
ನವದೆಹಲಿ: ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಭಾರತ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ವೇಳಾಪಟ್ಟಿ ಪ್ರಕಟಗೊಂಡಿದೆ. ಆ.3, ಆ.4ರಂದು ಅಮೆರಿಕದ ಫ್ಲೋರಿಡಾದಲ್ಲಿ ಮೊದಲೆರಡು ಟಿ20 ಪಂದ್ಯಗಳು ನಡೆಯಲಿವೆ. ಆ.6ರಂದು ಗಯಾನದಲ್ಲಿ 3ನೇ ಟಿ20 ನಡೆಯಲಿದೆ.
ಇನ್ನು ಆಗಸ್ಟ್ 8ರಂದು ಗಯಾನದಲ್ಲಿ ಮೊದಲ ಏಕದಿನ, ಆ.11, ಆ.14ರಂದು ಟ್ರಿನಿಡಾಸ್‌ನಲ್ಲಿ 2ನೇ ಹಾಗೂ 3ನೇ ಏಕದಿನ ಪಂದ್ಯ ನಡೆಯಲಿದೆ. ಆ.22-26ರ ವರೆಗೂ ಆ್ಯಂಟಿಗಾದಲ್ಲಿ ಮೊದಲ ಟೆಸ್ಟ್, ಆ.30-ಸೆ.3ರ ವರೆಗೂ ಜಮೈಕಾದಲ್ಲಿ 2ನೇ ಟೆಸ್ಟ್ ನಿಗದಿಯಾಗಿದೆ.
ವಿಶ್ವಕಪ್ 2019: ಭಾರತದ ಹ್ಯಾಟ್ರಿಕ್‌ಗೆ ವರುಣನ ಕೃಪೆ?
ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಜುಲೈ 14ರಂದು ಲಾರ್ಡ್ಸ್’ನಲ್ಲಿ ನಡೆಯಲಿದೆ. ವಿಶ್ವಕಪ್ ಟೂರ್ನಿ ಮುಗಿದು 15 ದಿನಗಳ ಬಳಿಕ ವಿರಾಟ್ ಪಡೆಗೆ ಕೆರಿಬಿಯನ್ ಟೆಸ್ಟ್ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.