ವಿದೇಶಿ ಏರ್‌ಪೋರ್ಟ್‌ನಲ್ಲಿ ವಾಸೀಂ ಅಕ್ರಂಗೆ ಅವಮಾನ..!

By Web DeskFirst Published Jul 25, 2019, 1:35 PM IST
Highlights

ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ ಅವರನ್ನು ಇಂಗ್ಲೆಂಡ್ ಏರ್‌ಪೋರ್ಟ್‌ ಸಿಬ್ಬಂದಿ ಅಮಾನವೀಯವಾಗಿ ನಡೆಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮ್ಯಾಂಚೆಸ್ಟರ್‌[ಜು.25]: ಇನ್ಸುಲಿನ್‌ ಔಷಧ ಇಟ್ಟುಕೊಂಡು ವಿಮಾನ ಹತ್ತಲು ಹೊರಟಿದ್ದ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ವಾಸೀಂ ಅಕ್ರಂ ಅವರನ್ನು ಬ್ರಿಟನ್‌ನ ಏರ್‌ಪೋರ್ಟ್‌ ಅಧಿಕಾರಿಗಳು ತಡೆದು ತೀವ್ರ ವಿಚಾರಣೆ ನಡೆಸಿದ ಪ್ರಸಂಗ ನಡೆದಿದೆ. 

ರೋಹಿತ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್ ನೀಡಿದ ಪಾಕ್ ಮಾಜಿ ನಾಯಕ!

ಇನ್ಸುಲಿನ್‌ ತುಂಬಿಕೊಂಡಿದ್ದ ಡಬ್ಬವನ್ನು ಹೊರಗೆ ತೆಗೆದು ಚೆಲ್ಲಾಡಿದ್ದಾರೆ. ಭದ್ರತಾ ಅಧಿಕಾರಿಗಳು ನನ್ನ ಜತೆ ಕೆಟ್ಟದಾಗಿ ನಡೆದುಕೊಂಡರು. ನಾನು ಇನ್ಸುಲಿನ್‌ ಔಷಧ ಇಟ್ಟುಕೊಂಡು ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದೇನೆ. ಆದರೆ ಎಲ್ಲೂ ಈ ರೀತಿ ಅನುಭವ ನನಗಾಗಿಲ್ಲ. ಈ ಘಟನೆ ನನಗೆ ಮಾಡಿದ ಅವಮಾನ ಎಂದು ವಾಸೀಂ ಅಕ್ರಂ ಹೇಳಿಕೊಂಡಿದ್ದಾರೆ.

Very disheartened at Manchester airport today,I travel around the world with my insulin but never have I been made to feel embarrassed.I felt very humiliated as I was rudely questioned & ordered publicly to take my insulin out of its travel cold-case & dumped in to a plastic bag pic.twitter.com/UgW6z1rkkF

— Wasim Akram (@wasimakramlive)

I do not believe I should have been treated differently from anyone else. I just believe there should be a standard of care when dealing with all people. I understand there are proper safety precautions but that doesn’t mean people should be humiliated whilst undergoing them.

— Wasim Akram (@wasimakramlive)

53 ವರ್ಷದ ಅಕ್ರಂ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿ ವೀಕ್ಷಕ ವಿವರಣೆಗಾಗಿ ಲಂಡನ್ ತೆರಳಿದ್ದರು. ಪಾಕಿಸ್ತಾನ ಪರ 104 ಟೆಸ್ಟ್ ಪಂದ್ಯಗಳನ್ನಾಡಿರುವ ಎಡಗೈ ವೇಗಿ 414 ವಿಕೆಟ್ ಪಡೆದಿದ್ದಾರೆ. ಇನ್ನು 356 ಪಂದ್ಯಗಳಲ್ಲಿ 502 ವಿಕೆಟ್ ಪಡೆದಿದ್ದರು.  
 

click me!