
ಅನೇಕರಿಗೆ ದೇಹದ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಅದಿಲ್ಲ ಇದಿಲ್ಲ ಎಂದು ಕೊರಗುತ್ತಾರೆ. ಆದರೆ ಈ ಮಗುವಿಗೆ ಎರಡು ಕೈಗಳು ಇಲ್ಲ ಕಾಲುಗಳು ಇಲ್ಲ, ಬಿಲ್ಲುಗಾರಿಕೆಗೆ ಎರಡು ಕೈಗಳು ಬಹಳ ಅಗತ್ಯ ಆದರೆ ಈಕೆಗೆ ಎರಡು ಕೈಗಳು ಇಲ್ಲ, ಇದರ ಜೊತೆಗೆ ಕಾಲುಗಳು ಸಹ ಇಲ್ಲ. ಅನೇಕರು ಆಕೆ ಬಿಲ್ಲನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಇದೆಲ್ಲವನ್ನು ಆಕೆ ಸುಳ್ಳು ಮಾಡಿದ್ದಾಳೆ. ಬಾಲ್ಯದಲ್ಲಿ ನಡೆದ ವಿದ್ಯುತ್ ಅಪಘಾತವೊಂದರಲ್ಲಿ ಕೈ ಕಾಲುಗಳೆರಡನ್ನು ಕಳೆದುಕೊಂಡ ಆಕೆ ಇಂದು ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಒಲಿಂಪಿಯನ್. ಈಕೆಯ ಈ ಅಮೋಘ ಸಾಧನೆಯ ಹಿಂದಿರುವುದು ಆಕೆಯ ಗುರು ಕುಲ್ದೀಪ್ ವೇದವನ್.
5 ವರ್ಷದವಳಿದ್ದಾಗಲೇ ಕರೆಂಟ್ ಶಾಕ್‌ನಿಂದ ಕೈ ಕಾಲುಗಳೆರಡನ್ನು ಕಳೆದುಕೊಂಡ ಪಾಯಲ್
ಕೇವಲ 2 ವರ್ಷದವಳಿದ್ದಾಗ ಪಾಯಲ್ ಅರಿವಿಲ್ಲದೇ 11,000 ವೋಲ್ಟ್ ಕರೆಂಟ್ ವೈರೊಂದನ್ನು ಮುಟ್ಟಿದ ಪರಿಣಾಮ ತೀವ್ರವಾದ ಕರೆಂಟ್ ಶಾಕ್‌ಗೆ ಒಳಗಾಗಿದ್ದಳು. ಪರಿಣಾಮ ಆಕೆ ತನ್ನೆಲ್ಲಾ ಕೈ ಕಾಲುಗಳನ್ನು ಕಳೆದುಕೊಳ್ಳಬೇಕಾಯ್ತು. ಇಂಥಾ ಸ್ಥಿತಿಯಲ್ಲಿ ಆಕೆಯ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಆಕೆಯ ಪೋಷಕರು ಆಕೆಯನ್ನು ವಿಶೇಷ ಚೇತನ ಮಕ್ಕಳಿಗಾಗಿಯೇ ಇರುವ ಅನಾಥಾಶ್ರಮವೊಂದಕ್ಕೆ ಕಳುಹಿಸಿದರು. ಅಲ್ಲಿಂದಲೇ ಆಕೆಯ ಹೊಸ ಭವಿಷ್ಯ ಆರಂಭವಾಯ್ತು. ಪಾಯಲ್ ತನ್ನ ಬಾಯಿಯನ್ನೇ ಬಳಸಿಕೊಂಡು ಪೇಂಟಿಂಗ್ ಮಾಡುವುದಕ್ಕೆ ಶುರು ಮಾಡಿದಳು. ಅದು ಹೃದಯ ಗೆಲ್ಲುವ ಕಲಾಕೃತಿಗಳಾಯ್ತು. ಆಕೆ ಬಿಡಿಸಿದ ಒಂದು ಚಿತ್ರಕಲೆ ವೈರಲ್ ಕೂಡ ಆಗಿತ್ತು. ಈಕೆಯ ಆ ಚಿತ್ರಕಲೆಯೇ ಆಕೆಗೆ ಆಕೆಯ ಕೋಚ್ ಜೊತೆ ಪರಿಚಯ ಆಗುವುದಕ್ಕೆ ಕಾರಣ ಆಯ್ತು.
