತಂಡ ಸಂತಸ ಅಲೆಯಲ್ಲಿದೆ. ಗೆಲುವಿಗಾಗಿ ಪರಿತಪಿಸುತ್ತಿದ್ದ ಜಮ್ಮ ಇದೀಗ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದೆ. 

ಜಮ್ಮು ಮತ್ತು ಕಾಶ್ಮೀರ ತಂಡದ ಈ ಯಶಸ್ಸಿಗೆ ಕಾರಣ ತಂಡದ ಮೆಂಟರ್ ಹಾಗೂ ಆಟಗಾರ ಇರ್ಫಾನ್ ಪಠಾಣ್ ಅನ್ನೋದರಲ್ಲಿ ಎರಡು ಮಾತಿಲ್ಲ.  ಗೆಲುವಿನ ಬಳಿಕ ಮಾತನಾಡಿದ ಇರ್ಫಾನ್, ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ನಾನು ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿರುವವರೆಗೂ ಇಲ್ಲಿ ಮೀಸಲಾತಿ ಪದ್ದತಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಕೋಟಾ ಪದ್ದತಿಯಿಂದ ನಿಜವಾದ ಪ್ರತಿಭೆಗೆ ಅವಕಾಶ ಸಿಗಿವುದಿಲ್ಲ. ಇಷ್ಟೇ ಅಲ್ಲ, ಇದರಿಂದ ತಂಡ ಬಲಿಷ್ಠವಾಗುವುದಿಲ್ಲ. ಹೀಗಾಗಿ ಕೋಟಾ ಪದ್ದತಿ ಇಲ್ಲಿರುವುದಿಲ್ಲ. ಅತ್ಯುತ್ತಮ ಪ್ರದರ್ಶನ, ಕಠಿಣ ಅಭ್ಯಾಸ,  ಶಿಸ್ತು ಇವೇ ಮುಖ್ಯ ಎಂದು ಇರ್ಫಾನ್ ಹೇಳಿದ್ದಾರೆ. 

click me!