ಭಾರತದಲ್ಲಿ ಪಾಕ್‌ ಟಿ20 ಲೀಗ್‌ ಪ್ರಸಾರ ಪುನಾರಂಭ!

By Web DeskFirst Published Mar 14, 2019, 9:18 AM IST
Highlights

ಪುಲ್ವಾಮಾ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. ಭಯೋತ್ಪಾದನಾ ದಾಳಿಯಿಂದ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರಗಳನ್ನು ಭಾರತ ಸ್ಥಗಿತಗೊಳಿಸಿತು. ಇದರ ಬೆನ್ನಲ್ಲೇ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ಕೂಡ ಭಾರತದಲ್ಲಿ ನಿರ್ಬಂಧಿಸಲಾಯಿತು. ಇದೀಗ ಯಾವುದೇ ಸೂಚನೆ ಇಲ್ಲದೆ ಪ್ರಸಾರ ಆರಂಭಗೊಂಡಿದೆ.
 

ನವದೆಹಲಿ(ಮಾ.14): ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟಿ20 ಟೂರ್ನಿಯ ಪ್ರಸಾರ ಪುನಾರಂಭಗೊಂಡಿದೆ. ಟೂರ್ನಿ ಆರಂಭಗೊಂಡು 3 ದಿನಗಳ ಬಳಿಕ ಪ್ರಸಾರವನ್ನು ಡಿಸ್ಪೋರ್ಟ್ಸ್ ವಾಹಿನಿ ಸ್ಥಗಿತಗೊಳಿಸಿತ್ತು.ಆದರೆ ಮಂಗಳವಾರ ದಿಢೀರನೆ ಪಂದ್ಯಗಳ ಪ್ರಸಾರವನ್ನು ಡಿಸ್ಪೋರ್ಟ್ಸ್ ಆರಂಭಿಸಿದೆ. 

ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಬಿಗ್ ಶಾಕ್ ನೀಡಿದ IMG ರಿಲಯನ್ಸ್!

 ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಪ್ರಕಟಣೆ ಇಲ್ಲವೇ ಹೇಳಿಕೆ ನೀಡಿಲ್ಲ. 4ನೇ ಆವೃತ್ತಿಯ ಪಿಎಸ್‌ಎಲ್‌ ಪ್ಲೇ-ಆಫ್‌ ಹಂತ ತಲುಪಿದ್ದು, ಕರಾಚಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಪುಲ್ವಾಮಾ ದಾಳಿ ಬೆನ್ನಲ್ಲೇ ಡಿ ಸ್ಪೋರ್ಟ್ ವಾಹಿನಿ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರ ಸ್ಥಗಿತಗೊಳಿಸಿ ಆರ್ಥಿಕ ಹೊಡೆತ ನೀಡಿತ್ತು. 

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಶಾಕ್- PSL ಟೂರ್ನಿಯಿಂದ ಡಿವಿಲಿಯರ್ಸ್ ವಾಪಾಸ್!

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ಭಯೋತ್ಪಾದಕ ನಡೆಸಿದ ಬಾಂಬ್ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರಗಳನ್ನ ಭಾರತ ಸ್ಥಗಿತಗೊಳಿಸಿತ್ತು.

click me!