
ಮೈಸೂರು: ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್(ಐಐಪಿಕೆಎಲ್)ನ ಚೊಚ್ಚಲ ಆವೃತ್ತಿಯ 17 ಪಂದ್ಯಗಳು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮೇ 24ರಿಂದ 29ರವರೆಗೆ ನಡೆಯಲಿದೆ.
ಮೇ 13ರಿಂದ ಜೂ.4ರವರೆಗೆ ಐಐಪಿಕೆಎಲ್ ಪಂದ್ಯಾವಳಿಯು ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಮೇ 13ರಿಂದ 21ರವರೆಗೆ 20 ಪಂದ್ಯಗಳು ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿ, ಮೇ 24ರಿಂದ 29ರವರೆಗೆ ಮೈಸೂರಿನಲ್ಲಿ 17 ಪಂದ್ಯಗಳು ಹಾಗೂ ಜೂ.1ರಿಂದ 4ರವರೆಗೆ ಫೈನಲ್ ಸೇರಿದಂತೆ 7 ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಂ.ವಿ. ಪ್ರಸಾದ್ ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರೊ ಕಬಡ್ಡಿಗೂ ಮುನ್ನ ಬಂಡಾಯ ಲೀಗ್ ಆರಂಭ
ಪಂದ್ಯಾವಳಿಯಲ್ಲಿ ಬೆಂಗಳೂರು ರೈನೋಸ್, ಚೆನ್ನೈ ಚಾಲೆಂಜರ್ಸ್, ದಿಲೇರ್ ಡೆಲ್ಲಿ, ತೆಲುಗು ಬುಲ್ಸ್, ಪುಣೆ ಪ್ರೈಡ್, ಹರ್ಯಾಣ ಹೀರೋಸ್, ಮುಂಬೈ ಚೆ ರಾಜೆ ಹಾಗೂ ರಾಜಸ್ಥಾನ ರಜಪೂತ್ಸ್ ತಂಡಗಳು ಭಾಗವಹಿಸಲಿದ್ದು, ಒಟ್ಟು 44 ಪಂದ್ಯಗಳು ನಡೆಯಲಿವೆ. 160ಕ್ಕೂ ಹೆಚ್ಚು ಆಟಗಾರರು ಟೂರ್ನಿಯಲ್ಲಿ ಆಡಲಿದ್ದಾರೆ.
ಬಂಡಾಯ ಕಬಡ್ಡಿ ಲೀಗ್‌ಗೆ ಭರ್ಜರಿ ಪ್ರತಿಕ್ರಿಯೆ!
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.