ಕಾಶ್ಮೀರಕ್ಕಾಗಿ ಸೇನಾ ಕ್ಯಾಪ್ ಧರಿಸುತ್ತಾ ಪಾಕ್ ತಂಡ? ಕೋಚ್ ಮಿಸ್ಬಾ ನೀಡಿದ್ರು ಉತ್ತರ!

By Web DeskFirst Published Sep 27, 2019, 3:03 PM IST
Highlights

2009ರ ಬಳಿಕ ಪಾಕಿಸ್ತಾನ ಇದೇ ಮೊದಲ ಬಾರಿಗೆ ಏಕದಿನ ಸರಣಿ ಆಯೋಜಿಸುತ್ತಿದೆ. ಭಯೋತ್ಪಾದಕರ ದಾಳಿ ಬಳಿಕ ನಿಂತು ಹೋಗಿದ್ದ ಕ್ರಿಕೆಟ್ ಇದೀಗ ಆರಂಭವಾಗುತ್ತಿದೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಲು ಬರೋಬ್ಬರಿ 10 ವರ್ಷ ತೆಗೆದುಕೊಂಡಿರುವ ಪಾಕಿಸ್ತಾನ ಇದೀಗ ತಮಗೆ ಸಂಬಂಧವಿಲ್ಲದೆ ಕಾಶ್ಮೀರ ವಿಚಾರ ಚರ್ಚೆಗೆ ಮುಂದಾಗಿದೆ. 
 

ಕರಾಚಿ(ಸೆ.27): ಭಯೋತ್ಪಾದ ದಾಳಿಯಿಂದ ಪಾಕಿಸ್ತಾನದಲ್ಲಿ ನಿಂತು ಹೋಗಿದ್ದ ಏಕದಿನ ಕ್ರಿಕೆಟ್ ಮತ್ತೆ ಆರಂಭವಾಗುತ್ತಿದೆ. ಏಕದಿನ ಸರಣಿಗಾಗಿ ಶ್ರೀಲಂಕಾ ತಂಡ ಪಾಕಿಸ್ತಾನದಲ್ಲಿ ಬೀಡು ಬಿಟ್ಟಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯಕ್ಕೆ ಹೈ ಸೆಕ್ಯೂರಿಟಿ ನೀಡಲಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕ್ರಿಕೆಟ್ ಬಿಟ್ಟು ಕಾಶ್ಮೀರ ವಿಚಾರ ಚರ್ಚೆಯಾಗಿದೆ.

ಇದನ್ನೂ ಓದಿ: ಫೋಟೋ ಶೇರ್ ಮಾಡಿದ ಹಫೀಜ್; ಕೊಹ್ಲಿ ನಕಲು ಮಾಡಬೇಡಿ ಎಂದ ಫ್ಯಾನ್ಸ್

ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕೋಚ್ ಮಿಸ್ಬಾ ಉಲ್ ಹಕ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ವೇಳೆ ಪಾಕಿಸ್ತಾನಿ ಪತ್ರಕರ್ತ ಕಾಶ್ಮೀರ ವಿವಾದ ಕುರಿತು ಪ್ರಶ್ನಿಸಿದ್ದಾರೆ. ಕಾಶ್ಮೀರದ ಮೇಲಿನ ವಿಶೇಷ ಸ್ಥಾನ ರದ್ದು ಮಾಡಿದ ಬಳಿಕ ಕಾಶ್ಮೀರದಲ್ಲಿ ಶಾಂತಿ ಇಲ್ಲದಾಗಿದೆ. ಕಾಶ್ಮೀರಕ್ಕಾಗಿ ಪಾಕಿಸ್ತಾನ ತಂಡ ಧನಿ ಎತ್ತುವ ಯಾವುದಾದರೂ ಆಲೋಚನೆ ಇದೆಯಾ? ಪುಲ್ವಾಮ ದಾಳಿಗೆ ಟೀಂ ಇಂಡಿಯಾ ಸೇನಾ ಕ್ಯಾಪ್ ಧರಿಸಿ ಆಡಿತ್ತು. ಈ ರೀತಿ ಪಾಕಿಸ್ತಾನ ಪ್ಲಾನ್ ಎನು ಎಂದು ಕೇಳಿದ್ದಾನೆ.

ಇದನ್ನೂ ಓದಿ: ಪಾಕಿಸ್ತಾನ ಜೊತೆ ಕ್ರಿಕೆಟ್ ಸರಣಿಗೆ ಭಾರತ ರೆಡಿ; ಆದರೆ 1 ಕಂಡೀಷನ್!

ಈ ಪ್ರಶ್ನೆಗೆ ಉತ್ತರಿಸಿದ ಮಿಸ್ಬಾ, ಕಾಶ್ಮೀರಿಗರ ಮೇಲಾಗುತ್ತಿರವ ಅನ್ಯಾಯಕ್ಕೆ ಪಾಕಿಸ್ತಾನವೇ ಧನಿ ಎತ್ತಿದೆ. ಸದ್ಯ ನಾವು ಕ್ರಿಕೆಟ್ ಕುರಿತು ಮಾತನಾಡುವ ಎಂದು ಮಿಸ್ಬಾ ಹೇಳಿದ್ದಾರೆ. ಈ ಮೂಲಕ ಕಾಶ್ಮೀರ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಸಂಬಂಧವಿಲ್ಲದ ಕಾಶ್ಮೀರ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿರುವುದಕ್ಕೆ ಭಾರತೀಯರಿಂದ ಆಕ್ರೋಷ ವ್ಯಕ್ತವಾಗಿದೆ. 

 

Misbah-ul-Haq "the whole of Pakistan has sympathies with Kashmir - but let's talk cricket" pic.twitter.com/lAMW0c9Itd

— Saj Sadiq (@Saj_PakPassion)

ಇದನ್ನೂ ಓದಿ: ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್ ಸಚಿವನಿಗೆ ಲಂಕಾ ಚಾಟಿ!

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ 3 ಏಕದಿನ ಪಂದ್ಯಗಳ ಸರಣಿ ಇಂದಿನಿಂದ(ಸೆ.27) ರಿಂದ ಆರಂಭವಾಗುತ್ತಿದೆ. 2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಬಳಿಕ ಯಾವುದೇ ತಂಡ ಪಾಕಿಸ್ತಾನ ಪ್ರವಾಸ ಮಾಡಿಲ್ಲ. ಆದರೆ 2015ರಲ್ಲಿ ಜಿಂಬಾಬ್ವೆ ಹಾಗೂ 2017ರಲ್ಲಿ ಲಂಕಾ ತಂಡ ಟಿ20 ಸರಣಿಗಾಗಿ ಪಾಕ್ ಪ್ರವಾಸ ಮಾಡಿತ್ತು.

ಪಾಕಿಸ್ತಾನ ವಿರುದ್ಧದ ಸರಣಿಗೆ ಶ್ರೀಲಂಕಾದ 10 ಕ್ರಿಕೆಟಿಗರು ಹಿಂದೇಟು ಹಾಕಿದ್ದರು. ಪಾಕ್ ಪ್ರವಾಸಕ್ಕೆ ತಾವು ಸಿದ್ಧರಿಲಲ್ಲ ಎಂದು ಲಂಕಾ ಕ್ರಿಕೆಟ್ ಮಂಡಳಿಗೆ ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಪಾಕಿಸ್ತಾನ ಪ್ರವಾಸಕ್ಕೆ ಸಿದ್ಧವಿರುವ ಯುವ ಕ್ರಿಕೆಟಿಗರನ್ನು ಆಯ್ಕೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿದೆ.

click me!