ಧವನ್ ಹೋರಾಟದ ಮುಂದೆ ಮಂಕಾಯ್ತು ರಸೆಲ್ ಅಬ್ಬರ- ಡೆಲ್ಲಿಗೆ 7 ವಿಕೆಟ್ ಗೆಲುವು!

Published : Apr 12, 2019, 11:49 PM IST
ಧವನ್ ಹೋರಾಟದ ಮುಂದೆ ಮಂಕಾಯ್ತು ರಸೆಲ್ ಅಬ್ಬರ- ಡೆಲ್ಲಿಗೆ 7 ವಿಕೆಟ್ ಗೆಲುವು!

ಸಾರಾಂಶ

ಶಿಖರ್ ಧವನ್ ಅದ್ಬುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗೆಲುವು ಸಾಧಿಸಿದೆ. ಕೋಲ್ಕತಾ ತವರಿನಲ್ಲಿ ಕೆಕೆಆರ್ ಸಂಭ್ರಮಕ್ಕೆ ಡೆಲ್ಲಿ ಬ್ರೇಕ್ ಹಾಕಿದ್ದು ಹೇಗೆ? ಇಲ್ಲಿದೆ ವಿವರ. 

ಕೋಲ್ಕತಾ(ಏ.12): ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಓಟ ಮುಂದುವರಿಸಿದರೆ, ಚೆನ್ನೈ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಡೆಲ್ಲಿ ವಿರುದ್ಧವೂ ಮುಗ್ಗರಿಸಿದೆ. ಆ್ಯಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್, ಶುಭ್‌ಮಾನ್ ಗಿಲ್ ಹೋರಾಟದ ಅರ್ಧಶತಕ ವ್ಯರ್ಥವಾಯ್ತು. ಶಿಖರ್ ಧವನ್ ಸಿಡಿಸಿದ ಅಜೇಯ 97 ರನ್ ನೆರವಿನಿಂದ ಡೆಲ್ಲಿ 7 ವಿಕೆಟ್ ಗೆಲುವು ಸಾಧಿಸಿತು.

ಗೆಲುವಿಗೆ 179 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್  ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ ಕೇಲಲ 14 ರನ್ ಸಿಡಿಸಿ ಔಟಾದರು. ಆರಂಭಿಕ ಯಶಸ್ಸು ಪಡೆದ ಕೆಕೆಆರ್, ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಕಳೆದ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಶಿಖರ್ ಧವನ್, ಕೆಕೆಆರ್ ತಂಡದ ಲೆಕ್ಕಾಚಾರ ಉಲ್ಟಾ ಮಾಡಿದರು.  ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಗೂ ಮುನ್ನ ಧವನ್ ಫಾರ್ಮ್‌ಗೆ ಮರಳಿರೋದು ಟೀಂ ಇಂಡಿಯಾ ಅಭಿಮಾನಿಗಳ ಸಮಾಧಾನಕ್ಕೆ ಕಾರಣವಾಯಿತು.

ಧವನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದರೆ. ಇತ್ತ, ರಿಷಬ್ ಪಂತ್ ಉತ್ತಮ ಸಾಥ್ ನೀಡಿದರು. ಹಾಫ್ ಸೆಂಚುರಿ ಬಳಿಕವೂ ಧವನ್ ಅಬ್ಬರ ಮುಂದುವರಿಯಿತು. ಪಂತ್ 46 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಡೆಲ್ಲಿ ಗೆಲುವಿನ ಹಾದಿ ಸುಗುಮಗೊಂಡಿತ್ತು. ಇತ್ತ ಡೆಲ್ಲಿ ಗೆಲುವಿಗೆ 6 ರನ್ ಅವಶ್ಯಕತೆ ಇತ್ತು. ಧವನ್ ಶತಕಕ್ಕೆ ಕೇವಲ 3 ರನ್ ಬೇಕಿತ್ತು. ಆದರೆ ಕ್ರೀಸ್‌ಗೆ ಬಂದ ಕೊಲಿನ್ ಇನ್‌ಗ್ರಾಂ ಭರ್ಜರಿ ಸಿಕ್ಸರಿ  ಸಿಡಿಸಿ ಡೆಲ್ಲಿಗೆ 7 ವಿಕೆಟ್ ಗೆಲುವು ತಂದುಕೊಟ್ಟರು. ಇತ್ತ ಧವನ್ ಅಜೇಯ 97 ರನ್ ಸಿಡಿಸಿ ಶತಕ ಪೂರೈಸಲು ಸಾಧ್ಯವಾಗಲಿಲ್ಲ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?