
ಶಿಮ್ಲಾ(ಏ.21): ಎರಡು ದಿನಗಳ ಕಾಲ ನಡೆಯಲಿರುವ 10ನೇ ಆವೃತ್ತಿಯ ಮೌಂಟೇನ್ ಬೈಕಿಂಗ್(ಎಂಟಿಬಿ ಶಿಮ್ಲಾ) ರೇಸ್‌ಗೆ ಶುಕ್ರವಾರ ಚಾಲನೆ ಸಿಗಲಿದ್ದು, 88 ರೇಸರ್‌ಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಮ್ಲಾದ ಐತಿಹಾಸಿಕ ರಿಡ್ಜ್ ಗ್ರೌಂಡ್‌ನಲ್ಲಿ ಇಂದು ಸಂಜೆ 4 ಗಂಟೆಗೆ ಹಿಮಾಚಲಪ್ರದೇಶ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಮಂತ್ರಿ ಅನಿರುದ್ದ್ ಸಿಂಗ್ ಠಾಕೂರ್ ಚಾಲನೆ ನೀಡಲಿದ್ದಾರೆ.
ಪ್ರತಿದಿನ ಸ್ಪರ್ಧಾಳುಗಳು ಸುಮಾರು 65 ಕಿಲೋ ಮೀಟರ್ ದೂರ ಕ್ರಮಿಸಲಿದ್ದಾರೆ. ಮೊದಲ ದಿನ ರೇಸರ್‌ಗಳು ರಿಡ್ಜ್ ಮೈದಾನದಿಂದ ಹೊರಟು ಕುರ್ಫಿ ಮಾರ್ಗವಾಗಿ ಮಶೋಬ್ರಾ ತಲುಪಲಿದ್ದಾರೆ. ಇನ್ನು ಎರಡನೇ ದಿನ ಪೊಟ್ಟರ್ ಹಿಲ್ಸ್‌ನಲ್ಲಿ ರೇಸ್ ಅಂತ್ಯವಾಗಲಿದೆ. ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿರುವ 88 ಸ್ಪರ್ಧಾಳುಗಳಲ್ಲಿ 11 ಮಂದಿ ಮಹಿಳಾ ಸ್ಪರ್ಧಾಳುಗಳು ಇದ್ದು, ಇದು ಒಳ್ಳೆಯ ಸಂಖ್ಯೆಯಾಗಿದೆ ಎಂದು ಎಂಟಿಬಿ ಶಿಮ್ಲಾ ಆಯೋಜಕರಾದ ಆಶೀಸ್ ಸೂದ್, ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ಗೆ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಎಲ್ಲಾ ರೀತಿಯ ಜನರು ಪಾಲ್ಗೊಳ್ಳುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನವರು, ವಿದ್ಯಾರ್ಥಿ ಸಮುದಾಯದವರು, ಬ್ಯುಸಿನೆಸ್ ಕ್ಲಾಸ್‌ನವರು ಹಾಗೂ ವೃತ್ತಿಪರರು ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಎಂಟಿಬಿ ಶಿಮ್ಲಾ ಆಯೋಜಕರಾದ ಆಶೀಸ್ ಸೂದ್ ತಿಳಿಸಿದ್ದಾರೆ.
ರಾಜಕೀಯಕ್ಕೆ ಸಿಎಸ್‌ಕೆ ಸ್ಟಾರ್ ಕ್ರಿಕೆಟಿಗ ಅಂಬಟಿ ರಾಯುಡು ಎಂಟ್ರಿ? ಯಾವ ಪಕ್ಷ?
ಈ ರೇಸ್‌ನಲ್ಲಿ ಹಲವು ಪ್ರಖ್ಯಾತ ವ್ಯಕ್ತಿಗಳು ಪಾಲ್ಗೊಳ್ಳುತ್ತಿದ್ದು, 3 ಬಾರಿ ಚಿನ್ನದ ಪದಕ ವಿಜೇತೆ ಹಾಗೂ ನ್ಯಾಷನಲ್ ಚಾಂಪಿಯನ್ ಸುನಿತಾ ಶ್ರೇಷ್ಠ, ಹೀರೋ ಆಕ್ಷನ್ ಟೀಂ ನ ಆಕ್ಷಿತ್ ಗೌರ್ ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಆಕ್ಷಿತ್ ಗೌರ್, ಮಾಜಿ ಅಂಡರ್ 19 ನ್ಯಾಷನಲ್ ಗೋಲ್ಡ್ ಮೆಡಲಿಸ್ಟ್ ಎನಿಸಿಕೊಂಡಿದ್ದಾರೆ. ಇನ್ನು ಎಸ್‌ಎಸ್‌ಬಿ ಬಿಸೈಡ್ಸ್‌ನ ಐಸಾಕ್ ರೈ, ಅಸ್ಸಾಂ ತಂಡದ ಮೌಂಟೇನ್ ಬೈಕಿಂಗ್ ಚಾಂಪಿಯನ್ ಪ್ರಹ್ಲಾದ್, ಚೆನ್ನೈ ಹಾಗೂ ಜೈಪುರ ತಂಡದ ರೇಸರ್‌ಗಳು ಪಾಲ್ಗೊಳ್ಳುತ್ತಿದ್ದಾರೆ.
ಇನ್ನು 42 ವರ್ಷದ ಚಾಂಪಿಯನ್ ರೈಡರ್ ಹಾಗೂ ಪರಿಸರವಾದಿ ಅನುಪಮಾ ಕೂಡಾ ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಇದೇ ವೇಳೆ ಆಯೋಜಕರಾದ ಆಶೀಸ್ ಸೂದ್, ಹಿಮಾಚಲ ಪ್ರದೇಶ, ಡೆಲ್ಲಿ, ಗೋವಾ, ತಮಿಳುನಾಡು, ರಾಜಸ್ಥಾನ, ಉತ್ತರಖಂಡ್, ಮಹಾರಾಷ್ಟ್ರ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್, ಚಂಡಿಘಡ, ಅಸ್ಸಾಂ ಹೀಗೆ ದೇಶದ 12 ರಾಜ್ಯಗಳಿಂದ ಸ್ಪರ್ಧಾಳುಗಳು ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.