
ಪೇಶಾವರ(ನ.25): ಕ್ರಿಕೆಟ್ ಪಂದ್ಯದ ನಡುವೆ ನಡೆದ ಮಾತಿನ ಚಕಮಕಿ ಗಂಭೀರ ಸ್ವರೂಪ ಪಡೆದು ಶೂಟೌಟ್ ನಡೆದಿದೆ. ಇದರಿಂದ 7 ಮಂದಿ ಸಾವನ್ನಪ್ಪಿದು, ಒರ್ವ ಗಂಭೀರ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಅಬೊಟೋಬಾದ್‌ನಲ್ಲಿ ನಡೆದಿದೆ.
ಮಕ್ಕಳ ಕ್ರಿಕೆಟ್ ಪಂದ್ಯದ ವೇಳೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಇದು ತಾರಕಕ್ಕೇರಿದೆ. ಇದೇ ವೇಳೆ ಆಯಾ ಗುಂಪುಗಳಿಗೆ ಸಂಗಡಿಗರು ಸೇರಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಒಂದು ಗುಂಪಿನ ನಾಲ್ವರು ಹಾಗೂ ಮತ್ತೊಂದು ಗುಂಪಿನ ಮೂವರು ಸಾಪನ್ನಪ್ಪಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ಕುರಿತು ಅಬೊಟೋಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕ್ರಿಕೆಟ್ ನಡೆಯಬೇಕಿದ್ದ ಮೈದಾನದಲ್ಲಿ ಶೂಟೌಟ್ ನಡೆದಿದ್ದು ದುರಂತ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.