ನೀವು ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಲು ರಷ್ಯಾಗೆ ತೆರಳುತ್ತಿದ್ದೀರಾ? ನಿಮಗಿದೆ ಎಚ್ಚರಿಕೆ!

 |  First Published Jun 13, 2018, 7:39 PM IST

ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಲು ರಷ್ಯಾಗೆ ತೆರಳೋ ಕ್ರೀಡಾಭಿಮಾನಿಗಳಿಗೆ ಎಚ್ಚರಿಕೆ ಸಂದೇಶವಿದೆ. ನಿಮ್ಮ ಜೊತೆ ಮೊಬೈಲ್, ಲ್ಯಾಪ್ ಟಾಪ್ ಕೊಂಡೊಯ್ದರೆ ನೀವು ಸೇಫಾಗಿ ವಾಪಾಸ್ ಬರೋದು ಕಷ್ಟ. ಯಾಕೆ ಹೀಗೆ? ಇಲ್ಲಿದೆ ವಿವರ


ಅಮೇರಿಕಾ(ಜೂನ್.14): ಫಿಫಾ ವಿಶ್ವಕಪ್ ಟೂರ್ನಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ನಾಳೆ ಫುಟ್ಬಾಲ್ ಕ್ರೀಡಾ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಪಂದ್ಯ ವೀಕ್ಷಣೆಗಾಗಿ ವಿಶ್ವದೆಲ್ಲೆಡೆ ಇರೋ ಅಭಿಮಾನಿಗಳು ರಷ್ಯಾಗೆ ತೆರಳಲು ಸಜ್ಜಾಗಿದ್ದಾರೆ. ಅನೇಕರು ಈಗಾಗಲೇ ರಷ್ಯಾದಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಪಂದ್ಯಕ್ಕಾಗಿ ತೆರಳೋ ಅಭಿಮಾನಿಗಳಿಗೆ ಇದೀಗ ಅಮೇರಿಕಾದ ಫೆಡರಲ್ ಬ್ಯೂರೋ ಇನ್ವೆಸ್ಟ್‌ಮೆಂಟ್ (ಎಫ್‌ಬಿಐ) ಎಚ್ಚರಿಕೆ ಸಂದೇಶ ರವಾನಿಸಿದೆ.

ರಷ್ಯಾಗೆ ತೆರಳೋ ಫುಟ್ಬಾಲ್ ಅಭಿಮಾನಿಗಳಿಗೆ ಅಮೇರಿಕಾದ ಎಫ್‌ಬಿಐನ ಕೌಂಟರ್ ಇಂಟೆಲಿಜೆನ್ಸ್ ಹಾಗೂ ಭದ್ರತಾ ಸಂಸ್ಥೆಯ ನಿರ್ದೇಶಕ ಎವಾನಿನ ಎಚ್ಚರಿಸಿದ್ದಾರೆ.  ರಷ್ಯಾಗೆ ಆಗಮಿಸೋ ಫುಟ್ಬಾಲ್ ಪ್ರೇಮಿಗಳನ್ನ ಟಾರ್ಗೆಟ್ ಮಾಡಿರುವ ಸೈಬರ್ ಹ್ಯಾಕರ್‌ಗಳು ನಿಮ್ಮ ವೈಯುಕ್ತಿಕ ದಾಖಲೆ ಸೇರಿದಂತೆ ಹಲವು ಡಾಟಾಗಳನ್ನ ಕದಿಯಲಿದ್ದಾರೆ ಎಂದು ನಿರ್ದೇಶಕ ಎವಾನಿನ ಹೇಳಿದ್ದಾರೆ.

Latest Videos

undefined

ರಶ್ಯಾದಲ್ಲಿ ವೈಫೈ ಬಳಸುವ ಫಿಫಾ ಅಭಿಮಾನಿಗಳಿಗೆ ಕಾದಿದೆ ಸಂಕಷ್ಠ!

"ನೀವು ಮೊಬೈಲ್, ಲ್ಯಾಪ್ ಟಾಪ್, ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನ ರಷ್ಯಾಗೆ ಕೊಂಡೊಯ್ದರೆ, ಅದರಲ್ಲಿರೋ ದಾಖಲೆಗಳು ಹ್ಯಾಕ್ ಆಗಲಿದೆ. ಹೀಗಾಗಿ ರಷ್ಯಾಗೆ ತೆರಳೋ ಫುಟ್ಬಾಲ್ ಅಭಿಮಾನಿಗಳು ನಿಮ್ಮ ಪರ್ಸನಲ್ ಐಡೆಂಟಿ ಇರೋ ಹಾಗೂ  ದಾಖಲೆಗಳಿರೋ ವಸ್ತುಗಳನ್ನ ಕೊಂಡೊಯ್ಯಬೇಡಿ''- ಎವಾನಿನಾ

ಅಮೇರಿಕಾದ ಅಧಿಕಾರಿಗಳು ಈ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕಿದೆ.  ಅಮೇರಿಕಾದ ರಹಸ್ಯ ದಾಖಲೆಗಳನ್ನೂ ಹ್ಯಾಕರ್‌ಗಳು ಕದಿಯಲಿದ್ದಾರೆ. ಹೀಗಾಗಿ ರಷ್ಯಾಗೆ ತೆರಳೋ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಎಫ್‌ಬಿಐನ ಕೌಂಟರ್ ಇಂಟೆಲಿಜೆನ್ಸ್ ಹಾಗೂ ಭದ್ರತಾ ಸಂಸ್ಥೆಯ ನಿರ್ದೇಶಕ ಎವಾನಿನ ಸೂಚಿಸಿದ್ದಾರೆ.

ಹೇಗಿರಲಿದೆ ಫಿಫಾ ವಿಶ್ವಕಪ್ 2018ರ ಉದ್ಘಾಟನಾ ಸಮಾರಂಭ ?

click me!