ನೀರಜ್‌ ಚೋಪ್ರಾಗೆ ವಿಶ್ವದಾಖಲೆ ವೀರ, 3 ಒಲಿಂಪಿಕ್ಸ್‌ ವಿಜೇತ ಯಾನ್ ಜೆಲೆಜ್ನಿ ನೂತನ ಕೋಚ್!

By Naveen Kodase  |  First Published Nov 10, 2024, 10:09 AM IST

ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತ ನೀರಜ್ ಚೋಪ್ರಾ, ವಿಶ್ವದಾಖಲೆ ವೀರ ಚೆಕ್ ಗಣರಾಜ್ಯದ ಯಾನ್ ಜೆಲೆಜ್ನಿ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಲಿದ್ದಾರೆ. 


ನವದೆಹಲಿ: ಜಾವೆಲಿನ್ ಎಸೆತದ ವಿಶ್ವದಾಖಲೆ ವೀರ ಚೆಕ್ ಗಣರಾಜ್ಯದ ಯಾನ್ ಜೆಲೆಜ್ನಿ ಅವರು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ.

ನೀರಜ್ ಈ ವರೆಗೂ ಜರ್ಮನಿಯ ಕ್ಲಾಸ್ ಬಾರ್ಟೋನಿಟ್ಟ ಅವರಿಂದ ತರಬೇತಿ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರಿಂದ ದೂರವಾಗಿದ್ದರು. ಇನ್ನು ಮುಂದೆ 58 ವರ್ಷದ ಜೆಲೆಜ್ನಿ ಜೊತೆ ತರಬೇತಿ ಪಡೆಯಲಿದ್ದೇನೆ ಎಂದು ನೀರಜ್ ಮಾಹಿತಿ ಹಂಚಿಕೊಂಡಿದ್ದಾರೆ. ಜೆಲೆಜ್ನಿ  1996ರಲ್ಲಿ 98.48 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದು, ಈಗಲೂ ವಿಶ್ವದಾಖಲೆಯಾಗಿಯೇ ಉಳಿದಿದೆ. ಅವರು 1992ರ ಬಾರ್ಸಿಲೋನಾ, 1996ರ ಅಟ್ಲಾಂಟ, 2000ರ ಸಿಡ್ನಿ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದು, 1993, 1995, 2001ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

Tap to resize

Latest Videos

undefined

ಧ್ರುವ್ ಜುರೆಲ್ ಮಿಂಚಿದ್ರೂ ಆಸೀಸ್ ಎದುರು ಭಾರತ 'ಎ' ತಂಡಕ್ಕೆ ಮತ್ತೆ ಸೋಲು!

ನೀರಜ್‌ಗೆ ಜೆಲೆಜ್ನಿ ಸ್ಫೂರ್ತಿ, ಹೀರೋ

ನೀರಜ್ ಪಾಲಿಗೆ ಜೆಲೆಜ್ನಿಯೇ 'ಹೀರೋ'. ಜಾವೆಲಿನ್ ಎಸೆತದ ಆರಂಭಿಕ ದಿನಗಳಲ್ಲಿ ಜೆಲೆಜ್ನಿ ಅವರ ಜಾವೆಲಿನ್ ಎಸೆತದ ವಿಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದ ನೀರಜ್‌ಗೆ ಈಗ ತಮ್ಮ 'ಹೀರೋ'ರಿಂದಲೇ ನೇರ ವಾಗಿ ಕಲಿಯುವ ಅವಕಾಶ ಲಭಿಸಿದೆ.

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ, ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್‌ ಇತಿಹಾಸದಲ್ಲೇ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದ ಏಕೈಕ ಅಥ್ಲೀಟ್ ಎನ್ನುವ ಹಿರಿಮೆಗೆ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು.

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸೋತರೆ ಕೋಚ್‌ ಸ್ಥಾನದಿಂದ ಗಂಭೀರ್‌ ವಜಾ?

ಕಬಡ್ಡಿ: ಬುಲ್ಸ್‌ಗೆ 6ನೇ ಸೋಲು

ಹೈದರಾಬಾದ್‌: ಬೆಂಗಳೂರು ಬುಲ್ಸ್‌ 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 6ನೇ ಸೋಲನುಭವಿಸಿದೆ. ಶನಿವಾರ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಪಂದ್ಯದಲ್ಲಿ ಬುಲ್ಸ್‌ಗೆ 29-40 ಅಂಕಗಳಿಂದ ಸೋಲು ಎದುರಾಯಿತು. 8 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಬುಲ್ಸ್‌, 11ನೇ ಸ್ಥಾನದಲ್ಲೇ ಬಾಕಿಯಾಗಿದೆ.

ಮೊದಲಾರ್ಧಕ್ಕೆ ಬುಲ್ಸ್‌ 12-15ರಿಂದ ಹಿನ್ನಡೆಯಲ್ಲಿತ್ತು. ಬಳಿಕ ಮತ್ತಷ್ಟು ಕಳಪೆ ಆಟವಾಡಿದ ಬುಲ್ಸ್‌, 11 ಅಂಕಗಳ ಅಂತರದಲ್ಲಿ ಸೋತಿತು. ಅಕ್ಷಿತ್‌(11) ಹೋರಾಟ ವ್ಯರ್ಥವಾಯಿತು. ಬೆಂಗಾಲ್‌ನ ನಿತಿನ್‌ 14, ಮಣೀಂದರ್‌ 10 ಅಂಕ ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ತೆಲುಗು ಟೈಟಾನ್ಸ್‌ 34-33ರಲ್ಲಿ ಜಯಗಳಿಸಿತು.

ಇಂದಿನ ಪಂದ್ಯಗಳು

ಯುಪಿ-ಯು ಮುಂಬಾ, ರಾತ್ರಿ 8ಕ್ಕೆ

ಗುಜರಾತ್‌-ಹರ್ಯಾಣ, ರಾತ್ರಿ 9ಕ್ಕೆ
 

click me!