PKL 2019 ತೆಲುಗು ಟೈಟಾನ್ಸ್ ಗೆ 6ನೇ ಸೋಲು

Published : Aug 31, 2019, 11:21 AM IST
PKL 2019 ತೆಲುಗು ಟೈಟಾನ್ಸ್ ಗೆ 6ನೇ ಸೋಲು

ಸಾರಾಂಶ

ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ತವರಿನ ಅಭಿಯಾನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ನವದೆಹಲಿ(ಆ.31): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ 6ನೇ ಸೋಲು ಕಂಡಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್, ಟೈಟಾನ್ಸ್ ವಿರುದ್ಧ 34-27 ಅಂಕಗಳಲ್ಲಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೈಟಾನ್ಸ್ ತಂಡವನ್ನು ಹಿಂದಿಕ್ಕಿದ ಪಲ್ಟಾನ್ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದೆ. 

ಮೊದಲಾರ್ಧದಲ್ಲಿ ಪುಣೆ 17-14 ರಿಂದ ಟೈಟಾನ್ಸ್ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತು ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಪುಣೆ ತಂಡ, ಟೈಟಾನ್ಸ್ ಎದುರು 7 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಮಂಜೀತ್ (8 ರೈಡ್ ಅಂಕ), ನಿತಿನ್ ತೋಮರ್ (7 ರೈಡ್ ಅಂಕ) ಪುಣೆ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಟೈಟಾನ್ಸ್‌ನ ತಾರಾ ರೈಡರ್ ಸಿದ್ಧಾರ್ಥ್ ಮತ್ತೊಮ್ಮೆ ವೈಫಲ್ಯ ಕಂಡರು.

PKL7: ಬೆಂಗ್ಳೂರಿಗೆ ಬಂತು ಕಬಡ್ಡಿ; ಕನ್ನಡದಲ್ಲೇ ರೋಹಿತ್ ಆಹ್ವಾನ!

ಡೆಲ್ಲಿಗೆ ಸತತ 4ನೇ ಜಯ 

ಒಂದೆಡೆ ದಬಾಂಗ್ ಡೆಲ್ಲಿ ಸತತ 4ನೇ ಜಯ ಸಾಧಿಸಿದರೆ, ಇನ್ನೊಂದೆಡೆ ಪಾಟ್ನಾ ಪೈರೇಟ್ಸ್ ಸತತ 4ನೇ ಸೋಲುಂಡಿತು. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ, ಪಾಟ್ನಾ ವಿರುದ್ಧ 38-35ರಲ್ಲಿ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತವರಿನ ಚರಣದಲ್ಲಿ ಶೇ.100 ಗೆಲುವು ಸಾಧಿಸಿತು. 

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಮೊದಲಾರ್ಧ ಡೆಲ್ಲಿ 26-17ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ನವೀನ್ ಕುಮಾರ್ (15 ಅಂಕ) ಶ್ರೇಷ್ಠ ರೈಡರ್, ರವೀಂದರ್ ಪೆಹಲ್ (4 ಅಂಕ) ಶ್ರೇಷ್ಠ ಡಿಫೆಂಡರ್ ಆದರು. ತಾರಾ ರೈಡರ್ ಪ್ರದೀಪ್ ನರ್ವಾಲ್ (18 ಅಂಕ) ಹೋರಾಟ ವ್ಯರ್ಥವಾಯಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!