ಕಾಮ​ನ್‌ವೆಲ್ತ್‌ನಲ್ಲಿ ಶೂಟಿಂಗ್‌: ಬ್ರಿಟನ್‌ಗೆ ರಿಜಿಜು ಪತ್ರ

Published : Sep 05, 2019, 03:54 PM IST
ಕಾಮ​ನ್‌ವೆಲ್ತ್‌ನಲ್ಲಿ ಶೂಟಿಂಗ್‌: ಬ್ರಿಟನ್‌ಗೆ ರಿಜಿಜು ಪತ್ರ

ಸಾರಾಂಶ

2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ಕೈಬಿಟ್ಟಿರುವುದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ಇದೀಗ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಬ್ರಿಟನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ನವದೆಹಲಿ[ಸೆ.05]: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್‌ ಸೇರ್ಪಡೆ ಮಾಡುವಂತೆ ಬ್ರಿಟನ್‌ನ ಕ್ರೀಡಾ ಕಾರ್ಯದರ್ಶಿ ನಿಕಿ ಮಾರ್ಗನ್‌ಗೆ ಕೇಂದ್ರ ಕ್ರೀಡಾ ಸಚಿವ ಕಿರೆನ್‌ ರಿಜಿಜು ಪತ್ರ ಬರೆದಿದ್ದಾರೆ. 

ಶೂಟಿಂಗ್‌ ವಿಶ್ವಕಪ್‌: ಭಾರ​ತಕ್ಕೆ ಅಗ್ರ​ಸ್ಥಾ​ನ!

‘1966ರ ಗೇಮ್ಸ್‌ನಲ್ಲಿ ಶೂಟಿಂಗ್‌ ಸೇರ್ಪಡೆಗೊಂಡಿದ್ದು, 1974ರ ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಆಯೋಜಿಸುತ್ತ ಬರಲಾಗಿದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಪತ್ರ ಬರದಿದ್ದಾರೆ. ಒಟ್ಟು 240 ಕೋಟಿ ಜನಸಂಖ್ಯೆ ಹೊಂದಿರುವ 53 ರಾಷ್ಟ್ರಗಳು ಕಾಮನ್ ವೆಲ್ತ್ ಗೇಮ್ಸ್’ನಲ್ಲಿ ಪಾಲ್ಗೊಳ್ಳುತ್ತಿವೆ. ಇದರಲ್ಲಿ ಅರ್ಧದಷ್ಟು ಜನಸಂಖ್ಯೆ ಭಾರತದಲ್ಲಿಯೇ ಇದೆ ಎಂದು ರಿಜಿಜು ಪತ್ರದಲ್ಲಿ ಉಲ್ಲೇಕಿಸಿದ್ದಾರೆ.

ಕಾಮನ್‌ವೆಲ್ತ್‌ಗೆ ಬಹಿಷ್ಕಾರ: ಐಒಎಗೆ ಹಿನ್ನಡೆ!

2022ರ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಬಹಿಷ್ಕರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಮನವಿ ಮಾಡಿತ್ತು.   

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್