
ಲಾಹೋರ್: ಮೇ 24ರಂದು ನಿಗದಿಯಾಗಿರುವ ಚೊಚ್ಚಲ ಆವೃತ್ತಿಯ ಎನ್‌ಸಿ ಕ್ಲ್ಯಾಸಿಕ್(ನೀರಜ್ ಚೋಪ್ರಾ ಕ್ಲ್ಯಾಸಿಕ್) ಜಾವೆಲಿನ್ ಥ್ರೋ ಕೂಟದಲ್ಲಿ ಪಾಲ್ಗೊಳ್ಳುವಂತೆ ಹಾಲಿ ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನದ ನದೀಂ ಅರ್ಶದ್‌ಗೆ 2 ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಆಹ್ವಾನ ನೀಡಿದ್ದರು. ಆದರೆ ಇದನ್ನು ಅರ್ಶದ್ ತಿರಸ್ಕರಿಸಿದ್ದಾರೆ. ಮೇ 22ರಂದು ಏಷ್ಯನ್ ಅಥ್ಲೆಟಿಕ್ಸ್‌ಗಾಗಿ ಕೊರಿಯಾಗೆ ತೆರಳಲಿರುವ ಕಾರಣ ಮೇ 24ರ ಬೆಂಗಳೂರಿನ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.
ಮೇ 24ಕ್ಕೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಕೂಟ
ನವದೆಹಲಿ: ಮೇ24ರಂದು ನಿಗದಿಯಾಗಿರುವ ಚೊಚ್ಚಲ ಆವೃತ್ತಿಯ ಎನ್‌ಸಿ ಕ್ಲ್ಯಾಸಿಕ್ (ನೀರಜ್ ಚೋಪ್ರಾ ಕ್ಲ್ಯಾಸಿಕ್ ) ಜಾವೆಲಿನ್ ಥ್ರೋ ಕೂಟ ಪಂಚಕುಲಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ ಎಂದು 2 ಬಾರಿ ಒಲಿಂಪಿಕ್ ಪದಕ ವಿಜೇತ, ಭಾರತದ ತಾರಾ ಅಥ್ಲೀಟ್ ನೀರಜ್ ಚೋಪ್ರಾ ತಿಳಿಸಿದ್ದಾರೆ.
ಸೋಮವಾರ ಆನ್‌ಲೈನ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ನೀರಜ್ ಈ ವಿಷಯ ತಿಳಿಸಿದರು. ಪಂಚಕುಲಾ ಕ್ರೀಡಾಂಗಣದಲ್ಲಿ ನೇರ ಪ್ರಸಾರಕ್ಕೆ ಅಗತ್ಯವಿರುವ ಫ್ಲಡ್‌ಲೈಟ್ಸ್ ವ್ಯವಸ್ಥೆ ಇಲ್ಲದ ಕಾರಣ, ಕೂಟವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಈ ಬಗ್ಗೆ ಕರ್ನಾಟಕ ಸಿಎಂ ಜೊತೆ ಮಾತನಾಡಿದ್ದೇನೆ ಎಂದರು.
ಐಪಿಎಲ್ 2025; ಹಾಲಿ ಚಾಂಪಿಯನ್ ಸತತ ಸೋಲಿಗೆ ಇಲ್ಲಿವೆ ನೋಡಿ 5 ಕಾರಣಗಳು!
ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಶ್ರೇಷ್ಠ ಜಾವೆಲಿನ್ ಎಸೆತದಲ್ಲಿ ಸ್ಪರ್ಧಿಸಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್, ಒಲಿಂಪಿಕ್ ಕಂಚು ವಿಜೇತ ಜರ್ಮನಿಯ ಥಾಮಸ್ ರೊಲ್ಹರ್, ಜೀನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಮ್ಸನ್ ಸೇರಿ ಅನೇಕರು ಈಗಾಗಲೇ ತಮ್ಮ ಸ್ಪರ್ಧೆ ಖಚಿತಪಡಿಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಆಶ್ರಯದಲ್ಲಿ ನೀರಜ್ ಚೋಪ್ರಾ, ಜೆಎಸ್ ಡಬ್ಲ್ಯು ಸಂಸ್ಥೆಯಿಂದ ಈ ಕೂಟವನ್ನು ಜಂಟಿಯಾಗಿ ಆಯೋಜನೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಅಥ್ಲೆಟಿಕ್ಸ್: ರಾಜ್ಯದ ಯಶಸ್‌ಗೆ ಚಿನ್ನ
ಕೊಚ್ಚಿ: ಇಲ್ಲಿ ನಡೆಯುತ್ತಿರುವ 28ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕದ ಯಶಸ್ ಪಿ. ಪುರುಷರ 400 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಕೂಟದಲ್ಲಿ ರಾಜ್ಯಕ್ಕೆ ದೊರೆತ 3ನೇ ಪದಕ. ಬುಧವಾರ ಅವರು 49.32 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಚಿನ್ನ ಜಯಿಸಿದರು. ಜೆಎಸ್‌ಡಬ್ಲ್ಯೂ ಪ್ರತಿನಿಧಿಸಿದ್ದ ಸುಭಾಸ್ ದಾಸ್ 50.11 ಸೆಕಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ, ಗುಜರಾತಿನ ರುಚಿತ್ ಮೋರಿ 51.08 ಸೆಕೆಂಡ್‌ನಲ್ಲಿ ಕ್ರಮಿಸಿ ಕಂಚಿಗೆ ತೃಪ್ತಿ ಪಟ್ಟುಕೊಂಡರು. ಗುರುವಾರ ಚಾಂಪಿಯನ್‌ಶಿಪ್ ಕೊನೆಗೊಳ್ಳಲಿದೆ.
ಸಚಿನ್ ತೆಂಡುಲ್ಕರ್ ಎಷ್ಟು ಶ್ರೀಮಂತ ವ್ಯಕ್ತಿ ಗೊತ್ತಾ? ಅವರ ಒಟ್ಟು ಸಂಪತ್ತು ಎಷ್ಟು?
ವರ್ಲ್ಡ್ 10ಕೆ ರೇಸ್‌ಗೆ ಸಜ್ಜುಗೊಂಡ ಬೆಂಗ್ಳೂರು
ಬೆಂಗಳೂರು: ಏ.27ರಂದು ನಗರದಲ್ಲಿ ನಡೆಯಲಿರುವ ಟಿಸಿಎಸ್ ವಿಶ್ವ 10ಕೆ ರೇಸ್‌ಗೆ ಬೆಂಗಳೂರು ಸಜ್ಜುಗೊಂಡಿದೆ. 35 ಸಾವಿರದಷ್ಟು ಮಂದಿ ಪಾಲ್ಗೊಳ್ಳುವ ರೇಸ್‌ಗಳು ಸುಗಮವಾಗಿ ನಡೆಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ರೇಸ್ ವ್ಯವಸ್ಥೆ ಬಗ್ಗೆ ಬುಧವಾರ ಆಯೋಜಕರು ಮಾಹಿತಿ ನೀಡಿದರು. ರೇಸ್‌ಗಾಗಿ 10ಕ್ಕೂ ಹೆಚ್ಚು ವೈದ್ಯಕೀಯ ಕೇಂದ್ರ, 10 ಆಂಬ್ಯುಲೆನ್ಸ್, 10 ಬೈಕ್ ಆ್ಯಂಬುಲೆನ್ಸ್, ಜೊತೆಗೆ 290ರಷ್ಟು ವೈದ್ಯರು, ಫಿಸಿಯೋಥೆರಪಿಸ್ಟ್, ನರ್ಸ್‌ಗಳು ಇರಲಿದ್ದಾರೆ. 2 ಚಿಕ್ಕಿ ಸ್ಟಾಲ್, 11 ಶೌಚಾಲಯ, 500ಕ್ಕೂ ಹೆಚ್ಚು ಪೊಲೀಸರು, 1500ಕ್ಕೂ ಹೆಚ್ಚು ಸ್ವಯಂಸೇವಕರು ಇರಲಿದ್ದಾರೆ.
ಬೆಳಗ್ಗೆ 5.30ಕ್ಕೆ ವಿಶ್ವ ಮಹಿಳಾ 10ಕೆ ರೇಸ್, 6.08ಕ್ಕೆ ಪುರುಷರ ವಿಶ್ವ 10ಕೆ ರೇಸ್ ಕಾಮರಾಜ ರಸ್ತೆಯ ಆರ್ಮಿ ಪಬ್ಲಿಕ್ ಸ್ಕೂರ್ ಹೊರಗಡೆ ಆರಂಭಗೊಳ್ಳಲಿದೆ. ಬಳಿಕ ಕಾಮರಾಜ ರಸ್ತೆಯಲ್ಲೇ ರೇಸ್ ಕೊನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.