ಅಫ್ಘಾನ್ ತಂಡಕ್ಕೆ ನರೇಂದ್ರ ಮೋದಿ ಶುಭಾಶಯ

First Published Jun 14, 2018, 11:37 AM IST
Highlights

ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಅಫಘಾನಿಸ್ತಾನ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಜತೆಗೆ ಅಫ್ಘಾನಿಸ್ತಾನದ ಜನರಿಗೂ ಶುಭಾಶಯ ಹೇಳಿದ್ದಾರೆ.
 

ಬೆಂಗಳೂರು ಜೂನ್ 14:  ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಅಫಘಾನಿಸ್ತಾನ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಜತೆಗೆ ಅಫ್ಘಾನಿಸ್ತಾನದ ಜನರಿಗೂ ಶುಭಾಶಯ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಅಭಿನಂದನಾ ಸಂದೇಶ ತಿಳಿಸಿರುವ ಮೋದಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಗೈದಿರುವ ಅಫಘಾನಿಸ್ತಾನ ತಂಡವನ್ನು ಮೋದಿ ಶ್ಲಾಘಿಸಿದ್ದು ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಭಾರತವನ್ನು ಆಯ್ಕೆ ಮಾಡಿರುವುದಕ್ಕಾಗಿ ಸಂತಸವಿದೆ ಎಂದಿದ್ದಾರೆ.  

ಭಾರತ-ಅಫ್ಘಾನಿಸ್ತಾನ ಟೆಸ್ಟ್: ಗೆಲುವಿಗಾಗಿ ಟೀಮ್ಇಂಡಿಯಾ ಪ್ಲಾನ್ ಏನು

I congratulate the people of Afghanistan as their cricket team plays their first international test match. Glad that they have chosen to play the historic match with India. Best wishes to both teams! May sports continue to bring our people closer and strengthen ties.

— Narendra Modi (@narendramodi)

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಹ ಅಫಘಾನಿಸ್ಥಾನ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿರುವ ಏಷ್ಯಾದ 5 ನೇ ರಾಷ್ಟ್ರ ಭಾರತದ ವಿರುದ್ಧವೇ ಮೊದಲ ಪಂದ್ಯ ಆಡುತ್ತಿದೆ. ಭಾರತದ ಖಾಯಂ ನಾಯಕ ಚಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
 

Pleasure to meet the young, talented team of Afghanistan alongwith Chief Executive of the Islamic Republic of Afghanistan . The pride in donning their country's test cap for the 1st time was visible on their faces.
Wishing them the best for future✌🏻👏🏻 pic.twitter.com/GWDg1HQkvq

— Rajyavardhan Rathore (@Ra_THORe)
click me!