
ನವದೆಹಲಿ(ಮಾ.14): ಐಪಿಎಲ್ ಪಂದ್ಯಗಳನ್ನು ರಾತ್ರಿ 8ರ ಬದಲು 7ಕ್ಕೆ ಆರಂಭಿಸುವಂತೆ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋಟ್ಸ್‌ರ್ ವಾಹಿನಿಯ ಮನವಿಯನ್ನು ಬಿಸಿಸಿಐ ತಿರಸ್ಕರಿಸಲು ಮುಂಬೈ ಇಂಡಿಯನ್ಸ್ ತಂಡ ಕಾರಣ ಎಂದು ತಿಳಿದುಬಂದಿದೆ. ಈ ಮೂಲಕ ಐಪಿಎಲ್ ಪಂದ್ಯದ ಸಮಯದಲ್ಲಿ ಯಾವುದೇ ಬದಲಾವಣೆ ಆಗದಂತೆ ನೋಡಿಕೊಳ್ಳುವಲ್ಲಿ ಮುಂಬೈ ಫ್ರಾಂಚೈಸಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಈ 2 IPL ತಂಡಗಳ ತವರು ಪಂದ್ಯಗಳು ಶಿಫ್ಟ್..?
ಒಂದು ಗಂಟೆ ಮೊದಲು ಆರಂಭಿಸಿದರೆ ರಾತ್ರಿ 11ರ ವೇಳೆಗೆ ಪಂದ್ಯ ಮುಕ್ತಾಯೊಳ್ಳಲಿದೆ. ಟೀವಿ ವೀಕ್ಷಕರ ಸಂಖ್ಯೆ ಕಡಿತಗೊಳ್ಳುವುದಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಸ್ಟಾರ್ ವಾಹಿನಿ ಮನವಿ ಸಲ್ಲಿಸಿತ್ತು. ಆದರೆ ಮುಂಬೈ ತಂಡದ ಮಾಲೀಕರು ಪಂದ್ಯದಲ್ಲಿ ಸಮಯದಲ್ಲಿ ಬದಲಾವಣೆ ಮಾಡಬಾರದು ಎಂದು ಬಿಸಿಸಿಐ ಮೇಲೆ ಒತ್ತಡ ಹೇರಿದರು ಎನ್ನಲಾಗಿದೆ.
ಇದನ್ನೂ ಓದಿ: ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!
ಫ್ರಾಂಚೈಸಿ ಒತ್ತಡಕ್ಕೆ ಮಣಿದ ಸ್ಟಾರ್ ಸ್ಪೋರ್ಟ್ ಪಂದ್ಯ ಈ ಹಿಂದಿನ ಆವೃತ್ತಿಗಳಂತೆ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ದಿನದಲ್ಲಿ 2 ಪಂದ್ಯವಿದ್ದಾಗ 4 ಗಂಟೆ ಆರಂಭವಾಗೋ ಪಂದ್ಯ ಮುಕ್ತಾಯವಾಗೋ ಮೊದಲೇ 2ನೇ ಪಂದ್ಯ ಆರಂಭಗೊಳ್ಳಲಿದೆ. ಇದರಿಂದ ಅಭಿಮಾನಿಗಳು 2ನೇ ಪಂದ್ಯದ ಆರಂಭಿಕ ಹಂತ ಅಥವಾ ಮೊದಲ ಪಂದ್ಯದ ಕೊನೆಯ ಹಂತ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಮುಂಬೈ ಫ್ರಾಂಚೈಸಿ ತನ್ನ ವಾದ ಮುಂದಿಟ್ಟಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.