ಬ್ಯಾಡ್ಮಿಂಟನ್‌ಗೆ ವಿದಾಯ ಘೋಷಿಸಿದ ಚಾಂಗ್‌ ವೀ

By Web Desk  |  First Published Jun 14, 2019, 10:20 AM IST

ಮಲೇಷ್ಯಾದ ದಿಗ್ಗಜ ಬ್ಯಾಡ್ಮಿಂಟನ್‌ ಪಟು ಲೀ ಚಾಂಗ್‌ ವೀ ಗುರುವಾರ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. ಕ್ಯಾನ್ಸರ್ ಜತೆ ಹೋರಾಡಿ ಯಶಸ್ವಿಯಾಗಿರುವ ಮೂರು ಬಾರಿ ಒಲಿಂಪಿಕ್ ಪದಕ ವಿಜೇತ ಲೀ ಇದೀಗ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...


ಪುತ್ರಜಯಾ(ಮಲೇಷ್ಯಾ): 3 ಬಾರಿ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ, ಮಲೇಷ್ಯಾದ ದಿಗ್ಗಜ ಬ್ಯಾಡ್ಮಿಂಟನ್‌ ಪಟು ಲೀ ಚಾಂಗ್‌ ವೀ ಗುರುವಾರ ವೃತ್ತಿಬದುಕಿಗೆ ವಿದಾಯ ಘೋಷಿಸಿದರು. ಕಳೆದ ವರ್ಷ ಮೂಗಿನ ಕ್ಯಾನ್ಸರ್‌ಗೆ ತುತ್ತಾಗಿದ್ದ ಲೀ, ತೈವಾನ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. 

ಮಲೇಷ್ಯಾ ದಿಗ್ಗಜ ಶಟ್ಲರ್ ಚಾಂಗ್’ಗೆ ಮೂಗಿನ ಕ್ಯಾನ್ಸರ್

Latest Videos

undefined

ಬ್ಯಾಡ್ಮಿಂಟನ್‌ಗೆ ವಾಪಸಾಗಬೇಕು ಎನ್ನುವ ಗುರಿ ಹೊಂದಿದ್ದ 36 ವರ್ಷದ ಲೀ, ಅಭ್ಯಾಸದ ಕೊರತೆಯಿಂದಾಗಿ ತಮ್ಮ ವಾಪಸಾತಿಯನ್ನು ಮುಂದೂಡುತ್ತಾ ಬಂದರು. ಇದೀಗ ನಿವೃತ್ತಿ ಪಡೆದಿದ್ದಾರೆ. 2008, 2012, 2016ರ ಒಲಿಂಪಿಕ್ಸ್‌ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದ ಲೀ, 2008ರ ಆ.1ರಿಂದ 2012ರ ಜೂ.14ರ ವರೆಗೂ ಸತತವಾಗಿ 199 ವಾರಗಳ ಕಾಲ ವಿಶ್ವ ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು.

ಚಾಂಗ್‌ ವೀ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 3 ಬೆಳ್ಳಿ, 1 ಕಂಚು, ಸುದೀರ್‌ಮನ್‌ ಕಪ್‌ನಲ್ಲಿ ಕಂಚು, ಥಾಮಸ್‌ ಕಪ್‌ನಲ್ಲಿ ಒಂದು ಬೆಳ್ಳಿ, 4 ಕಂಚು, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 5 ಚಿನ್ನ, 1 ಬೆಳ್ಳಿ, ಏಷ್ಯನ್‌ ಗೇಮ್ಸ್‌ನಲ್ಲಿ 1 ಬೆಳ್ಳಿ, 4 ಕಂಚು, ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 2 ಕಂಚಿನ ಪದಕ ಜಯಿಸಿದ್ದರು.

click me!