ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

By Web Desk  |  First Published Jun 13, 2019, 6:02 PM IST

ಪ್ರಸ್ತುತ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿರುವ ಮೊಹಮ್ಮದ್ ಆಮೀರ್ ಕುರಿತಂತೆ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಅಚ್ಚರಿಯ ಹೇಳಿಕೆ ನೀಡುವುದರ ಮೂಲಕ ಸುದ್ದಿಯಾಗಿದ್ದಾರೆ. 


ಕರಾಚಿ: 2010ರ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಭಾರಿ ಮುಜುಗರ ತಂದಿತ್ತು. ಆ ವೇಳೆ ಏಕದಿನ ತಂಡದ ನಾಯಕರಾಗಿದ್ದ ಶಾಹಿದ್‌ ಅಫ್ರಿದಿ, ಫಿಕ್ಸಿಂಗ್‌ನಲ್ಲಿ ಸಿಲುಕಿದ್ದ ವೇಗಿ ಮೊಹಮದ್‌ ಆಮೀರ್‌ರ ಕಪಾಳಕ್ಕೆ ಹೊಡೆದು ಸತ್ಯ ಬಾಯ್ಬಿಡಿಸಿದ್ದರು ಎಂದು ಮಾಜಿ ಆಲ್ರೌಂಡರ್‌ ಅಬ್ದುಲ್‌ ರಜಾಕ್‌ ಹೇಳಿದ್ದಾರೆ. 

ಅಫ್ರಿದಿ ವಿರುದ್ಧ ಅಚ್ಚರಿಕೆಯ ಹೇಳಿಕೆ ನೀಡಿದ ನಿಷೇಧಿತ ಕ್ರಿಕೆಟಿಗ..!

Tap to resize

Latest Videos

undefined

ಖಾಸಗಿ ಟೀವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ರಜಾಕ್‌, ‘ನನ್ನನ್ನು ಕೊಠಡಿಯಿಂದ ಹೊರಕಳುಹಿಸಿದ ಅಫ್ರಿದಿ, ಆಮೀರ್‌ ಕಪಾಳಕ್ಕೆ ಬಾರಿಸಿದರು. ಫಿಕ್ಸಿಂಗ್‌ನಲ್ಲಿ ತೊಡಗಿರುವುದಾಗಿ ವೇಗಿ ತಪ್ಪೊಪ್ಪಿಕೊಂಡರು. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಪ್ರಕರಣವನ್ನು ಸರಿಯಾಗಿ ನಿರ್ವಹಿಸಿದ್ದರೆ ಐಸಿಸಿ ಮಧ್ಯಪ್ರವೇಶಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಇನ್ನು ಪ್ರಕರಣ ಬೆಳಕಿಗೆ ಬರುವುದಕ್ಕೆ ಮೊದಲಿನಿಂದಲೂ ಸಲ್ಮಾನ್‌ ಬಟ್‌ ಫಿಕ್ಸಿಂಗ್‌ ನಡೆಸುತ್ತಿದ್ದರು’ ಎಂದು ಹೇಳಿದ್ದಾರೆ.

ವಿಶ್ವಕಪ್ 2019: ಪಾಕಿಸ್ತಾನ ಅಂತಿಮ ತಂಡ ಪ್ರಕಟ-ಮೊಹಮ್ಮದ್ ಅಮೀರ್‌ಗೆ ಸ್ಥಾನ!

ಪಾಕಿಸ್ತಾನ ಕ್ರಿಕೆಟ್ ತಂಡ 2010ರಲ್ಲಿ ಭ್ರಷ್ಟಾಚಾರ ವಿಚಾರವಾಗಿ ಸಾಕಷ್ಟು ಸಂಕಷ್ಟ ಎದುರಿಸಿತ್ತು. ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ಪಾಕಿಸ್ತಾನದ ಕ್ರಿಕೆಟಿಗರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ಸ್ಪಾಟ್ ಫಿಕ್ಸಿಂಗ್ ನಡೆಸಿ ನಿಷೇಧಕ್ಕೆ ಗುರಿಯಾಗಿದ್ದರು.

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಆಮೀರ್ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೂರು ಪಂದ್ಯಗಳಿಂದ 10 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಆಮೀರ್ 30 ರನ್ ನೀಡಿ 5 ವಿಕೆಟ್ ಪಡೆದು ಗಮನ ಸೆಳೆದಿದ್ದರು.  

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...


 

click me!