ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ

Published : Sep 15, 2019, 10:33 AM IST
ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ

ಸಾರಾಂಶ

ಪುಣೇರಿ ಪಲ್ಟನ್‌ ತಂಡ ತವರಿನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ನಿತಿನ್ ತೋಮರ್ ಮಿಂಚಿನ ಪ್ರದರ್ಶನದ ಮೂಲಕ ಪುಣೆಗೆ ಗೆಲುವು ತಂದಿತ್ತರು. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಪುಣೆ(ಸೆ.15): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌, ತನ್ನ ತವ​ರಿನ ಚರಣದಲ್ಲಿ ಗೆಲು​ವಿನ ಆರಂಭ ಪಡೆ​ದು​ಕೊಂಡಿದೆ. ಶನಿ​ವಾರ ಇಲ್ಲಿ ನಡೆದ ಪಂದ್ಯ​ದಲ್ಲಿ ಗುಜ​ರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ 43-33 ಅಂಕ​ಗ​ಳಲ್ಲಿ ಜಯ ಸಾಧಿ​ಸಿತು. ತಂಡ​ಕ್ಕಿದು 5ನೇ ಗೆಲು​ವಾ​ಗಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿ ಉಳಿ​ದು​ಕೊಂಡಿದೆ. ಲೀಗ್‌ ಹಂತ​ದಲ್ಲಿ ಪುಣೆಗೆ ಇನ್ನು 7 ಪಂದ್ಯ ಬಾಕಿ ಇದ್ದು, 7ರಲ್ಲೂ ಗೆದ್ದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಇದೆ.

ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್

ಗುಜ​ರಾತ್‌ 15 ಪಂದ್ಯ​ಗ​ಳಲ್ಲಿ 9ರಲ್ಲಿ ಸೋಲುಂಡಿದ್ದು, ತಂಡ ಪ್ಲೇ-ಆಫ್‌ಗೇರ​ಬೇ​ಕಿ​ದ್ದರೆ ಬಾಕಿ ಇರುವ 7 ಪಂದ್ಯ​ಗ​ಳಲ್ಲಿ ಗೆಲ್ಲಲೇ ಬೇಕಿದೆ. ಶನಿ​ವಾ​ರದ ಪಂದ್ಯ​ದಲ್ಲಿ ಪುಣೆಗೆ ರೈಡರ್‌ಗಳಾದ ನಿತಿನ್‌ ತೋಮರ್‌ (11 ಅಂಕ), ಮಂಜೀತ್‌ (06 ಅಂಕ) ನೆರ​ವಾ​ದರು. ನಾಯಕ ಸುರ್ಜೀತ್‌ 5 ಟ್ಯಾಕಲ್‌ ಅಂಕ ಗಳಿಸಿ ಗೆಲು​ವಿ​ನಲ್ಲಿ ಪ್ರಮುಖ ಪಾತ್ರ ವಹಿ​ಸಿ​ದರು. 20 ರೈಡ್‌ ಅಂಕ, 18 ಟ್ಯಾಕಲ್‌ ಅಂಕ ಗಳಿ​ಸಿದ ಪುಣೆ, ಸುಲ​ಭ ಗೆಲುವು ಸಾಧಿ​ಸಿತು. ಮೊದಲಾರ್ಧದ ಅಂತ್ಯಕ್ಕೆ 24-10ರ ಮುನ್ನಡೆ ಸಾಧಿ​ಸಿದ್ದು, ಪುಣೆ ಗೆಲು​ವನ್ನು ಸುಲ​ಭ​ಗೊ​ಳಿ​ಸಿತು.

PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!

ಹರ್ಯಾಣ ಜಯದ ಓಟ!

ಶನಿವಾರ ನಡೆದ 2ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌, ತಮಿಳ್‌ ತಲೈವಾಸ್‌ ವಿರುದ್ಧ 43-35 ಅಂಕಗಳಲ್ಲಿ ಜಯ ಸಾಧಿಸಿತು. ಟೂರ್ನಿಯಲ್ಲಿ ಹರ್ಯಾಣಕ್ಕೆ ಇದು 10ನೇ ಜಯವಾಗಿದೆ. 54 ಅಂಕಗಳಿಸಿರುವ ಹರ್ಯಾಣ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 

ತಲೈವಾಸ್‌ 11ನೇ ಸೋಲಿನೊಂದಿಗೆ ಕೊನೆ ಸ್ಥಾನದಲ್ಲಿದ್ದು, ತಂಡ ಪ್ಲೇ-ಆಫ್‌ ರೇಸ್‌ನಿಂದ ಹೊರ​ಬಿ​ದ್ದಿದೆ. ಮೊದಲಾರ್ಧದಲ್ಲಿ 16-14ರ ಮುನ್ನಡೆ ಪಡೆ​ದಿದ್ದ ಹರ್ಯಾಣ, ದ್ವಿತೀ​ಯಾ​ರ್ಧ​ದಲ್ಲಿ ಭರ್ಜರಿ ಆಟವಾಡಿ 8 ಅಂಕ​ಗ​ಳಿಂದ ಗೆಲುವು ಪಡೆ​ಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏನಿದು ಬಜಾಜ್ ಚೇತಕ್ C25 ವಿಶೇಷತೆ? WPL ಗೆದ್ದ ಆರ್‌ಸಿಬಿ ಗರ್ಲ್ಸ್‌ಗೆ ಸೇರಿದ ಲೇಟೆಸ್ಟ್ ಎಲೆಕ್ಟ್ರಿಕ್ ರೈಡ್ ಸೆನ್ಸೇಷನ್‌!
ರಣಜಿ ಟ್ರೋಫಿ: ಮುಂಬೈ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗುಬಡಿದು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ! ಕೆ.ಎಲ್ ಭರ್ಜರಿ ಶತಕ