ಮಗಳು ಝೀವಾಳೊಂದಿಗೆ ಮಣ್ಣಲ್ಲಿ ಧೋನಿ ಆಟ

By Web Desk  |  First Published Jan 1, 2019, 1:33 PM IST

ಧೋನಿ ಬಿಡುವಿನ ವೇಳೆಯಲ್ಲಿ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಧೋನಿ ಕುಟುಂಬ ಸಮೇತರಾಗಿ ಚೆನ್ನೈ ಬೀಚ್‌ಗೆ ತೆರಳಿದ್ದರು. ಈ ವೇಳೆ ಝೀವಾಳೊಂದಿಗೆ ಮರಳಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದರು.


ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ತಮ್ಮ ಮಗಳು ಝೀವಾಳೊಂದಿಂಗೆ ಚೆನ್ನೈ ಬೀಚ್‌ನ ಮರಳಿನಲ್ಲಿ ಆಟ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. 

 
 
 
 
 
 
 
 
 
 
 
 
 

As a kid whenever v got sand this was one thing v would do for sure

Tap to resize

Latest Videos

A post shared by M S Dhoni (@mahi7781) on Dec 30, 2018 at 4:26am PST

ಗುಡ್ ಬೈ 2018: ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳಿವು

ಧೋನಿ ಬಿಡುವಿನ ವೇಳೆಯಲ್ಲಿ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಧೋನಿ ಕುಟುಂಬ ಸಮೇತರಾಗಿ ಚೆನ್ನೈ ಬೀಚ್‌ಗೆ ತೆರಳಿದ್ದರು. ಈ ವೇಳೆ ಝೀವಾಳೊಂದಿಗೆ ಮರಳಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದರು. ಈ ದೃಶ್ಯವನ್ನು ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಬಿಯರ್ ಕುಡಿಯುತ್ತಾ ಬಸ್ ಇಳಿದ ಶಾಸ್ತ್ರಿ: ಟ್ವಿಟರಿಗರಿಂದ ಫುಲ್ ಕ್ಲಾಸ್

ಭಾರತ ತಂಡವು ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯ ಸಿಡ್ನಿಯಲ್ಲಿ ಜನವರಿ 03ರಿಂದ ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ಧೋನಿ ಟೀಂ ಇಂಡಿಯಾ ಕೂಡಿಕೊಳ್ಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 12ರಂದು ಸಿಡ್ನಿಯಲ್ಲಿ ಜರುಗಲಿದೆ. 

ಸತತ 3ನೇ ವರ್ಷ ವಿರಾಟ್ ಕೊಹ್ಲಿ ಗರಿಷ್ಠ ರನ್ ಸರದಾರ!

click me!