ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಗುಂಡೇಟಿಗೆ ಬಲಿ

Published : Nov 01, 2025, 01:20 PM IST
national level kabaddi player shot dead

ಸಾರಾಂಶ

Tejpal singh shot dead: ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜಗ್ರಾಂವ್‌ನಲ್ಲಿರುವ ಲುಧಿಯಾನ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಹಾಡಹಗಲೇ  ಈ ಘಟನೆ ನಡೆದಿದ್ದು, ಸ್ಥಳೀಯರ ಬೆಚ್ಚಿ ಬೀಳಿಸಿದೆ.

ಹಾಡಹಗಲೇ ಕಬಡ್ಡಿ ಆಟಗಾರ ತೇಜ್‌ಪಾಲ್ ಸಿಂಗ್ ಹತ್ಯೆ:

ಚಂಢೀಗಢ: ರಾಷ್ಟ್ರಮಟ್ಟದ ಕಬ್ಬಡಿ ಆಟಗಾರನೋರ್ವನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಮೃತ ಯುವಕನನ್ನು 26 ವರ್ಷದ ತೇಜ್‌ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಪಂಜಾಬ್‌ನ ಜಗ್ರಾಂವ್‌ನಲ್ಲಿರುವ ಲುಧಿಯಾನ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿಯೇ ಶುಕ್ರವಾರ ಹಾಡಹಗಲೇ ಈ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ತೇಜ್‌ಪಾಲ್ ಸಿಂಗ್ ಜಗ್ರಾಂವ್ ಬಳಿಯ ಗಿಡ್ಡರ್‌ವಿಂಡಿ ಗ್ರಾಮದವರಾಗಿದ್ದು, ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರಾಗಿದ್ದರು. ಹರಿ ಸಿಂಗ್ ಆಸ್ಪತ್ರೆ ರಸ್ತೆಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಸ್ನೇಹಿತರ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿ ಹತ್ಯೆ

ಇವರು ಸ್ನೇಹಿತರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇವರನ್ನು ಅಡ್ಡಗಟ್ಟಿದ್ದ 5-6 ಜನರಿದ್ದ ಗುಂಪು ಮೊದಲಿಗೆ ಇವರಿಗೆ ದೊಣ್ಣೆಯಿಂದ ಥಳಿಸಿದ್ದಾರೆ. ನಂತರ ಆ ದುಷ್ಕರ್ಮಿಗಳ ತಂಡದಲ್ಲಿದ್ದ ಓರ್ವ ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ತೇಜ್‌ಪಾಲ್‌ ಎದೆಗೆ ಗುಂಡಿಕ್ಕಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಕೂಡಲೇ ತೇಜ್‌ಪಾಲ್ ಅವರ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲೇ ಅವರು ಪ್ರಾಣಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ತೇಜ್‌ಪಾಲ್ ಸಿಂಗ್ ಹತ್ಯೆಗೆ ಹಳೆಯ ದ್ವೇಷವೇ ಕಾರಣ ಕೃತ್ಯವೆಸಗಿದ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ತಂಡಗಳನ್ನು ಕಳುಹಿಸಲಾಗಿದೆ ಎಂದು ಎಸ್‌ಎಸ್‌ಪಿ ಅಂಕುರ್ ಗುಪ್ತಾ ಹೇಳಿದ್ದಾರೆ, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಪರಾಧ ನಡೆದ ಸ್ಥಳವೂ ಜಿಲ್ಲಾಕೇಂದ್ರದಿಂದ 45 ಕಿಲೋ ಮೀಟರ್ ದೂರದಲ್ಲಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ತೇಜ್‌ಪಾಲ್ ವೈಯಕ್ತಿಕ ಕಾರಣಗಳಿಗಾಗಿ ಜಗ್ರಾಂವ್‌ಗೆ ಬಂದಿದ್ದರು ಮತ್ತು ಹರಿ ಸಿಂಗ್ ಆಸ್ಪತ್ರೆ ರಸ್ತೆಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಐದರಿಂದ ಆರು ಜನರ ಗುಂಪು ಅವರನ್ನು ತಡೆದಿದೆ. ಮೊದಲು ದಾಳಿಕೋರರು ಅವರನ್ನು ಕ್ರೂರವಾಗಿ ಥಳಿಸಿದ್ದಾರೆ. ಈ ಗಲಾಟೆಯ ಸಮಯದಲ್ಲಿ, ಅವರಲ್ಲಿ ಒಬ್ಬನು ರಿವಾಲ್ವರ್ ಹೊರತೆಗೆದು ಅವರ ಎದೆಗೆ ಗುಂಡು ಹಾರಿಸಿದನು ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಿದ್ದ 26 ವರ್ಷ ಭಾರತೀಯ ಯುವಕ ಪೊಲೀಸರ ಗುಂಡೇಟಿಗೆ ಬಲಿ

ಇದನ್ನೂ ನೋಡಿ: ನಿಶ್ಚಿತಾರ್ಥಕ್ಕೆ ಕೆಲ ದಿನಗಳಿದ್ದಾಗ ವಧುವಿನ ತಂದೆ ಜೊತೆ ಓಡಿ ಹೋದ ವರನ ತಾಯಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಜುರಿ ಬಳಿಕ ಮರಳಿದ ಶ್ರೇಯಸ್ ಅಯ್ಯರ್‌ನ್ನು ತಂಡದಿಂದಲೇ ಕಿಕೌಟ್‌ಗೆ ಯತ್ನಿಸಿದ ನಾಯಿ
WPL: ಕೊನೇ 4 ಎಸೆತದಲ್ಲಿ 20 ರನ್‌ ಸಿಡಿಸಿ ಸ್ಮೃತಿ ಮಂಧನಾ ಆರ್‌ಸಿಬಿಗೆ ಮಹಾ ಗೆಲುವು ತಂದ ನಡಿನ್‌ ಡಿ ಕ್ಲರ್ಕ್‌!