
ನವದೆಹಲಿ[ಜು.25]: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಯುವ ಆಟಗಾರ ಶುಭ್‌ಮನ್ ಗಿಲ್ ಭಾರತ ತಂಡಕ್ಕೆ ಪರಿಗಣಿಸದೆ ಇರುವುದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಂಡೀಸ್ ‘ಎ’ ಸರಣಿಯಲ್ಲಿ ಶುಭ್‌ಮನ್ ಉತ್ತಮ ಪ್ರದರ್ಶನ ತೋರಿದ್ದರು. ಆದರೂ ಭಾರತ ತಂಡಕ್ಕೆ ಶುಭ್‌ಮನ್ ರನ್ನು ಆಯ್ಕೆ ಸಮಿತಿ ಪರಿಗಣಿಸಿಲ್ಲ. ಕೇದಾರ್ ಜಾದವ್ ಬದಲಿಗೆ ಶುಭ್‌ಮನ್‌ಗೆ ಸ್ಥಾನ ನೀಡಬಹುದಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೂಡ ಕೇವಲ ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.
ಗಿಲ್‌ಗಿರುವ 10% ರಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ: ವಿರಾಟ್ ಕೊಹ್ಲಿ!
ನ್ಯೂಜಿಲೆಂಡ್ ಪ್ರವಾಸದ ವೇಳೆ ಕೆ.ಎಲ್ ರಾಹುಲ್ ಅವರನ್ನು ತಂಡದಿಂದ ಹೊರಗಿಟ್ಟಾಗ ಶುಭ್’ಮನ್ ಗಿಲ್’ಗೆ ತಂಡಕ್ಕೆ ಬುಲಾವ್ ಬಂದಿತ್ತು. ಇನ್ನು ವಿಂಡೀಸ್ ’ಎ’ ವಿರುದ್ಧದ ಅನಧಿಕೃತ ಸರಣಿಯಲ್ಲಿ 3 ಅರ್ಧಶತಕ ಸಹಿತ ಭಾರತ ’ಎ’ ಪರ 218 ರನ್ ಸಿಡಿಸಿದ್ದರು. ಇದರ ಹೊರತಾಗಿಯೂ ಗಿಲ್‌ಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಅವಕಾಶ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.