ಅತ್ಯುತ್ತಮ ನಾಯಕ; ಸಯ್ಯದ್ ಕಿರ್ಮಾನಿ ಆಯ್ಕೆಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

By Web Desk  |  First Published Sep 5, 2019, 4:05 PM IST

ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು? ಈ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಉತ್ತರಿಸಿದ್ದಾರೆ. ಕಿರ್ಮಾನಿ ಪ್ರಕಾರ ಭಾರತದ ಶ್ರೇಷ್ಠ ನಾಯಕ ವಿರಾಟ್ ಕೊಹ್ಲಿ ಅಲ್ಲ, ಮತ್ಯಾರು? ಇಲ್ಲಿದೆ ವಿವರ.


ಬೆಂಗಳೂರು(ಸೆ.05): ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಯಾರು? ಈ ಪ್ರಶ್ನೆ ಹಾಗೂ ಚರ್ಚೆ ಭಾರತದ ಕ್ರಿಕೆಟ್ ಹುಟ್ಟಿನಿಂದಲೂ ಇದೆ. ಕೆಲ ನಾಯಕರ ಹೆಸರುಗಳು ಮುಂಚೂಣಿಯಲ್ಲಿದೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ  ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಯಾರು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ. ಕಿರ್ಮಾನಿ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ.

ಇದನ್ನೂ ಓದಿ: ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

Latest Videos

ಟೀಂ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಎಂ.ಎಸ್.ಧೋನಿ.  ತಂಡವನ್ನು ಮುನ್ನಡೆಸುವುದು, ನಿರ್ಧಾರ, ಫಲಿತಾಂಶ, ತಂಡದ ಪ್ರದರ್ಶನ, ಮನೋಭಾವ ಸೇರಿದಂತೆ ಎಲ್ಲದರಲ್ಲೂ ಎಂ.ಎಸ್.ಧೋನಿ ಅತ್ಯುತ್ತಮ ಎಂದು ಕಿರ್ಮಾನಿ ಹೇಳಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ನಾಯಕನಾಗಲು ಇನ್ನು ಹೆಚ್ಚಿನ ಸಮಯ ಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!

ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿ ಗೆಲ್ಲೋ ಮೂಲಕ ಕೊಹ್ಲಿ 28 ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿದರು. ಈ ಮೂಲಕ 27 ಟೆಸ್ಟ್ ಪಂದ್ಯ ಗೆದ್ದ ಧೋನಿ ದಾಖಲೆ ಅಳಿಸಿಹಾಕಿದ್ದಾರೆ. ನಾಯಕಾಗಿ ಕೊಹ್ಲಿ ಬ್ಯಾಟಿಂಗ್‌ನಲ್ಲೂ ದಿಟ್ಟ ಹೋರಾಟ ನೀಡುತ್ತಿದ್ದಾರೆ. ಆದರೆ ನಾಯಕತ್ವ ವಿಚಾರದಲ್ಲಿ ಧೋನಿಯೇ ನಂ.1 ಎಂದು ಕಿರ್ಮಾನಿ ಹೇಳಿದ್ದಾರೆ.

ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!