ಅವರೇ ಕುಲ್ದೀಪ್ ವೇದವನ್ ಅವರೊಂದಿಗಿನ ಆ ಭೇಟಿ ಆಕೆಯನ್ನು ಜಮ್ಮು ಕಾಶ್ಮೀರದಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನದ ಬಿಲ್ಲುಗಾರಿಕೆ ಅಕಾಡೆಮಿಗೆ ಸೇರಿಸಿತು. ಅಲ್ಲಿ ಅವರು ಆಕೆಗೆ ಕೃತಕವಾದ ಅಂಗಾಂಗಳನ್ನು ತಯಾರಿಸಿದರು. ಈ ಕೃತಕ ಕಾಲುಗಳಿಂದ ಪಾಯಲ್ ಬಿಲ್ಲನ್ನು ಮೇಲೆತ್ತಬಹುದಿತ್ತು. ಹಾಗೆಯೇ ಅದರ ತಂತಿ ಅಥವ ಸ್ಪಿಂಗ್‌ನ್ನು ಆಕೆ ಭುಜದ ಸಹಾಯದಿಂದ ಹಿಂದಕ್ಕೆ ಎಳೆಯಬಹುದಿತ್ತು. ಆಕೆಯ ಈ ಎಲ್ಲಾ ಸಾಧನೆಯ ಹಿಂದೆ ಜೊತೆಯಾಗಿ ನಿಂತಿದ್ದು,ಆಕೆಯ ಸೋದರಿ.
ಸೋದರಿ ಆಕೆಗೆ ತಿನಿಸುವುದು ಸ್ನಾನ ಮಾಡಿಸುವುದು ಸೇರಿದಂತೆ ಎಲ್ಲಾ ಕೆಲಸವನ್ನು ಆಕೆಗೆ ಮಾಡಿಕೊಡುತ್ತಿದ್ದಳು. ಇದರಿಂದ ಪಾಯಲ್‌ಗೆ ತನ್ನೆಲ್ಲಾ ಏಕಾಗೃತೆಯನ್ನು ತನ್ನ ಗುರಿಯತ್ತ ಕೇಂದ್ರಿಕರಿಸಲು ಸಹಾಯ ಆಯ್ತು.
ಹೀಗೆ ನೋವಿನಿಂದ ನಲಿವಿನೆಡೆಗೆ ಅಡಿ ಇಟ್ಟಿರುವ ಪಾಯಲ್, ರಾಷ್ಟ್ರೀಯ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಈಗ ಎರಡು ಚಿನ್ನದ ಪದಕ ವಿಜೇತೆ. ದೇಶಕ್ಕೆ ಚಿನ್ನ ತರುವುದಕ್ಕಾಗಿ ಆಕೆ ದಿನವೂ ತರಬೇತಿ ಪಡೆಯುತ್ತಿದ್ದಾಳೆ. ಗುರಿ ಸಾಧನೆಯ ಮನಸ್ಸಿನ ಜೊತೆಗೆ ಅದಕ್ಕೆ ತಕ್ಕದಾದ ಬೆಂಬಲವಿದ್ದರೆ ಕೈಗಳು ಬೇಕಿಲ್ಲ ಎಂಬುದನ್ನು ಈ ಪಾಯಲ್ ಸಾಬೀತು ಮಾಡಿದ್ದಾಳೆ. ಈ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.
ಇದನ್ನೂ ಓದಿ: ಐಐಟಿಯನ್‌ಗೆ ಸಿಕ್ತು ಅಮೇಜಾನ್‌ನಲ್ಲಿ ಉದ್ಯೋಗ: ಅಪ್ಪನ ಪ್ರತಿಕ್ರಿಯೆ ಭಾರಿ ವೈರಲ್
ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಭಿಕ್ಷುಕಿ ಬಳಿ ಲಕ್ಷಕ್ಕೂ ಅಧಿಕ ಹಣ ಪತ್ತೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.