ಹೇಗಿರಲಿದೆ ಫಿಫಾ ವಿಶ್ವಕಪ್ 2018ರ ಉದ್ಘಾಟನಾ ಸಮಾರಂಭ ?

ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಜೂನ್.14ರಂದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿರುವ ವಿಶ್ವ ಕ್ರೀಡಾ ಹಬ್ಬದ ಮನೋರಂಜನಾ ಕಾರ್ಯಕ್ರಮ ಹೇಗಿರಲಿದೆ? ಯಾವ ಸೆಲೆಬ್ರೆಟಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.


ರಷ್ಯಾ(ಜೂನ್.13): ಕಾತರದಿಂದ ಕಾಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಇನ್ನು ಕೆಲ ಗಂಟೆಗಳು ಮಾತ್ರ ಬಾಕಿ. ಜೂನ್.14ರ ಸಂಜೆ 8.30ಕ್ಕೆ ಆತಿಥೇಯ ರಷ್ಯ ಹಾಗೂ ಸೌದಿ ಅರೇಬಿಯಾ ಮೊದಲ ಪಂದ್ಯ ಆಡಲಿದೆ. ಈ ಮೂಲಕ ಫಿಫಾ ವಿಶ್ವಕಪ್ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಆದರೆ ಈ ಪಂದ್ಯಕ್ಕೂ ಮೊದಲು ಮಾಸ್ಕೋದ ಲಝ್ನಿಕಿ ಕ್ರೀಡಾಂಗಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಸೆಂಟರ್ ಆಫ್ ಅಟ್ರಾಕ್ಶನ್ ಬ್ರಿಟೀಷ್ ರಾಕ್ ಮ್ಯೂಸಿಕ್ ಸ್ಟಾರ್ ರಾಬಿ ವಿಲಿಯಮ್ಸ್ ಹಾಗೂ ರಷ್ಯಾದ ಸೋಪ್ರಾನೋ ಐಡ ಗ್ಯಾರಿಫುಲಿನ ಸಂಗೀತ ರಸಮಂಜರಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸಲಿದೆ.

Latest Videos

ರಾಬಿ ವಿಲಿಯಮ್ಸ್ ರಸಮಂಜರಿ ಬಳಿಕ, ಸ್ಪಾನೀಷ್‌ನ ಟೆನೋರ್ ಹಾಗೂ ಒಪೆರಾ ಐಕಾನ್ ಪ್ಲಾಡಿಕೋ ಡೋಮಿಂಗೋ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜುವಾನ್ ಡಿಯಾಗೋ ಫ್ಲೋರೆಝ್ ಸೇರಿದಂತೆ ಹಲವು ಒಪೆರಾ ಸಿಂಗರ್‌ಗಳು ಫಿಫಾ ಉದ್ಘಟನಾ ಸಮಾರಂಭದ ಕಳೆ ಹೆಚ್ಚಿಸಲಿದ್ದಾರೆ.

ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ

ಈ ಹಿಂದಿನ ಫಿಫಾ ವಿಶ್ವಕಪ್ ಉದ್ಘಟನಾ ಸಮಾರಂಭಗಳು ಪಂದ್ಯ ಆರಂಭಕ್ಕಿಂತ ಒಂದು ಗಂಟೆ ಮೊದಲೇ ಸಮಾರಂಭ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಅರ್ಧ ಗಂಟೆ ಮೊದಲು ವರ್ಣರಂಜಿತ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಫಿಫಾ ವಿಶ್ವಕಪ್: ಈ ಬಾರಿ ಯಾರ ಮುಡಿಗೆ ಚಾಂಪಿಯನ್ ಪಟ್ಟ?

click me!