ಮಯಾಂಕ್ -ಕೊಹ್ಲಿ ಫಿಫ್ಟಿ: ಬೃಹತ್ ಮೊತ್ತದತ್ತ ಭಾರತ

By Web DeskFirst Published Aug 31, 2019, 10:10 AM IST
Highlights

ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್‌ವಾಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕಿಂಗ್ಸಟನ್[ಆ.31]: ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ, ಆರಂಭಿಕ ಆಘಾತ ಅನುಭವಿಸಿದೆ. ಶುಕ್ರವಾರ ಆರಂಭವಾದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 264 ರನ್‌ಗಳಿಸಿದೆ. 

ವಿದಾಯದಿಂದ ಹೊರಬಂದ ರಾಯುಡು; ಭಾರತದ ಶಾಹಿದಿ ಆಫ್ರಿದಿ ಎಂದ ಫ್ಯಾನ್ಸ್!

ಮಯಾಂಕ್-ಕೊಹ್ಲಿ ಚೇತರಿಕೆ: 3ನೇ ವಿಕೆಟ್‌ಗೆ ಮಯಾಂಕ್ ಅಗರ್‌ವಾಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಚೇತರಿಕೆ ನೀಡಿದರು. 46 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮಯಾಂಕ್, ಕೊಹ್ಲಿ 69 ರನ್ ಗಳ ಜೊತೆಯಾಟ ನೀಡಿದರು. ಮಯಾಂಕ್ 127 ಎಸೆತಗಳಲ್ಲಿ 7 ಬೌಂಡರಿ ಸಹಿತ 55ರನ್‌ಗಳಿಸಿ ಔಟಾದರು. 4ನೇ ವಿಕೆಟ್‌ಗೆ ಕೊಹ್ಲಿ ಜೊತೆಯಾದ ಅಜಿಂಕ್ಯ ರಹಾನೆ ವಿಂಡೀಸ್ ಬೌಲಸ್ ಗರ್ಳನ್ನು ಸಮರ್ಥವಾಗಿ ಎದುರಿಸಿದರು. ಕೊಹ್ಲಿ 163 ಎಸೆತಗಳನ್ನು ಎದುರಿಸಿ     76 ರನ್ ಸಿಡಿಸಿ ಜೇಸನ್ ಹೋಲ್ಡರ್’ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ರಹಾನೆ     24 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಹನುಮ ವಿಹಾರಿ 42 ಹಾಗೂ ರಿಷಭ್ ಪಂತ್ 27 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಧೋನಿ ಸಾರ್ವಕಾಲಿಕ ದಾಖಲೆ ಮುರಿಯಲು ಸಜ್ಜಾದ ’ಕಿಂಗ್ ಕೊಹ್ಲಿ’..!

ರಾಹುಲ್ ಪೂಜಾರ ಫೇಲ್: ರಾಹುಲ್ (13) ರನ್‌ಗಳಿಸಿ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಕಾರ್ನ್‌ವೆಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (6) ಬೇಗನೆ ಔಟಾದರು. ದೈತ್ಯ ಕ್ರಿಕೆಟಿಗ ಕಾರ್ನ್‌ವೆಲ್ ಪೂಜಾರರನ್ನು ಔಟ್ ಮಾಡುವ ಮೂಲಕ ಅಂ.ರಾ. ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ ಕಬಳಿಸಿದರು. 

ಸ್ಕೋರ್: 
ಭಾರತ ಮೊದಲ ಇನ್ನಿಂಗ್ಸ್ 264/5 
ವಿರಾಟ್ ಕೊಹ್ಲಿ: 76
ಜೇಸನ್ ಹೋಲ್ಡರ್: 39/3
(ಮೊದಲ ದಿನದಂತ್ಯಕ್ಕೆ)

click me!